ಪ್ರಿಯತಮೆಯ ಮದುವೆ ಮಂಟಪಕ್ಕೆ ನುಗ್ಗಿ ಕತ್ತುಕೊಯ್ದುಕೊಂಡ ಯುವಕ; ಮುರಿದು ಬಿದ್ದ ಮದುವೆ
ಚಿಕ್ಕಬಳ್ಳಾಪುರ:ಪ್ರಿಯತಮೆಯ ಮದುವೆ ವೇಳೆ ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವಕ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮುಂದಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಿತೀಶ್ ಎಂಬಾತ ಮದುವೆ ಮಂಟಪದಲ್ಲಿ ಗಲಾಟೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ನಿತೇಶ್ ಚಿಕ್ಕದಿನಿಂದಲೂ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.ಈ ವಿಚಾರಕ್ಕೆ ಯುವತಿಯ ಮನೆಯ ಬಳಿ ಹಲವು ಬಾರಿ ಬಂದು ಆತ ಗಲಾಟೆಯೂ ಮಾಡಿದ್ದ.
ಯುವತಿಯ ಮದುವೆ ವಿಚಾರ ತಿಳಿದು ಖಾಸಗಿ ಕಲ್ಯಾಣ ಮಂಟಪಕ್ಕೆ ತೆರಳಿ ಅಲ್ಲಿ ಕೂಗಾಡಿ ಗಲಾಟೆ ಮಾಡಿದ್ದಾನೆ.ಈ ವೇಳೆ ವಧುವಿನ ಕಡೆಯವರು ಆತನಿಗೆ ಥಳಿಸಿದ್ದಾರೆ.ಈ ವೇಳೆ ಕಲ್ಯಾಣ ಮಂಟಪದಲ್ಲೇ ಆತ ಎಲ್ಲರ ಎದುರು ಕತ್ತುಕೊಯ್ದುಕೊಂಡಿದ್ದಾನೆ.
ಇದೇ ವಿಚಾರಕ್ಕೆ ಯುವಕ ಮತ್ತು ಯುವತಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು, ಯುವಕನೇ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಹೇಳಿದ್ದಾರೆ.
ಯುವಕನ ಗಲಾಟೆಯಿಂದ ಬೆಚ್ಚಿಬಿದ್ದ ವರನ ಕಡೆಯವರು ಮದುವೆಯನ್ನ ರದ್ದುಗೊಳಿಸಿಕೊಂಡು ವಾಪಸ್ ಹೋಗಿದ್ದಾರೆ.