ಚಾಮರಾಜನಗರ;ಕಾರಿಗೆ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಬಳಿ ನಡೆದಿದೆ.
ಸಮೃದ್ಧಿ (22) ಮೃತಪಟ್ಟಿದ್ದಾರೆ, ಪತಿ ನಾಗೇಂದ್ರ ಸ್ವಾಮಿ (26) ಸ್ಥಿತಿ ಗಂಭೀರವಾಗಿದೆ.ಅವರನ್ನು ಮೈಸೂರು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿ ಇಬ್ಬರೂ ಊಟಿಗೆ ಕಾರಿನಲ್ಲಿ ಹೊರಟಿದ್ದರು. ಗುಂಡ್ಲುಪೇಟೆ ಬಳಿ ಎದುರಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.