ಬೆಂಗಳೂರು;ಟಿಕೆಟ್ ವಂಚನೆ ಪ್ರಕರಣದಲ್ಲಿ ಚೈತ್ರ ಮತ್ತು ಶ್ರೀಕಾಂತ್ ಗೆ ಸೇರಿದ ಆಸ್ತಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈತ್ರಾ ತನ್ನ ಆಪ್ತ ಶ್ರೀಕಾಂತ್ ಹೆಸರಿನಲ್ಲಿ 40 ಲಕ್ಷ ಹಣ ಠೇವಣಿ, 65 ಲಕ್ಷದ ಮೌಲ್ಯದ ಚಿನ್ನಾಭರಣಗಳನ್ನು ಇಟ್ಟಿರುವುದು ಪತ್ತೆಯಾಗಿದೆ.
ಇದೀಗ 1.08 ಕೋಟಿ ರೂ .ಗಳ ಆಸ್ತಿಪಾಸ್ತಿಯ ದಾಖಲೆಗಳು ಕೂಡ ಸಿಸಿಬಿ ಪೊಲೀಸರ ಕೈಸೇರಿದೆ.
ಶ್ರೀಕಾಂತ್ ನೀಡಿದ ಮಾಹಿತಿಯಂತೆ, ಬ್ರಹ್ಮಾವರ ಉಪ್ಪೂರಿನ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿಟ್ಟಿದ್ದ ನಗ,ನಗದುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇದಲ್ಲದೆ ಚೈತ್ರಾ ಹಣವನ್ನು ಜಮೀನು,ಮನೆ ನಿರ್ಮಾಣದಲ್ಲಿ ಹೂಡಿಕೆ ಮಾಡಿರುವುದು ಕೂಡ ಬಹಿರಂಗವಾಗಿದೆ. ಕುಂದಾಪುರದಲ್ಲಿರುವ ಹಳೆಯ ಮನೆಯ ಪಕ್ಕದಲ್ಲಿ ಚೈತ್ರಾ ಭೂಮಿ ಖರೀದಿಸಿದ್ದು ಅಲ್ಲಿ ಮಹಡಿ ಮನೆಯೊಂದನ್ನು ಕಟ್ಟಿದ್ದಳು.
ಶ್ರೀಕಾಂತ್ ಕೂಡ ತನ್ನ ಪಾಲಿಗೆ ಬಂದಿದ್ದ ಹಣದಲ್ಲಿ ಕಾರ್ಕಳದಲ್ಲಿ ಜಮೀನು ಖರೀದಿಸಿ ಮನೆಯನ್ನು ಕಟ್ಟುತ್ತಿದ್ದು ನಿರ್ಮಾಣ ಹಂತದಲ್ಲಿರುವ ಮಹಡಿ ಮನೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.