ಬೆಂಗಳೂರು:ಪ್ರೀತಿಸಿದ ಯುವತಿಗೆ ಮೆಸೇಜ್ ಮಾಡಿದ ಯುವಕನಿಗೆ ಕೊಲೆ ಮಾಡಿ ದುಷ್ಕರ್ಮಿಯೋರ್ವ ಚಾರ್ಮಾಡಿ ಘಾಟ್ ನಲ್ಲಿ ಎಸೆದ ಪ್ರಕರಣವನ್ನು ಪೊಲೀಸರು ಬೇದಿಸಿದ್ದಾರೆ.
ಮತ್ತಿಕೆರೆಯ ನಿವಾಸಿಯಾದ ಗೊವೀಂದರಾಜ್ (19) ತನ್ನದೆ ಏರಿಯಾದಲ್ಲಿದ್ದ ತನ್ನ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದ.ಆದರೆ ಮೊನ್ನೆ ರಾತ್ರಿ ಗೋವಿಂದರಾಜು ಎಂದಿನಂತೆ ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ್ದಾನೆ.
ಆದರೆ ಈಕೆಯನ್ನು ಮದುವೆಯಾಗಬೇಕೆಂದು ಆಸೆಯಿಂದ ಆಕೆಯ ಸೋದರ ಮಾವ ಅನಿಲ್ ಕಾಯುತ್ತಿದ್ದ. ಗೋವಿಂದರಾಜು ಮಾಡಿ ಮೆಸೇಜ್ ನೋಡಿ ಕೋಪಗೊಂಡ ಅನಿಲ್, ಗೋವಿಂದರಾಜುಗೆ ಕಾಲ್ ಮಾಡಿ ಮಾತನಾಡಬೇಕೆಂದು ಕರೆಸಿಕೊಂಡಿದ್ದಾನೆ.
ಬಳಿಕ ಅನಿಲ್ ಗೋವಿಂದರಾಜುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ನೇರವಾಗಿ ಬ್ಯಾಡರಹಳ್ಳಿ ಸಮೀಪದ ಅಂದ್ರಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿ ಗೆಳೆಯರ ಜೊತೆ ಸೇರಿ ಕೊಲೆ ಮಾಡಿದ್ದಾನೆ.
ಬಳಿಕ ಚಾರ್ಮಾಡಿಘಾಟ್ ನಲ್ಲಿ ಮೃತದೇಹ ಎಸೆದು ಬಂದಿದ್ದಾರೆ.ಅನಿಲ್ ತನ್ನ ತಾಯಿ ಬಳಿ ನಡೆದ ಘಟನೆಯನ್ನು
ಹೇಳಿಕೊಂಡಿದ್ದಾನೆ.ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.