ಧರ್ಮಸ್ಥಳದಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣ; ಮೂವರು ಆರೋಪಿಗಳ ಬಂಧನ

ಮಂಗಳೂರು:ಧರ್ಮಸ್ಥಳದಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಟೋ ಚಾಲಕ ಮೊಹಮ್ಮದ್ ಆಶೀಕ್ ನೀಡಿದ ದೂರಿನ ಮೇರೆಗೆ ಅವಿನಾಶ್, ನಂದೀಪ್ ಹಾಗೂ ಅಕ್ಷತ್ ಎಂಬವರನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳು ಆಗಸ್ಟ್ 2 ರ ರಾತ್ರಿ ಊರಿಗೆ ತೆರಳಲು ಮೊಹಮ್ಮದ್ ಆಶೀಕ್ ಎಂಬಾತನ ಆಟೋದಲ್ಲಿ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಈ ವೇಳೆ ಅಡ್ಡಗಡ್ಡಿದ ದುಷ್ಕರ್ಮಿಗಳು ಅನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಘಟನೆ ಬಳಿಕ ಪೊಲೀಸ್ ಕೇಸ್ ದಾಖಲಾಗಿತ್ತು.

ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿ ದಂಪತಿ ಆತ್ಮಹತ್ಯೆ; ಹೃದಯವಿದ್ರಾಹಕ ಘಟನೆ ವರದಿ

ಬೆಂಗಳೂರು;ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರ ಮೂಲದ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ(29)ಅವರು ಇಬ್ಬರು ಮಕ್ಕಳಾದ ಮೋಕ್ಷಾ, ಸೃಷ್ಟಿಗೆ ಕೊಲೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೀಗೆಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ಸಂಭವಿಸಿದೆ.ಮೃತ ವೀರಾರ್ಜುನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೂ ಮುನ್ನ ಮಕ್ಕಳನ್ನು ಕೊಲೆಗೈದು ಪತ್ನಿಯೊಂದಿಗೆ ವೀರಾರ್ಜುನ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಕಾಡುಗೋಡಿ ಠಾಣಾ ಪೊಲೀಸರು ಹಾಗೂ … Read more

ಮಸೂದ್ ಕೊಲೆ ಪ್ರಕರಣ, ಓರ್ವ ಆರೋಪಿಗೆ ಜಾಮೀನು

ಸುಳ್ಯ:ಮಸೂದ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯೋರ್ವನಿಗೆ ಜಾಮೀನು ಸಿಕ್ಕಿದೆ. 8ನೇ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ.ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿರುವ ಬಗ್ಗೆ ವರದಿಯಾಗಿದೆ. ಪ್ರಕರಣದ 8ನೇ ಆರೋಪಿಯಾಗಿರುವ ಭಾಸ್ಕರ ಕೆ.ಎಂ. ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ.3 ರಂದು ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದು ಬಂದಿದೆ. 2022ರಲ್ಲಿ ಕಳಂಜದಲ್ಲಿ 8 ಮಂದಿ ಗೂಂಡಾಗಳ ತಂಡ ಮಸೂದ್ ಗೆ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ … Read more

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ನಟಿಯ ಬಾಳಲ್ಲಿ ವಿಧಿಯ ಆಟ; ಪತಿ ಹೃದಯಾಘಾತದಿಂದ ಮೃತ್ಯು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ನಟಿಯ ಬಾಳಲ್ಲಿ ವಿಧಿಯ ಆಟ; ಪತಿ ಹೃದಯಾಘಾತದಿಂದ ಮೃತ್ಯು ಚೆನ್ನೈ;ಚೆನ್ನೈ ಮೂಲದ ಫಿಟ್ನೆಸ್ ಮಾಡೆಲ್ ಮತ್ತು ಜನಪ್ರಿಯ ಕಿರುತೆರೆ ನಟಿ ಶ್ರುತಿ ಷಣ್ಮುಗ ಅವರ ಪತಿ ಅರವಿಂದ್ ಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ ಅವರ ಸಾವಿಗೆ ಹೃದಯ ಸ್ತಂಭನವೇ ಕಾರಣ ಎನ್ನಲಾಗಿದೆ.ಅರವಿಂದ್ ಶೇಖರ್, ತಮ್ಮ 30ನೇ ವರ್ಷದಲ್ಲಿ ಬುಧವಾರ ಹೃದಯ ಸ್ತಂಭನದಿಂದ ಮೃತಟಪಟ್ಟಿದ್ದಾರೆ. ಎದೆನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅವರಿಗೆ ಶೀಘ್ರ ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಲಾಗಲಿಲ್ಲ. … Read more

ಕೇರಳ ಪೊಲೀಸರು ವಶಕ್ಕೆ ಪಡೆದ ಕರ್ನಾಟಕದ ನಾಲ್ವರು ಪೊಲೀಸರ ಬಿಡುಗಡೆ; ಏನಿದು ಪ್ರಕರಣ ಗೊತ್ತಾ?

ಬೆಂಗಳೂರು: ಸೈಬರ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಲಂಚಕ್ಕೆ ಬೇಡಿಕೆ ಆರೋಪದಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರನ್ನು ಕೇರಳ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನ ವೈಟ್‍ಫೀಲ್ಡ್ ವಿಭಾಗದ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೇಬಲ್‍ಗಳಾದ ವಿಜಯ್‍ಕುಮಾರ್, ಶಿವನಿ ಹಾಗೂ ಕಾನ್ಸ್ ಟೇಬಲ್ ಸಂದೇಶ್ ಎಂಬುವರನ್ನು ಕಳಂಚೇರಿ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ ಆರೋಪಿಗಳಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಇವರ ಮೇಲಿತ್ತು.ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ … Read more

ಉಳ್ಳಾಲ; ಖರ್ಚಿಗೆ ಹಣ ಕೊಡಲಿಲ್ಲವೆಂದು ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ:ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತಾರ್ ಸುಭಾಷ್ ನಗರದಲ್ಲಿ ನಡೆದಿದೆ. ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ ಪುತ್ರ ಸುಶಾಂತ್(17)ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಪ್ರಥಮ ಪಿಯುಸಿಯನ್ನು ಮುಗಿಸಿದ್ದ ಸುಶಾಂತ್ ಗೆ ಡಿಪ್ಲೊಮಾಗೆ ನಿನ್ನೆ ಸೇರಿಸಲಾಗಿತ್ತು.ನಿನ್ನೆ 500ರೂ. ಕೊಟ್ಟು ಕಾಲೇಜಿಗೆ ಕಳುಹಿಸಿದ್ದರು. ಇಂದು ಬೆಳಿಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ ರೂ. 500 ಕೊಡುವಂತೆ ಕೇಳಿದಾಗ ನೀಡಿರಲಿಲ್ಲ.ಇದರಿಂದ ಕೋಪದಲ್ಲಿ ಮನೆಯಲ್ಲಿದ್ದ ಸುಶಾಂತ್ ಕೋಣೆಯೊಳಗೆ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. … Read more

ಲಕ್ಷಾಂತರ ರೂ. ಖರ್ಚು ಮಾಡಿ ನಾಯಿಯಾಗಿ ಬದಲಾದ ಮನುಷ್ಯ; ವಿಚಿತ್ರ ಸುದ್ದಿ

ಜಪಾನ್ ನ ಟೋಕೊ ಎಂಬಲ್ಲಿ ವ್ಯಕ್ತಿಯೋರ್ವ ಸುಮಾರು 13ಲಕ್ಷ ಖರ್ಚು ಮಾಡಿ ನಾಯಿಯಾಗಿ ಬದಲಾಗಿದ್ದು, ಸದ್ಯ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಪಾನ್‌ನಲ್ಲಿ ಮಾನವನೊಬ್ಬ ಶ್ವಾನವಾಗಿ ಬದಲಾಗಿದ್ದಾನೆ. ಮಾನವನಿಂದ ಶ್ವಾನವಾಗಿ ಬದಲಾಗಲು ಆತ 13.24 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂದು ವರದಿಯಾಗಿದೆ. ಜಪಾನ್‌ನ ಜೆಪೆಟ್ ಎಂಬ ಕಂಪನಿಯು ಈತನಿಗಾಗಿ ನಾಯಿಯ ಕಾಸ್ಟ್ಯೂಮ್ ತಯಾರಿಸಿದೆ.ಈಗ ಈತನು ನಾಲ್ಕು ಕಾಲಿನಿಂದ ಓಡಾಡಿಕೊಂಡಿದ್ದಾನೆ.ಯುವತಿಯೊಬ್ಬಳು ಕೊಲಿ ನಾಯಿಯನ್ನು ಹಿಡಿದುಕೊಂಡು ತಿರುಗಾಡುವ, ಆ ಕೃತಕ ನಾಯಿಯು ರಸ್ತೆ ಮೇಲೆ … Read more

ಪ್ರಧಾನಿ ಮೋದಿ & ಸಚಿವೆ ನಿರ್ಮಾಲಾ ಸೀತಾರಾಮನ್ ಅವರನ್ನು ಭೇಟಿಯಾದ ಸಿದ್ದರಾಮಯ್ಯ

ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಸಂಸತ್ ಭವನದಲ್ಲಿ ಸೌಹಾರ್ದಯುತ ಭೇಟಿ ವೇಳೆ ಪ್ರಧಾನಿ ಮೋದಿಗೆ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿದರು. ಜೊತೆಗೆ ಗಂಧದ ಮರದಿಂದ ಕೆತ್ತನೆ ಮಾಡಿದ ಮೈಸೂರು ದಸರಾ ಅಂಬಾರಿಯನ್ನು ನೀಡಿದರು. ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ … Read more

ಜ್ಞಾನವ್ಯಾಪಿ ಮಸೀದಿಗೆ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ

ನವದೆಹಲಿ;ಜ್ಞಾನವ್ಯಾಪಿ ಮಸೀದಿಗೆ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಸರ್ವೆ ನಡೆಸಲು ಪುರಾತತ್ವ ಇಲಾಖೆಗೆ ಅನುಮತಿ ನೀಡಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಜುಲೈ 27ರಂದು ನಡೆದ ವಿಚಾರಣೆ ವೇಳೆ ಸರ್ವಪಕ್ಷಗಳ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಎಎಸ್‌ಐ ಸಮೀಕ್ಷೆಗೆ ತಡೆ ನೀಡಿತ್ತು.ಇಂದು ಜ್ಞಾನವ್ಯಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿ ಅಲಹಾಬಾದ್ ಕೋರ್ಟ್ ತೀರ್ಪು ಪ್ರಕಟಿಸಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸಮೀಕ್ಷೆಯನ್ನು ಪ್ರಾರಂಭಿಸಬಹುದು ಎಂದು … Read more

ಬೆಳ್ತಂಗಡಿಯಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ; ಕರಾವಳಿಯಲ್ಲಿ ಮತ್ತೆ ಮುಂದುವರಿದ ಅನೈತಿಕ ಪೊಲೀಸ್ ಗಿರಿ

ಬೆಳ್ತಂಗಡಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ವರದಿಯಾಗಿದ್ದು, ಆಟೋ ಚಾಲಕನ‌ ಮೇಲೆ ಹಲ್ಲೆ ನಡೆಸಿರುವ ಘಟನೆ ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕನನ್ನು ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಎಂದು ಗುರುತಿಸಲಾಗಿದೆ. ಆ.2ರಂದು ರಾತ್ರಿ ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ರಾತ್ರಿ 9 ಗಂಟೆ ವೇಳೆಗೆ ಆಟೋದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಸಂಘಪರಿವಾರದ ಕಾರ್ಯಕರ್ತರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. … Read more