ಶಿಗ್ಗಾಂವಿ;ಸವಣೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮುಸ್ಲಿಂ ಸಮುದಾಯದ ನಾಯಕರ ಜೊತೆಗೆ ಸಭೆ ನಡೆಸಿದ್ದು ಮುಸ್ಲಿಂ ಸಮುದಾಯದ ಜೊತೆ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ನಿಲ್ಲಿಸಬೇಡಿ ಎಂದು ಮುಸ್ಲಿಂ ಸಮುದಾಯದ ಮುಖಂಡರಿಗೆ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿವಿ ಮಾತು ಹೇಳಿದ್ದಾರೆ.
ಸಿಎಂ ಮಾತನಾಡಿ, ಯಾವ ಮಕ್ಕಳ ಕೈಯಲ್ಲಿ ಪೆನ್ನು ಇರಬೇಕಿತ್ತೋ, ಅವರ ಕೈಯಲ್ಲಿ ಪಾನಾ ಪಕ್ಕಡ್ ಇರುತ್ತಿತ್ತು. ನಿಮ್ಮ ಕಷ್ಟ ಅರ್ಥ ಆಗುತ್ತದೆ. ಆದರೆ, ಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ನಿಲ್ಲಿಸಬೇಡಿ ವಿದ್ಯಾನಿಧಿ ಯೋಜನೆ ಎಲ್ಲ ವರ್ಗದ ಸಮುದಾಯದ ಮಕ್ಕಳಿಗೆ ದೊರೆತಿದೆ. ಅಲ್ಪ ಸಂಖ್ಯಾತ ಸಮುದಾಯದವರು ಅನುಕೂಲ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿಯಿಂದ ಮೊಹಮ್ಮದ್ ಯೂಸುಫ್ ಸವಣೂರು ಅವರಿಗೆ ಟಿಕೆಟ್ ಘೋಷಿಸಿದ್ದ ಕಾಂಗ್ರೆಸ್ ಬಳಿಕ ಅವರನ್ನು ಬದಲಿಸಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ.ಲಿಂಗಾಯುತರ ಬಳಿಕ ಎರಡನೇ ಅತಿ ಹೆಚ್ಚು ಜನಸಂಖ್ಯೆ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮರದ್ದಾಗಿದೆ.ಈ ಮೊದಲು ಕೂಡ ನಾಲ್ವರು ಮುಸ್ಲಿಮ್ ಸಮುದಾಯದ ನಾಯಕರು ಇದೇ ಕ್ಷೇತ್ರದಲ್ಲಿ ಶಾಸಕರಾಗಿದ್ದರು.ಈ ಬಾರಿಯೂ ಭಾರೀ ಸ್ಪರ್ಧೆ ಇದೆ ಎನ್ನಲಾಗಿದೆ.ಇದರಿಂದ ಸಹಜವಾಗಿ ಬೊಮ್ಮಯಿ ಮುಸ್ಲಿಮರ ಮತಕ್ಕೆ ಕಣ್ಣಿಟ್ಟಿದ್ದಾರೆ.
ಮುಸ್ಲಿಮರ ಮೀಸಲಾತಿ ರದ್ದತಿ ಆದೇಶ, ಹಿಜಾಬ್, ಹಲಾಲ್ ವಿವಾದ, ವ್ಯಾಪಾರ ನಿಷೇಧ ಇವೆಲ್ಲಾ ಸಂಧರ್ಭದಲ್ಲಿ ಸಿಎಂ ಬೊಮ್ಮಯಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ಮೌನವಾಗಿದ್ದರು. ಏಕಪಕ್ಷೀಯವಾಗಿ ಬೊಮ್ಮಯಿ ನಡೆದುಕೊಂಡಿದ್ದಾರೆ ಎನ್ನುವುದು ಮುಸ್ಲಿಂ ಸಮುದಾಯದಲ್ಲಿರುವ ಅಸಮಾಧಾನ, ಇತ್ತೀಚೆಗೆ ಚುನಾವಣೆ ಹತ್ತಿರ ಬಂದಾಗ ಸಿಎಂ ಮಾತನಾಡಿ ಜನ ಹಿಜಾಬ್, ಹಲಾಲ್ ಮರೆತಿದ್ದಾರೆ ಎಂದು ಹೇಳಿದ್ದರು.ಇದೀಗ ಮುಸ್ಲಿಂ ಮತದ ಕಡೆಗೆ ಸಿಎಂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.