ಸುಪ್ರೀಂಕೋರ್ಟ್ ಮಾಜಿ ಸಿಜೆಐ ರಂಜನ್ ಗೊಗೊಯಿ ವಿರುದ್ಧವೇ ಮೊಕದ್ದಮೆ ದಾಖಲು; ಏನಿದು ಪ್ರಕರಣ?

ನವದೆಹಲಿ;ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸಂಸದ ರಂಜನ್ ಗೊಗೊಯಿ ವಿರುದ್ಧ ಮಾನನಷ್ಟ ಪ್ರಕರಣ ಹೂಡಲಾಗಿದೆ.

ಅಸ್ಸಾಂ ಸಾರ್ವಜನಿಕ ಕಾಮಗಾರಿಗಳ ಅಧ್ಯಕ್ಷ ಅಭಿಜಿತ್ ಶರ್ಮಾ ಅವರು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸಂಸದ ರಂಜನ್ ಗೊಗೊಯಿ ಅವರ ಆತ್ಮಕತೆ ಪುಸ್ತಕದ ಪ್ರಕಟಣೆಗೆ ತಡೆ ಹಾಗೂ ಒಂದು ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ರಂಜನ್ ಗೊಗೊಯಿ ಅವರ ಆತ್ಮಕಥೆ ‘ಜಸ್ಟೀಸ್ ಫಾರ್ ಎ ಜಡ್ಜ್’ನಲ್ಲಿ ತನ್ನ ವಿರುದ್ಧ ತಪ್ಪುದಾರಿಗೆಳೆಯುವ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾಗಿ ಗೊಗೊಯಿ ಹಾಗೂ ರೂಪಾ ಪಬ್ಲಿಕೇಶನ್ಸ್ ವಿರುದ್ಧ ಶರ್ಮಾ ಅವರು ಮೆಟ್ರೋ ಜಿಲ್ಲಾ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಗೊಗೊಯಿ ಅವರ ಆತ್ಮಕಥೆಯ ಪ್ರಕಟಣೆ, ವಿತರಣೆ ಅಥವಾ ತನ್ನ ವಿರುದ್ಧ ಯಾವುದೇ ಮಾನಹಾನಿಕರವಾದ ಹೇಳಿಕೆಗಳನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಿಸದಂತೆಯೂ ಗೊಗೊಯಿ ಹಾಗೂ ಪ್ರಕಾಶಕ ಸಂಸ್ಥೆ ರೂಪಾ ಪಬ್ಲಿಕೇಶನ್ಸ್ ಗೆ ತಡೆಯಾಜ್ಞೆ ತರಬೇಕೆಂದು ಶರ್ಮಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್ ಹಾಗೂ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಯ ದಿನಾಂಕವನ್ನು ಜೂನ್ 3ಕ್ಕೆ ನಿಗದಿಪಡಿಸಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com