ವಿವಾಹ ವೇದಿಕೆ ಮೇಲೆ ವರನ ಕಾಲು ಹಿಡಿದು ಬಿಗಿದಪ್ಪಿಕೊಂಡ ಯುವತಿ, ವಿಡಿಯೋ ವೈರಲ್..

ಮದುವೆ ಸಮಾರಂಭದಲ್ಲಿ ವರನ ಕಾಲನ್ನು ಹಿಡಿದು ಯುವತಿಯೋರ್ವಳು ಬಿಗಿದಪ್ಪಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಅದ್ದೂರಿ ಮದುವೆಯ ಸಮಾರಂಭವನ್ನು ತೋರಿಸಲಾಗುತ್ತಿದೆ. ಒಬ್ಬ ಯುವತಿ ವರನ ಪಾದಗಳನ್ನು ಬಿಗಿದಪ್ಪಿಕೊಂಡಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಮದುವೆಯ ಸಂದರ್ಭದಲ್ಲಿ ಆಗಮಿಸಿದ ವರನ ಗೆಳತಿ ಎಂದು ಶೀರ್ಷಿಕೆ ಬರೆಯಲಾಗಿದೆ.ಇದನ್ನು ವಧುವೂ ನೋಡಿಯೂ ಆಶ್ಚರ್ಯಗೊಂಡಿದ್ದಾಳೆ. ಎಲ್ಲಿ ನಡೆದ ಘಟನೆಯ ವಿಡಿಯೋ ಎನ್ನುವುದು ಬಹಿರಂಗವಾಗಿಲ್ಲ. ಆದರೆ ಸಾಮಾಜಿಕ‌ ಮಾದ್ಯಮಗಳಲ್ಲಿ ವಿಡಿಯೋ ಬಾರೀ ವೈರಲ್ ಆಗಿದೆ.

ತನ್ನನ್ನು ತಾನೇ ವಿವಾಹವಾಗುವ 24 ವರ್ಷದ ಯುವತಿ; ವಿಚಿತ್ರ ಮತ್ತು ಭಾರತದ‌‌ ಮೊದಲ ಪ್ರಕರಣ

ತನ್ನನ್ನು ತಾನೇ ವಿವಾಹವಾಗುವ 24 ವರ್ಷದ ಯುವತಿ;ವಿಚಿತ್ರ ಮತ್ತು ಭಾರತದ‌‌ ಮೊದಲ ಪ್ರಕರಣ ಗಾಂಧೀನಗರ:ಯುವತಿಯೋರ್ವಳು ತನ್ನನ್ನು‌ ತಾನೇ ವಿವಾಹವಾಗಲು ಮುಂದಾಗಿರುವ ಘಟನೆ ಗುಜರಾತ್ ನಲ್ಲಿ‌‌ ನಡೆದಿದೆ. 24 ವರ್ಷದ ಯುವತಿ ತನ್ನನ್ನು ತಾನೇ ಜೂ.11ರಂದು ವಿವಾಹವಾಗಲಿದ್ದು, ಮದುವೆಯ ಎಲ್ಲ ವಿಧಾನಗಳ ನಂತರ ಗೋವಾಗೆ ಹನಿಮೂನ್‍ಗೆ ಹಾರಲಿದ್ದಾಳೆ. ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ, ತನ್ನನ್ನು ತಾನೇ ವಿವಾಹವಾಗುತ್ತಿದ್ದಾಳೆ. ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಷಮಾ, ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೂ ಈ … Read more

ತಾಳಿ ಕಟ್ಟುವ ವೇಳೆ ರದ್ಧಾದ ಮದುವೆ

ಲಖನೌ:ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರನ ತಲೆಯಿಂದ ವಿಗ್​ ಕಳಚಿ ಬಿದ್ದು, ಮದುವೆ ರದ್ದಾದ ಘಟನೆ ಉನ್ನಾವೋದಲ್ಲಿ ನಡೆದಿದೆ. ಕಾನ್ಪುರದ ವರ ಮದುವೆಯ ಅಂತಿಮ ಸಂಪ್ರದಾಯಕ್ಕಾಗಿ ಮಂಟಪಕ್ಕೆ ಬಂದಿದ್ದ. ಈ ವೇಳೆ ಅವನ ತಲೆಯಿಂದ ವಿಗ್ ಬೇರ್ಪಟ್ಟು ಹೊರಬಂದಿದೆ. ಆತನ ಬೋಳು ತಲೆಯನ್ನು ಎಲ್ಲರು ನೋಡಿದರು. ಮದುವೆಗೂ ಮುನ್ನ ವಧುವಿನ ಕುಟುಂಬಕ್ಕೆ ಹೇಳದೇ ಇದನ್ನು ಮರೆಮಾಚಲಾಗಿತ್ತು. ಯಾವಾಗ ಈ ವಿಚಾರ ವಧುವಿಗೆ ತಿಳಿಯಿತೋ ಆಕೆ ಮದುವೆ ಮಂಟಪಕ್ಕೆ ಬರದೆ ನನಗೆ ಆತ ಬೇಡ ಎಂದು ಪಟ್ಟು ಹಿಡಿದಿದ್ದಾಳೆ. ಈ … Read more

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯುವುದೇಗೆ ಗೊತ್ತಾ?

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯುವುದೇಗೆ ಗೊತ್ತಾ? ಈಗ ಕಾರ್ಡ್ ರಹಿತವಾಗಿಯೂ ಎಟಿಎಂನಿಂದ ಹಣ ಪಡೆಯುವ ವಿಧಾನ ಜಾರಿಗೆ ಬಂದಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಂತಹ ಪ್ರಮುಖ ಯುಪಿಐ ಅಪ್ಲಿಕೇಶನ್‌ಗಳೊಂದಿಗೆ ಕಾರ್ಡ್ ಬಳಸದೆ 5000 ದವರೆಗೆ ಹಣ ವಿತ್ ಡ್ರವಲ್ ಮಾಡಬಹುದು. ಕಾರ್ಡ್ ಗಳಿಲ್ಲದೆ ಹಣ ಹಿಂಪಡೆಯುವ ವಿಧಾನ; ಎಟಿಎಂಗೆ ಭೇಟಿ ನೀಡಿ ಮತ್ತು ಕ್ಯಾಶ್ ವಿತ್‌ಡ್ರಾ ಆಯ್ಕೆಯನ್ನು ಆರಿಸಿ. ಬಳಿಕ ಎಟಿಎಂ‌ ಮಷೀನ್ನಲ್ಲಿ ಯುಪಿಐ ಆಯ್ಕೆಯನ್ನು ಆಯ್ಕೆ ಮಾಡುವುದು. ಎಟಿಎಂ ಪರದೆಯ ಮೇಲೆ … Read more

ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು‌ ಬಿದ್ದು ವ್ಯಕ್ತಿಯೋರ್ವರು ಸಾವು: ಆಘಾತಕಾರಿ ಘಟನೆ

ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು‌ ಬಿದ್ದು ವ್ಯಕ್ತಿಯೋರ್ವರು ಸಾವು:ಆಘಾತಕಾರಿ ಘಟನೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆಯೇ ಕುಸಿದು‌ ಬಿದ್ದು ಮೃತಪಟ್ಟ ಘಟನೆಯ ವಿಡಿಯೋ ವೈರಲ್ ಆಗಿದೆ. ಮಹಿಳೆಯರ ಜೊತೆ ಡಾನ್ಸ್ ಮಾಡುತ್ತಿದ್ದ ವ್ಯಕ್ತಿ ಡ್ಯಾನ್ಸ್ ನಿಲ್ಲಿಸಿ ವೇದಿಕೆ ಪಕ್ಕದಲ್ಲಿ ಕುಳಿತಿದ್ದು, ತಕ್ಷಣ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ವೇಳೆ ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಅವರನ್ನು ಬದುಕಿಸಲು‌ ಸಾಧ್ಯವಾಗಿಲ್ಲ. ಈ ಬಗ್ಗೆ ಹಲವರು ವಿಡಿಯೋ‌ ಹಂಚಿಕೊಂಡಿದ್ದಾರೆ. ಹೃದಯಾಘಾತದ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಬರೊಬ್ಬರಿ 30 ವರ್ಷಗಳ ಕಾಲ ಪುರುಷರಂತೆ ವೇಷ ಬದಲಿಸಿ ಹೊಟೇಲ್ ಸೇರಿ ಹಲವೆಡೆ ಕೆಲಸ ಮಾಡಿದ್ದ ಮಹಿಳೆ; ಈಕೆ ಯಾಕೆ ಈ ರೀತಿ ಮಾಡಿದ್ದಳು ಗೊತ್ತಾ?

ತಮಿಳುನಾಡು; ಬರೊಬ್ಬರಿ 30 ವರ್ಷಗಳ‌‌ ಕಾಲ‌‌ ಮಹಿಳೆಯೋರ್ವರು ಜೀವನೋಪಾಯಕ್ಕಾಗಿ ಪುರುಷನಂತೆ ವೇಷ ಧರಿಸಿ ಕೆಲಸ‌‌ ಮಾಡಿ ಇದೀಗ ಸುದ್ದಿಯಾಗಿದ್ದಾರೆ‌. ತೂತುಕುಡಿ ಜಿಲ್ಲೆಯ ಕಟುನಾಯಕಕಂಪಟ್ಟಿ ಗ್ರಾಮದ ಪೆಚಿಯಮ್ಮಾಳ್ ಅವರಿಗೆ ವಿವಾಹವಾಗಿ ಕೆಲವ ತಿಂಗಳಲ್ಲಿ ಪತಿ ಮೃತಪಟ್ಟಿದ್ದರು. ಈ ಸಂಬಂಧದಲ್ಲಿ ಆಕೆಗೆ ಒಂದು ಮಗು ಕೂಡ ಜನಿಸಿತ್ತು. ಪತಿ ನಿಧನದಿಂದ ಮಗುವಿನ ಜವಾಬ್ದಾರಿ ತಾಯಿ ಹೆಗಲಿಗೆ ಬಿದ್ದಿತ್ತು. ಚೆನ್ನಾಗಿ ಸಾಕಲು ನಿರ್ಧಾರ ಮಾಡಿದ ಆಕೆ ಪುರುಷನಂತೆ ವೇಷ ಧರಿಸಿ ಕೂದಲನ್ನು ಕತ್ತರಿಸಿ ಲುಂಗಿ ಮತ್ತು ಶರ್ಟ್ ಧರಿಸಿ ಕೆಲಸ ಆರಂಭಿಸಿದರು. … Read more

ಸಿಎಂ ಕಾರ್ಯಕ್ರಮದಲ್ಲಿ ಹೊಡೆದಾಡಿಕೊಂಡ ಶಿಕ್ಷಕರು; ವಿಡಿಯೋ ವೈರಲ್

ಪಂಜಾಬ್; ಸಿಎಂ ಕಾರ್ಯಕ್ರಮದಲ್ಲಿ ಶಿಕ್ಷಕರು ಪ್ರಿನ್ಸ್ ಪಾಲ್ಸ್ ಹೊಡೆದಾಡಿಕೊಂಡ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಪಂಜಾಬ್‌ನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು, ಸಿಎಂ ಭಗವಂತ್ ಮಾನ್ ರೆಸಾರ್ಟ್‌ನಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಸಭೆಯನ್ನು ಏರ್ಪಡಿಸಿದ್ದರು. ಸಭೆಯಲ್ಲಿ, ಶಿಕ್ಷಕರ ಸಲಹೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಸಿಎಂ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ ನೀಡಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಿಕ್ಷಕರು- ಫ್ರಿನ್ಸಿಪಾಲ್ ಗಳು ಊಟಕ್ಕೆ ಮುಗಿಬಿದ್ದಿದ್ದಾರೆ.ಈ ವೇಳೆ ಶಿಕ್ಷಕರ ನಡುವೆಯೇ ಹೊಡೆದಾಟ ನಡೆದಿದೆ.

ದುಬೈ ಲಕ್ಕೀ ಡ್ರಾದಲ್ಲಿ 7 ಕೋಟಿ ಗೆದ್ದ ಮಲಯಾಳಿ; ಒಂದಲ್ಲ, ಇದು ಮೂರನೇ ಗೆಲುವು..ಯಾರು ಈ ಅದೃಷ್ಟಶಾಲಿ ಗೊತ್ತಾ?

ದುಬೈ ಲಕ್ಕೀ ಡ್ರಾದಲ್ಲಿ 7 ಕೋಟಿ ಗೆದ್ದ ಮಲಯಾಳಿ; ಒಂದಲ್ಲ, ಇದು ಮೂರನೇ ಗೆಲುವು..ಯಾರು ಈ ಅದೃಷ್ಟಶಾಲಿ ಗೊತ್ತಾ? ಕೇರಳ; ಕೇರಳ ಮೂಲದ ವ್ಯಕ್ತಿ ದುಬೈನಲ್ಲಿ ಬರೊಬ್ಬರಿ 7 ಕೋಟಿ ಲಕ್ಕೀ ಡ್ರಾ ಬಹುಮಾನ ಗೆದ್ದುಕೊಂಡಿದ್ದಾರೆ. ಸುನೀಲ್ ಶ್ರೀಧರ್ ಎಂಬ ವ್ಯಕ್ತಿ ‌ಈ ಅದೃಷ್ಟವಂತ. ದುಬೈಯ ಮಿಲ್ಲೇನಿಯಂ ಮಿಲಿಯನೇರ್ ಡ್ಯೂಟಿ ಫ್ರೀ ಲಕ್ಕೀ ಡ್ರಾದಲ್ಲಿ 7 ಕೋಟಿ ವಿಜೇತರಾಗಿದ್ದಾರೆ. ಶ್ರೀಧರ ಇದು ಮೂರನೇ ಬಾರಿ ಲಕ್ಕೀ ಡ್ರಾ ಗೆದ್ದುಕೊಂಡಿರುವುದು. ಇವರು ಈ ಹಿಂದೆ 2019ರಲ್ಲಿ ಒಂದು ದಶಲಕ್ಷ … Read more

ತುಮಕೂರಿನಲ್ಲಿ ನಮಗೆ ವಿವಾಹ ಮಾಡಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ ಇಬ್ಬರು ಯುವತಿಯರು

ತುಮಕೂರಿನಲ್ಲಿ ನಮಗೆ ವಿವಾಹ ಮಾಡಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ ಇಬ್ಬರು ಯುವತಿಯರು ತುಮಕೂರು: ಇಬ್ಬರು ಯುವತಿಯರು ನಮಗೆ ಮದುವೆ ಆಗಿ ಪರಸ್ಪರ ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ‌. ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ತುಮಕೂರಿನಲ್ಲೇ ವಾಸಿಸುತ್ತಿದ್ದರು. ಕೆಲದಿನಗಳ ಹಿಂದೆ ಕಾಣೆಯಾಗಿದ್ದ ಈ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ. ಆದರೆ ಇದಕ್ಕೆ ಪೊಲೀಸರು … Read more

ಪುಲ್‌ ಟೈಟ್ ಆಗಿ ತಹಶೀಲ್ದಾರ್ ಕಚೇರಿಯ‌ ಮುಂದೆ ಮಲಗಿದ ಗ್ರಾಮ ಲೆಕ್ಕಾಧಿಕಾರಿ

ಬೆಳಗಾವಿ; ಸವದತ್ತಿ ತಾಲೂಕಿನಲ್ಲಿ ಕರ್ತವ್ಯದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿ ಕಂಠಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಮುಂದೆ ಮಲಗಿರುವ ಪೋಟೋ ಭಾರೀ‌ ವೈರಲ್‌ ಅಗಿದೆ. ಸಂಜು ಬೆಣ್ಣಿ ಎಂಬ ಗ್ರಾಮ ಲೆಕ್ಕಾಧಿಕಾರಿ ಮದ್ಯಪಾನ ಮಾಡಿ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ಮಲಗಿದವರು. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ದುರ್ವರ್ತನೆ ತೋರಿದ ಅಧಿಕಾರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿದು ಮಲಗಿರುವ ಗ್ರಾಮ ಲೆಕ್ಕಾಧಿಕಾರಿಯ ಫೋಟೋ ವೈರಲ್ ಆಗಿದ್ದು,ಅಧಿಕಾರಿ ಮೇಲೆ ಕ್ರಮಕ್ಕೆ‌ ಆಗ್ರಹ ಕೇಳಿ ಬಂದಿದೆ.