22 ಪೊಲೀಸರಿಗೆ 10ವರ್ಷ ಜೈಲು ಶಿಕ್ಷೆ; ಏನಿದು ಪ್ರಕರಣ?

22 ಪೊಲೀಸರಿಗೆ 10ವರ್ಷ ಜೈಲು ಶಿಕ್ಷೆ; ಏನಿದು ಪ್ರಕರಣ?

ಛತ್ತೀಸ್ ಗಡ; 2010ರಲ್ಲಿ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಪ್ರಕರಣದಲ್ಲಿ ಸಿ ಆರ್ ಪಿ ಎಫ್ ನ ಇಬ್ಬರು ಸಿಬ್ಬಂದಿ ಹಾಗೂ 22 ಪೊಲೀಸರು ಸೇರಿದಂತೆ 24 ಪೊಲೀಸ್ ಸಿಬ್ಬಂದಿಗೆ ಉತ್ತರಪ್ರದೇಶ ರಾಮ್ಪುರದ ವಿಶೇಷ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ.ದಂಡ ವಿಧಿಸಿದೆ.

ಪ್ರಕರಣದಲ್ಲಿ 24 ಪೊಲೀಸ್ ಸಿಬ್ಬಂದಿ ದೋಷಿಗಳು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯ್ ಕುಮಾರ್ ಹೇಳಿದ್ದಾರೆ.

22 ಸಿಬ್ಬಂದಿಗಳಲ್ಲಿ ಹೆಚ್ಚಿನವರು ಉತ್ತರಪ್ರದೇಶ ಪೊಲೀಸ್ ಹಾಗೂ ಪ್ರೊವಿನ್ಸಿಯಲ್ ಆರ್ಮಡ್ ಕಾನ್ಸಟೆಬ್ಯುಲರಿ (ಪಿಎಸಿ)ಗೆ ಸೇರಿದವರು. ಪ್ರಕರಣದ ಪ್ರಧಾನ ಆರೋಪಿ ಈಗಾಗಲೇ ಮೃತಪಟ್ಟಿದ್ದಾನೆ.

ನ್ಯಾಯಾಲಯ ತೀರ್ಪು ನೀಡಿದ ಬಳಿಕ ಎಲ್ಲಾ ದೋಷಿಗಳನ್ನು ಗುರುವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ರಾಮ್ಪುರ ಹೆಚ್ಚುವರಿ ಜಿಲ್ಲಾ ಸರಕಾರಿ ವಕೀಲ ಪ್ರತಾಪ್ ಸಿಂಗ್ ಮೌರ್ಯ ತಿಳಿಸಿದ್ದಾರೆ.

ಛತ್ತೀಸ್ ಗಡದ ಮಾವೋವಾದಿಗಳು ಹಾಗೂ ಭಯೋತ್ಪಾದಕರಿಗೆ ರಾಮ್ಪುರದಿಂದ ಕಾಟ್ರಿಜ್, ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಪೂರೈಕೆ ಕುರಿತು ಅಲಹಾಬಾದ್ ಮೂಲದ ವ್ಯಕ್ತಿಯ ಮೂಲಕ ಮಾಹಿತಿ ಬಯಲಾಗಿತ್ತು.

ಟಾಪ್ ನ್ಯೂಸ್