ಚೈತ್ರಾ ಬಂಧನದ ಬಗ್ಗೆ ತಾಯಿ ರೋಹಿಣಿ ಅವರು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಬೆಳಗ್ಗೆ ಮಗಳ ಬಂಧನದ ವಿಷಯ ಗೊತ್ತಾಯ್ತು. ಹಿರಿಯ ಪುತ್ರಿ ಕರೆ ಮಾಡಿ ಚೈತ್ರಾ ಬಂಧನವಾಗಿರುವ ವಿಷಯವನ್ನು ತಿಳಿಸಿದಳು.ಹಣದ ವಿಷಯಕ್ಕೆ ಬಂಧನ ಆಗಿರುವ ಬಗ್ಗೆ ಹೇಳಿದ್ದಾಳೆ ಎಂದು ಹೇಳಿದರು.
ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಸರಿಯಾದ ಸಮಯಕ್ಕೆ ಔಷಧಿ ತೆಗೆದುಕೋ ಎಂದು ಹಿರಿಯ ಪುತ್ರಿ ಹೇಳಿದಳು. ನಂತರ ಪೊಲೀಸರೇ ಫೋನ್ ಮಾಡಿ ನೀವು ಚೈತ್ರಾ ಕುಂದಾಪುರ ತಾಯಿನಾ ಎಂದು ಕೇಳಿದರು. ಅದಕ್ಕೆ ನಾನು ಹೌದು ಎಂದು ಹೇಳಿದೆ. ಪೊಲೀಸರೇ ಮಗಳಿಗೆ ಫೋನ್ ನೀಡಿದರು.ಆಗ ಮಗಳು ನೀನು ಏನು ಟೆನ್ಷನ್ ಮಾಡೋಕೇ ಬೇಡ. ಹಾಸನದಲ್ಲಿ ಆದ ರೀತಿ ಒಂದು ರೀತಿ ಸಣ್ಣ ಕೇಸ್ ಆಗಿದೆ. ಸರಿಯಾಗಿ ಔಷಧಿ ತೆಗೆದುಕೋ ಎಂದು ಹೇಳಿದಳು.
ಮಗಳು ಒಳ್ಳೆಯ ರೀತಿಯಲ್ಲಿದ್ದು ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾಳೆ. ನಾವು ಕಾರ್ಯಕ್ರಮದ ಬಗ್ಗೆ ಏನು ಕೇಳುತ್ತಿರಲಿಲ್ಲ. ಮಗಳ ಬಂಧನ ಆಗಿರೋದಕ್ಕೆ ಬೇಜಾರು ಆಗುತ್ತೆ.ಬೇರೆ ಯಾರಿಗೋಸ್ಕರ ಇದು ಆಗಿದೆ.ಅವಳು ಬೇರೆಯವರ ಹಣ ನುಂಗಿ ಹಾಕಬೇಕು ಎನ್ನುವ ಭಾವನೆಯವಳಲ್ಲ. ತನ್ನದೇ ದುಡ್ಡು ಹೋದ್ರೂ ಪರವಾಗಿಲ್ಲ ಎಂಬ ಭಾವನೆಯವಳು. ಮಗಳು ಯಾವಾಗಲೂ ನೇರ ಮಾತಿನವಳು ಎಂದು ಪುತ್ರಿಯ ಬಗ್ಗೆ ಹೇಳಿದರು.
ಮಗಳಿಗೆ ರಾಜಕೀಯದ ಆಸೆಯೂ ಇಲ್ಲ. ಈ ಪ್ರಕರಣದಲ್ಲಿ ಅವಳನ್ನು ಮುಂದೆ ಹಾಕಲಾಗಿದೆ. ಎಲ್ಲರೂ ಹಿಂದೆ ನಿಂತು ಚೈತ್ರಾಳನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದರು.