ಮಹಿಳಾ ಪೊಲೀಸರು ಮಹಿಳೆಯ ಕೂದಲು ಹಿಡಿದು ಎಳೆದುಕೊಂಡು ಹೋಗುವ ವಿಡಿಯೋ ವೈರಲ್..
ಮಧ್ಯಪ್ರದೇಶದ;ಮಹಿಳಾ ಪೊಲೀಸರು ಮಹಿಳೆಯೊಬ್ಬರ ಕೂದಲನ್ನು ಹಿಡಿದು ಎಳೆದೊಯ್ಯುತ್ತಿರುವ ಅಮಾನವೀಯ ಘಟಮೆಯ ವೀಡಿಯೋವೊಂದು ವೈರಲ್ ಆಗಿದೆ.
ಚಯಿನಾ ಬಾಯಿ ಕಛಿ ವಿಡಿಯೋದಲ್ಲಿ ಕಂಡು ಬಂದ ಸಂತ್ರಸ್ತೆ ಎನ್ನಲಾಗಿದೆ.
ಕೌರಿಯಾ ಗ್ರಾದಲ್ಲಿರುವ ತನ್ನ ಜಮೀನಿನಲ್ಲಿ ವಿದ್ಯುತ್ ಟವರ್ ಅಳವಡಿಸಲು ತನಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ
ಪ್ರತಿಭಟಿಸಿದ ಮಹಿಳೆಗೆ ಥಳಿಸಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಕೇಡಿಯಾ,ಮಹಿಳೆಯನ್ನು ಥಳಿಸಿದ ಆರೋಪವನ್ನು ಅವರು ನಿರಾಕರಿಸಿದ್ದಾರೆ.ಇದೊಂದು ಹಳೆಯ ವೀಡಿಯೋ ಎಂದು ಹೇಳಿದ್ದಾರೆ.
ನನ್ನ ಜಾಗದಲ್ಲಿ ವಿದ್ಯುತ್ ಟವರ್ ಅಳವಡಿಕೆಗೆ ವಿರೋಧಿಸಿರುವುದಾಗಿ ಹೇಳಿದ ಸಂತ್ರಸ್ತೆ ಈ ಸಂದರ್ಭ ಪೊಲೀಸರು ತನ್ನನ್ನು ಥಳಿಸಿ ನನ್ನನ್ನು ಹಾಗೂ ಇತರ ನಾಲ್ಕು ಮಂದಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ವಿದ್ಯುತ್ ಕಂಪನಿಯ ಗುತ್ತಿಗೆದಾರರು, ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತನ್ನ ಜಮೀನು ವಶಪಡಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.