ಅನ್ವರ್ ಕೊಲೆ ಪ್ರಕರಣ ನಡೆದು 5 ವರ್ಷ ಕಳೆದರೂ ಇನ್ನೂ ಬಂಧನವಾಗದ ಆರೋಪಿಗಳು; ದಯಾಮರಣಕ್ಕೆ ಆಗ್ರಹಿಸಿದ ಕುಟುಂಬ

ಚಿಕ್ಕಮಗಳೂರು;ವ್ಯಕ್ತಿಯೋರ್ವನ ಹತ್ಯೆಯಾಗಿ ಐದು ವರ್ಷ ಕಳೆದಿದ್ದು, ಈವರೆಗೆ ಆರೋಪಿಗಳನ್ನು ಪತ್ತೆ ಮಾಡಿಲ್ಲ ಎಂದು
ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅನ್ವರ್​​ ಎಂಬವರನ್ನು ನಗರದ ಗೌರಿ ಕಾಲುವೆ ಬಳಿ ಚಾಕುವಿನಿಂದ 13 ಬಾರಿ ಇರಿದು ಹತ್ಯೆ ಮಾಡಲಾಗಿತ್ತು.ಆದರೆ ಈವರೆಗೂ ಆರೋಪಿಗಳ ಪತ್ತೆ ಮಾಡಿಲ್ಲ.ಬಿಜೆಪಿ ಸರ್ಕಾರ ಇದ್ದಾಗಲೂ ಸರಿಯಾದ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ವರ್ ಹತ್ಯೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರ ಸಿಐಡಿಗೆ ಒಪ್ಪಿಸಿದ್ದರು.5 ವರ್ಷವಾದರೂ ಹಂತಕರನ್ನು ಬಂಧಿಸಿಲ್ಲ.ತನಿಖಾಧಿಕಾರಿಗಳ ಆಗಾಗ ವರ್ಗಾವಣೆ ನಡೆದಿದೆ.ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಅನ್ವರ್ ಕುಟುಂಬ ಆರೋಪಿಸಿದೆ.

ಆರೋಪಿಗಳನ್ನು ಬಂಧಿಸುವಂತೆ ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಎದುರು ಕುಟುಂಬಸ್ಥರು ಈ ಮೊದಲು ಉಪವಾಸ ಕೂಡ ಕೂತಿದ್ದರು.

2019ರಲ್ಲಿ ಪ್ರಕರಣವನ್ನ ಸಿಬಿಐ ಅಥವಾ ಎಸ್‌ಐಟಿಗೆ ವಹಿಸುವಂತೆ ಪಟ್ಟು ಹಿಡಿದಾಗ ಅನ್ವರ್ ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರವಾಯ್ತು.ಆದರೆ ಪ್ರಕರಣದಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ನಡೆದಿಲ್ಲ, ಇದರಿಂದ ಕುಟುಂಬಸ್ಥರರು ಇದೀಗ ನೂತನ ಸರ್ಕಾರಕ್ಕೆ ಮನವಿಯನ್ನು ಮಾಡುತ್ತಿದ್ದಾರೆ.

ತನಿಖಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಮೂಲಕ ನಮಗೆ ನ್ಯಾಯ ನೀಡಬೇಕು. ಇಲ್ಲವೇ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ನಮ್ಮ ಇಡೀ ಕುಟುಂಬಕ್ಕೆ ದಯಾಮರಣ ಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್