BIG NEWS ಬಿಜೆಪಿ ಕಾರ್ಯಕರ್ತನ ಹೆಸರು ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಮಗಳೂರು;ಯುವಕನೋರ್ವ ಪ್ರೀತಿಸಿ ವಂಚಿಸಿದ ಕಾರಣ
ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿ ವಿಷ ಸೇವಿಸಿದ್ದ 17 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಹಿತೇಶ್ ಎಂಬಾತ ಅಪ್ರಾಪ್ತ 17 ವರ್ಷದ ದೀಪ್ತಿಯನ್ನು ಪ್ರೀತಿಸುವ ನಾಟಕವಾಡಿ ವಂಚಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಳು.ಹಿತೇಶ್ ಪ್ರೀತಿಸಿ ವಂಚಿಸಿದ ಕಾರಣ ದೀಪ್ತಿ ಜನವರಿ 10ರಂದು ಕಳೆ ನಾಶಕ ಸೇವಿಸಿದ್ದಳು. ನಂತರ ಆಕೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾಳೆ.

ದೀಪ್ತಿ ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಳು.ಡೆತ್‌ನೋಟ್‌ನಲ್ಲಿ ಹೆಸರಿಸಿದಂತೆ, ಬಿಜೆಪಿ ಕಾರ್ಯಕರ್ತ ಎನ್ನಲಾದ ಹಿತೇಶ್ ವಿರುದ್ಧ ದೂರು ದಾಖಲಿಸಲು ಕುದುರೆಮುಖ ಪೊಲೀಸರು ಸತಾಯಿಸುತ್ತಿದ್ದರು. ಹುಡುಗಿಯ ನೀಡಿದ ದೂರನ್ನು ಸ್ವೀಕರಿಸದ ಕುದುರೆಮುಖ ಪೊಲೀಸರನ್ನು ಚಿಕ್ಕಮಗಳೂರು ಎಸ್‌ಪಿ ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ ಪಿ ಸೂಚನೆ ಬಳಿಕ ಹಿತೇಶ್ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಟಾಪ್ ನ್ಯೂಸ್