ಯುವತಿಯೋರ್ವಳು ತನ್ನ ಮೇಲೆ ಕೇಸ್ ಇದೆ ಎಂದು ಮನನೊಂದು ಆತ್ಮಹತ್ಯೆ

ಯುವತಿಯೋರ್ವಳು ನನ್ನ ಮೇಲೆ ಕೇಸ್ ಇದೆ ಎಂದು ಮನನೊಂದು ಆತ್ಮಹತ್ಯೆ

ಚಿತ್ರದುರ್ಗ;ಯುವತಿಯೋರ್ವಳು ಸರಕಾರಿ ಉದ್ಯೋಗಕ್ಕೆ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂತನ್ನ ಮೇಲಿನ ಕೇಸ್ ಅಡ್ಡಿಯಾಗಿದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ನಡೆದಿದೆ.

ಉಷಾ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಉಷಾ ತಾಯಿ ಯಶೋಧಮ್ಮ ಅವರ ಕುಟುಂಬ ಹಾಗೂ ನಾಗರಾಜ ಎಂಬುವವರ ಕುಟುಂಬದ ನಡುವೆ ಜಮೀನಿನ ವಿಚಾರಕ್ಕೆ ಜಗಳ ನಡೆದಿತ್ತು.ಈ ಜಗಳ ಪರಶುರಾಂಪುರ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ 22 ವರ್ಷದ ಉಷಾ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದ್ದು,ಪ್ರಕರಣದದಲ್ಲಿ ಉಷಾ A3 ಆರೋಪಿಯಾಗಿದ್ದಳು.

ಈಗ ಉಷಾ ತುಮಕೂರು ನ್ಯಾಯಾಲಯದಲ್ಲಿ ಎಫ್‌ಡಿಎ ಹುದ್ದೆಗೂ ಆಯ್ಕೆಯಾಗಿದ್ದೂ,ಕೆಲಸಕ್ಕೆ ನೇಮಕಾತಿ ಸಂಬಂಧವಾಗಿ ನಾಗರಾಜ್ ಕುಟುಂಬಕ್ಕೆ ಉಷಾ ಕುಟುಂಬದವರು ರಾಜಿ ಆಗಲು ಮನವಿ ಮಾಡಿಕೊಂಡಿದ್ದರಂತೆ.ಇದಕ್ಕೆ ನಾಗರಾಜ್ ಕುಟುಂಬ ಒಪ್ಪಿಕೊಂಡಿಲ್ಲ‌.‌ಇದರಿಂದ‌ ಮನನೊಂದು ಉಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಷಾ ಸಾವಿನ ವೇಳೆ ಬ್ಲಡೀ ಸಿಸ್ಟಮ್ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಟಾಪ್ ನ್ಯೂಸ್