ಮಗುವಿಗೆ ನಾಟಿ ಔಷಧ ಕುಡಿಸಿದ ಪೋಷಕರು; ಮಗು ಸಾವು

ಮಗುವಿಗೆ ನಾಟಿ ಔಷಧ ಕುಡಿಸಿದ ಪೋಷಕರು; ಮಗು ಸಾವು

ಚಿಕ್ಕಬಳ್ಳಾಪುರ;ನಾಟಿ ಔಷಧಿಗೆ 7 ವರ್ಷದ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟ ಪಾ‍ಳ್ಯದಲ್ಲಿ ನಡೆದಿದೆ.

ಮೃತ ಬಾಲಕನನ್ನು ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್(7) ಎಂದು ಗುರುತಿಸಲಾಗಿದೆ.

ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿಗೂ ನೀಡಿದ್ದಾನೆ.ಇದರ ಬೆನ್ನಲ್ಲೇ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ.

ಘಟನೆಯಲ್ಲಿ ತಂದೆ-ಮಗಳು ಆಸ್ಪತ್ರೆ ಸೇರಿದರೆ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಮೃತಪಟ್ಟ ಬಾಲಕ ವೇದೇಶ್ ದೇಹದ ಮೇಲೆ ಗುಳ್ಳೆಗಳಾಗಿದ್ದವು, ಇದಕ್ಕೆ ಗ್ರಾಮದ ಓರ್ವ ನಾಟಿ ಔಷಧಿ ನೀಡಿದ್ದನು ಎಂದು ಹೇಳಲಾಗಿದೆ.

ಇದನ್ನು ಕುಡಿದ ಬಳಿಕ ಮಗು ಅಸ್ವಸ್ಥಗೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್