BIG NEWS ಛತ್ತೀಸ್ ಗಢದಲ್ಲಿ ಸೈನಿಕರು ತೆರಳುತ್ತಿದ್ದ ವಾಹನವನ್ನೇ ಸ್ಪೋಟಿಸಿದ ನಕ್ಸಲರು, 11 ಮಂದಿ ಯೋಧರು ಹುತಾತ್ಮ

ಛತ್ತೀಸ್ ಗಢ:ದಾಂತೇವಾಡದಲ್ಲಿ ಅರನಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಂತೇವಾಡದಲ್ಲಿ ನಕ್ಸಲರು ಸುಧಾರಿತ ಸ್ಪೋಟಕ ಬಳಸಿ ದುಷ್ಕೃತ್ಯ ನೆಡೆಸಿದ್ದಾರೆ. ನಕ್ಸಲರು ಡಿಆರ್ ಜಿ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ನೆಲ ಬಾಂಬ್ ಮೂಲಕ ಸ್ಪೋಟಿಸಿದ್ದಾರೆ.

ನಕ್ಸಲರ ಸುಧಾರಿತ ಸ್ಪೋಟಕದಲ್ಲಿ ಡಿಆರ್ ಜಿ ಸಿಬ್ಬಂದಿ ವಾಹನದ ಚಾಲಕ ಸೇರಿ 10 ಯೋಧರು ಹುತಾತ್ಮರಾಗಿದ್ದಾರೆ.

ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸ್‌ ಹೋಗುತ್ತಿದ್ದಾಗ ಈ ಬರ್ಬರ ಕೃತ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 10 ಜನ ಜವಾನರು ಹಾಗೂ ಚಾಲಕ ಸೇರಿ 11 ಜನ ವಾಹನದಲ್ಲಿ ಹೋಗುತ್ತಿದ್ದಾಗ ಸಂಪೂರ್ಣ ವಾಹನವನ್ನೇ ಸ್ಪೋಟಿಸಿದ್ದಾರೆ ಎಂದು ತಿಳಿದು ಬಬಂದಿದೆ.

ಛತ್ತೀಸ್‌ಗಢದ ದಾಂತೆವಾಡಾ ಜಿಲ್ಲೆಯ ಅರಣ್‌ಪುರ ಬಳಿ ಈ ಘಟನೆ ನಡೆದಿದೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಇವರು ನಕ್ಸಲ್‌ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದರು.

ಘಟನೆ ಬಗ್ಗೆ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಟ್ವೀಟ್‌ ಮಾಡಿದ್ದು, ”10 ಜನ ಡಿಆರ್‌ಜಿ (ಜಿಲ್ಲಾ ಮೀಸಲು ಗಾರ್ಡ್‌) ಸಿಬ್ಬಂದಿ ಹಾಗೂ ಒಬ್ಬರು ಚಾಲಕ ಸೇರಿ 11 ಜನರು ನಕ್ಸಲರ ದಾಳಿಯಲ್ಲಿ ಬಲಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ. ಇದು ತುಂಬಾ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಹೋರಾಟ ಕೊನೆಯ ಹಂತದಲ್ಲಿದೆ. ನಕ್ಸಲರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com