ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದುರ್ಮರಣ

ಮೈಸೂರು;ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಚೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿದ ಘಟನೆ ನಗರದ ಹೂಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

ಸಹಾಯಕ ಲೈನ್‌ಮ್ಯಾನ್​​​ ಸಂತೋಷ್​(26) ಮೃತ ರ್ದುದೈವಿ. ಟ್ರಾನ್ಸ್​ಫಾರ್ಮರ್​​ ದುರಸ್ತಿ ವೇಳೆ ವಿದ್ಯುತ್​ ಹರಿದು ಘಟನೆ ನಡೆದಿದೆ.

ಇನ್ನು ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೃತ ಸಂತೋಷ್ ಪೋಷಕರು, ಸ್ನೇಹಿತರು ಆರೋಪಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಎಸಿಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಈ ಕುರಿತು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್