2023ರ ಕೇಂದ್ರ ಬಜೆಟ್‌ ಮಂಡಿಸಿದ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್; ಬಜೆಟ್ ನಲ್ಲಿ ಏನೇನಿದೆ? ಇಲ್ಲಿದೆ ಮುಖ್ಯಾಂಶಗಳು

ನವದೆಹಲಿ;ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕೇಂದ್ರದ 2023ನೇ ಸಾಲಿನ ಬಜೆಟ್ ನ್ನು ಮಂಡನೆ ಮಾಡಿದ್ದಾರೆ.

ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಎಂದು ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಹಿಳೆಯರು, ಎಸ್ ಸಿ, ಎಸ್ ಟಿ ವರ್ಗದವರಿಗೆ, ಯುವಕರಿಗೆ ಪ್ರಮುಖ ಆದ್ಯತೆ. ಪ್ರಧಾನ್ ಮಂತ್ರಿ ಗರೀಭ್ ಕಲ್ಯಾಣ್ ಯೋಜನೆಗೆ ರೂ.2 ಲಕ್ಷ ಕೋಟಿ ಘೋಷಣೆ.

ವೈಯಕ್ತಿಕ‌ ಆದಾಯಕ್ಕೆ ತೆರಿಗೆ 7 ಲಕ್ಷದವರೆಗೆ ತೆರಿಗೆ ವಿನಾಯಿತಿ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಮುಂದಿನ ವರ್ಷಕ್ಕೆ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಹೆಚ್ಚಿಸಲು ಯುವಕರಿಗೆ ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಕೇಂದ್ರದ ಬಜೆಟ್ ನಾಗರಿಕರಿಗೆ ಅವಕಾಶಗಳನ್ನು ಒದಗಿಸುತ್ತದೆ. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಬಲವಾದ ಪ್ರಚೋದನೆಯನ್ನು ನೀಡುತ್ತದೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ‌.

ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ಕಾಡುಗಳನ್ನು ಬೆಳಸಲು ಸರ್ಕಾರ ಪ್ರೋತ್ಸಾಹ.ಮೊಬೈಲ್ ಫೋನ್, ಕ್ಯಾಮೆರಾ ಲೆನ್ಸ್ ಆಮದು ಸುಂಕ ರದ್ದು. ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ.

ಪರ್ಯಾಯ ರಸಗೊಬ್ಬರಗಳನ್ನು ಬಳಸುವಂತೆ ರಾಜ್ಯಗಳನ್ನು ಉತ್ತೇಜಿಸಲು ಪಿಎಂ-ಪ್ರಣಾಮ್ ಎಂಬ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ. ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು 1 ಕೋಟಿ ರೈತರಿಗೆ ನೆರವು ನೀಡಲಾಗುತ್ತದೆ.

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಶೇ.76ರಷ್ಟು ಹೆಚ್ಚಳ. ಆರ್ ಬಿಐ ಮೂಲಕ ಪ್ರತ್ಯೇಕ ಪದವಿಗೆ ಅವಕಾಶ. 2023-24ನೇ ಸಾಲಿನ ವಿತ್ತೀಯ ಕೊರತೆ 5.9ಕ್ಕೆ ಇಳಿಕೆ ಸಾಧ್ಯತೆ.

ಬ್ಯಾಂಕ್ ಕಾಯ್ದೆ, ಆರ್ ಬಿಐ ಕಾಯ್ದೆಗೆ ಹೊಸ ನಿಯಮ ಜಾರಿ. ಮಹಿಳಾ ಸಮ್ಮಾನ್ ನಲ್ಲಿ 2 ಲಕ್ಷದವರೆಗೆ ಠೇವಣಿಗೆ ಅವಕಾಶ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದರೂ.15 ಲಕ್ಷದ ಮಿತಿಯನ್ನು ಈ ಬಾರಿಯಿಂದ ರೂ. 30 ಲಕ್ಷಕ್ಕೆ ವಿಸ್ತರಿಸಲಾಗಿದೆ.

ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ‘ಗ್ರೀನ್‌ ಕ್ರೆಡಿಟ್‌’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ಕಂಪನಿಗಳಿಂದ ಪರಿಸರ ಸಂರಕ್ಷಣೆ ಕ್ರಮಗಳನ್ನು ಉತ್ತೇಜಿಸಲು ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ.

ಈ ಮಾದರಿಯ ಕೃಷಿ ಪದ್ಧತಿಗೆ ಅಗತ್ಯ ಬೆಂಬಲ ಒದಗಿಸಲು ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು. ಸಹಜ/ಸಾವಯವ ಕೃಷಿಗೆ ಮರಳುವ 1 ಕೋಟಿ ರೈತರಿಗೆ ಸರ್ಕಾರದ ನೆರವು ಸಿಗಲಿದೆ.

ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆ್ಯಪ್. ಒಂದು ಜಿಲ್ಲೆಗೆ ಒಂದು ಉತ್ಪನ್ನ. “ದೇಖೋ ಅಪ್ನಾ ದೇಶ್” ಪ್ರವಾಸೋದ್ಯಮಕ್ಕೆ ಹೊಸ ಯೋಜನೆ.

ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರಿ ವಾಹನಗಳು ಗುಜರಿಗೆ.

2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ. ಸಾಮಾನ್ಯ ಗುರುತು ಚೀಟಿಯಾಗಿ ಪ್ಯಾನ್ ಕಾರ್ಡ್ ಬಳಕೆ

ಜೈವಿಕ ಇಂಧನ, ಜೈವಿಕ ಗೊಬ್ಬರ, ಜೈವಿಕ ಅನಿಲಕ್ಕೆ ಅನುದಾನ. 10 ಸಾವಿರ ಬಯೋ ಇನ್ ಪುಟ್ ಸೆಂಟರ್ ಗಳ ಸ್ಥಾಪನೆ.

ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಕೋಟಿ ರೂ. ಮೀಸಲು. ಗ್ರೀನ್ ಹೈಡ್ರೋಜನ್ ಮಿಷನ್ ಗೆ 19,700 ಕೋಟಿ ರೂಪಾಯಿ ಮೀಸಲು.

ಐಐಟಿಗೆ 5 ವರ್ಷಗಳ ಕಾಲ ಅಧ್ಯಯನಕ್ಕೆ ಅನುದಾನ. 5ಜಿ ಅಪ್ಲಿಕೇಶನ್ ಅಭಿವೃದ್ಧಿಗೆ ನೂರು ಲ್ಯಾಬ್ ಸ್ಥಾಪನೆ.

ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆಗೆ ಕ್ರಮ. ಲ್ಯಾಬ್ ನಲ್ಲಿ ಸಹಜ ಡೈಮಂಡ್ ಗಳ ಉತ್ಪಾದನೆ. ಈ ಮೂಲಕ ನೈಸರ್ಗಿಕ ವಜ್ರ ಉತ್ಪಾದನೆಗೆ ಕ್ರಮ.

ಇ-ಕೋರ್ಟ್ ಗಳಿಗೆ 7 ಸಾವಿರ ಕೋಟಿ ರೂಪಾಯಿ ಅನುದಾನ.ಪ್ರಧಾನಿ ಅವಾಸ್ ಯೋಜನೆಗೆ 79 ಸಾವಿರ ಕೋಟಿ ರೂ.ಅನುದಾನ.

ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗೆ 15 ಸಾವಿರ ಕೋಟಿ ಮೀಸಲು. ಸರ್ಕಾರಿ ನೌಕರರಿಗಾಗಿ ಮಿಷನ್ ಕರ್ಮಯೋಗಿ ಯೋಜನೆ. ಕೆವೈಸಿ ಸರಳೀಕರಣಕ್ಕೆ ಕೇಂದ್ರದ ಕ್ರಮ.

ನಗರೋತ್ಥಾನಕ್ಕೆ 10 ಸಾವಿರ ಕೋಟಿ ರೂಪಾಯಿ ಮೀಸಲು. ಎಂಎಸ್ಎಂಇಗಳಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಮಾದರಿಯಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ರಚಿಸಲು ಸರ್ಕಾರ ನಿರ್ಧಾರ.

ಕೃಷಿ ಸಾಲದ ಗುರಿ ರೂ.20 ಲಕ್ಷ ಕೋಟಿಗೆ ಹೆಚ್ಚಳ,ಮ್ಯಾನ್ ಹೋಲ್ ನಿಂದ ಮಷಿನ್ ಹೋಲ್ ಗೆ ಬದಲಾವಣೆ. ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ. ಬುಡಕಟ್ಟು ಸಮುದಾಯದ ಜನರ ಶಿಕ್ಷಣ, ರಸ್ತೆ ನಿರ್ಮಾಣಕ್ಕೆ ನೆರವು.

ರೈಲ್ವೆಗೆ 2.40 ಲಕ್ಷ ಕೋಟಿ ರೂಪಾಯಿ ಮೀಸಲು. ಸರಕು ಸಾಗಣೆಗೆ ನೂರು ಹೊಸ ಸಾರಿಗೆ ಯೋಜನೆ

ವಸತಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಈ ವರ್ಷದ ಬಜೆಟ್​ನಲ್ಲಿ ರೂ. 79,000 ಕೋಟಿ ಅನುದಾನ ಘೋಷಿಸಲಾಗಿದೆ.

ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳವಾಗಿದೆ ಎಂದರು.

ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ರೂ.6,000 ಕೋಟಿ ಮತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು.

ಪ್ರಧಾನಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ 66ಕ್ಕೆ (ರೂ.79,000 ಕೋಟಿ) ಹೆಚ್ಚಿಸಲಾಗಿದೆ.

3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ.

ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳ ಕೇಂದ್ರ ನೆರವು ನೀಡಲಾಗುವುದು.

2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು.

ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್​ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಘೋಷಿಸಿದರು.

ಮಕ್ಕಳು ಮತ್ತು ಹದಿಹರೆಯದವರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ ಯೋಜನೆ

ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’ ಆರಂಭ

ರಾಜ್ಯಗಳ ಸಕ್ರಿಯ ಭಾಗವಹಿಸುವಿಕೆ, ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.

ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಉತ್ತೇಜಕ ಕ್ರಮವಾಗಿ ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್ ಗಳು. ಸಾರ್ವಜನಿಕ ಗ್ರಂಥಾಲಯಗಳಲ್ಲಿ ರೋಗಗಳ ಬಗ್ಗೆ ಮಾಹಿತಿ. ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ಮಿಸಲು.

ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು. ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ

157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ. ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಬೆಳವಣಿಗೆ. ಮೀನುಗಾರಿಕೆಗೆ 6 ಸಾವಿರ ಕೋಟಿ ಮೀಸಲು.

ಶ್ರೀಅನ್ನ ಜೋಳ, ರಾಗಿ, ಶ್ರೀಅನ್ನ ಗೋಧಿ, ಸಿರಿಧಾನ್ಯಗಳ ಕೃಷಿ ಯೋಜನೆಗೆ ಹೊಸ ಯೋಜನೆ.ಸಿರಿಧಾನ್ಯ ಕೃಷಿಗೆ ಆದ್ಯತೆ.

ಉಜ್ವಲ ಯೋಜನೆಯಲ್ಲಿ 9.6 ಲಕ್ಷ ಗ್ಯಾಸ್ ವಿತರಣೆ.

ಯುವ ಸಬಲೀಕರಣ, ಮಹಿಳಾ ಸಬಲೀಕರಣ. ಹಿಂದುಳಿದ ವರ್ಗಗಳ ಮೇಲೆ ಬಜೆಟ್ ನಲ್ಲಿ ಆದ್ಯತೆ. ಗರೀಭ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ.

ಆತ್ಮನಿರ್ಭರ ಯೋಜನೆಯಡಿ ಕುಶಲಕರ್ಮಿಗಳಿಗೆ ನೆರವು. ಹಸಿರು ಕ್ರಾಂತಿಗೆ ಬಜೆಟ್ ನಲ್ಲಿ ಮನ್ನಣೆ. ಈ ಬಾರಿಯೂ ಬಜೆಟ್ ನಲ್ಲಿ ಸಪ್ತ ಮಂತ್ರ.

ಕರಕುಶಲಕರ್ಮಿಗಳಿಗೆ ನೂತನ ಯೋಜನೆ.ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್. ಕೋವಿನ್, ಆಧಾರ್ ಹಾಗೂ ಯುಪಿಎ ವ್ಯವಸ್ಥೆ ನಿರ್ವಹಣೆಗೆ ವಿಶ್ವಮನ್ನಣೆ. ಪಿಎಂ ವಿಕಾಸ್ ಹೊಸ ಯೋಜನೆ ಜಾರಿ.

4 ಕೋಟಿ ರೈತರಿಗೆ 2.7 ಲಕ್ಷ ಕೋಟಿ ವಿಮೆ ಹಂಚಿಕೆ. 220ಕೋಟಿ ಡೋಸ್ ಲಸಿಕೆ ನೀಡಿದ್ದೇವೆ. 81 ಲಕ್ಷ ಸ್ವಸಹಾಯ ಗುಂಪಿಗೆ ಸಹಾಯ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೆರವು ನೀಡಲಾಗಿದೆ.

47 ಕೋಟಿ ಜನ್ ಧನ್ ಖಾತೆ ತೆರೆಯಲಾಗಿದೆ. ಭಾರತಕ್ಕೆ ವಿಶ್ವ ನೀಡಿರುವ ಮನ್ನಣೆಗೆ ಜಿ.20ಯೇ ಸಾಕ್ಷಿ.
ಆರ್ಥಿಕತೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 5ನೇ ಸ್ಥಾನ ಬಂದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7ರಷ್ಟು ವೃದ್ಧಿಯಾಗಿದೆ. ಉಚಿತ ಆಹಾರ ಧಾನ್ಯ ವಿತರಣೆ ಒಂದು ವರ್ಷ ವಿಸ್ತರಣೆ.11.7 ಲಕ್ಷ ಶೌಚಾಲಯ ನಿರ್ಮಾಣ ಮಾಡಿದ್ದೇವೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com