ಚೈತ್ರ & ಹಾಲಶ್ರೀ ಟಿಕೆಟ್ ವಂಚನೆ ಕೇಸ್ ನಲ್ಲಿ ಬೆಳವಣಿಗೆ

ಬೆಂಗಳೂರು;ಚೈತ್ರ ಕುಂದಾಪುರ ಹಾಗೂ ಗ್ಯಾಂಗ್ ನಿಂದ ನಡೆಸಿದ ಬಿಜೆಪಿ ಟಿಕೆಟ್ ಡೀಲ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ತನಿಖೆ ನಡೆಸಿದ ಸಿಸಿಬಿ ಪೊಲೀಸರಿಗೆ ಹಿರೇಹಡಗಲಿಯ ಹಾಲಶ್ರೀ ಮಠದಲ್ಲಿ ಅಭಿನವ ಶ್ರೀ ವಾಸವಿದ್ದಂತ ಸ್ಥಳದಲ್ಲಿ 65 ಲಕ್ಷ ರೂಪಾಯಿ ಬ್ಯಾಗ್ ಪತ್ತೆಯಾಗಿದೆ.

ಚೈತ್ರಾ ಕುಂದಾಪುರ ಹಾಗೂ ಟೀಂ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಅಭಿನವ ಹಾಲಶ್ರೀ ನಾಪತ್ತೆಯಾಗಿದ್ದರು. ಹಣ ಸಹಿತ ಮೈಸೂರಿಗೆ ಹೋಗಿದ್ದಂತ ಅವರು ಬಳಿಕ ಪರಾರಿಯಾಗಿದ್ದರು.

ನಿನ್ನೆಯಷ್ಟೇ ಒಡಿಶಾದ ಕಟಕ್ ನಲ್ಲಿ ಸಿಸಿಬಿ ಪೊಲೀಸರು
ಅವರನ್ನು ಬಂಧಿಸಿದ್ದರು. ಬೆಂಗಳೂರಿಗೆ ಕರೆತಂದು, ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದಿದ್ದರು.

ಬಳಿಕ ತನಿಖೆ ಚುರುಕುಗೊಳಿಸಿದ್ದಂತ ಸಿಸಿಬಿ ಪೊಲೀಸರು ಹಿರೇಹಡಗಲಿಯಲ್ಲಿನ ಹಾಲಶ್ರೀ ಮಠಕ್ಕೆ ತೆರಳಿ ಕೇಸ್ ಸಂಬಂಧ ಶೋಧ ಕಾರ್ಯ ನಡೆಸಿದ್ದರು. ಈ ವೇಳೆಯಲ್ಲಿ 65 ಲಕ್ಷ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್