Facebook ಲೈವ್ ವಿಡಿಯೋ ಮಾಡಿಕೊಂಡು ವ್ಯಕ್ತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಪತ್ನಿ ಮತ್ತು ಅತ್ತೆ ಕಿರುಕುಳು ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಫೇಸ್ ಬುಕ್ ಲೈವ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮೃತನನ್ನು ಕೆ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ್ನಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶ್ ತನ್ನ ಪತ್ನಿ ಶಿಲ್ಪಾ ಮತ್ತು ಅತ್ತೆ ಅಶ್ವತ್ಥಮ್ಮ ನೀನು ಸತ್ತೋಗು, ನೀನು ಬದುಕಿದ್ದರೆ ನಮಗೆ ನೆಮ್ಮದಿಯಿಲ್ಲ ಹೀಯಾಳಿಸುತ್ತಿದ್ದರು. ಹೀಗಾಗಿ ನಾನು ಸಾಯಲು ನಿರ್ಧರಿಸಿದ್ದೇನೆ ಎಂದು ವೆಂಕಟೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವೆಂಕಟೇಶ್ ಸಾವಿನ ಸಂಬಂಧ ತಾಯಿ ಮಂಜುಳ ಎಂಬುವವರು ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್