ಮೊದಲ ಏಕದಿನ ಪಂದ್ಯ: ವಿಂಡೀಸ್ ವಿರುದ್ಧ ಜಯ ಸಾಧಿಸಿದ ಟೀಂ ಇಂಡಿಯಾ!

ಬ್ರಿಡ್ಜ್ಟೌನ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡಿಯಾ ತಂಡ ಕೇವಲ 114 ರನ್ ಗಳಿಗೆ ಆಲೌಟ್ ಆಯಿತು.ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 5 ವಿಕೆಟ್ ಗಳ ಗೆಲುವು ಸಾಧಿಸಿದೆ. ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಜೋಡಿ ಬ್ಯಾಟಿಂಗ್ ಆರಂಭಿಸಿದ್ದು 52 ರನ್ ಪೇರಿಸಿದ್ದರೆ, ಶುಭಮನ್ ಗಿಲ್ 7 ರನ್ ಗಳಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ … Read more

ಗೋಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ ಪ್ರಸ್ರಾಪ ಇಲ್ಲ-ಸಚಿವ ವೆಂಕಟೇಶ್

ಬೆಂಗಳೂರು:ಗೋಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವ ಕರ್ನಾಟಕ ಸರ್ಕಾರದ ಮುಂದಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಬುಧವಾರ ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಅಕ್ರಮ ಗೋಸಾಗಾಟ ಮಾಡುವವರ ವಿರುದ್ಧ ಕ್ರಮಕೈಗೊಂಡಿಲ್ಲ.ಗೋ ಸಂರಕ್ಷಣೆ ವಿಧೇಯಕ ಹಿಂಪಡೆಯುವ ಬಗ್ಗೆ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಎಂಎಲ್​ಸಿ ಎನ್ ರವಿಕುಮಾರ್ ಆಗ್ರಹಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ಕರ್ನಾಟಕ ವಧೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ … Read more

ಭೀಕರ ಅಪಘಾತ; ಮಾಜಿ ಕ್ರಿಕೆಟಿಗನಿಗೆ ಗಂಭೀರ ಗಾಯ, ಪತ್ನಿ ಸಾವು

ಮಹಾರಾಷ್ಟ್ರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಮಾಜಿ ರಣಜಿ ಕ್ರಿಕೆಟಿಗ ಪ್ರವೀಣ್ ಹಿಂಗ್ನಿಕರ್ ಗಾಯಗೊಂಡಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ರಣಜಿ ಕ್ರಿಕೆಟಿಗ ಮತ್ತು ಕೋಚ್ ಪ್ರವೀಣ್ ಹಿಂಗ್ನಿಕರ್ ಅವರು ಗಾಯಗೊಂಡಿದ್ದು, ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ಹಿಂಗ್ನಿಕರ್ ಅವರನ್ನು ಚಿಕಿತ್ಸೆಗಾಗಿ ಮೆಹಕರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ದಂಪತಿ ಪುಣೆಯಲ್ಲಿರುವ ತಮ್ಮ ಮಗನ ಮನೆಗೆ ಭೇಟಿ ನೀಡಿ ಪುಣೆಯಿಂದ … Read more

ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಗೆದ್ದ ಹಣದಿಂದ ತಂದೆ-ತಾಯಿಯನ್ನು ಉಮ್ರಾ ಯಾತ್ರೆಗೆ ಕಳುಹಿಸಲು ಮುಂದಾದ ನಿಖತ್ ಜರೀನ್

ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ನಿಖತ್ ಜರೀನ್ ಈ ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಬಾಕ್ಸಿಂಗ್‌ ಫೈನಲ್ ನಲ್ಲಿ ಗೆದ್ದ ಹಣದಿಂದ ತಂದೆ-ತಾಯಿಯನ್ನು ಉಮ್ರಾ ಯಾತ್ರೆಗೆ ಕಳುಹಿಸುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ವಿರುದ್ಧ ನಿಖತ್ 5-0 ಅಂತರದಿಂದ ಗೆದ್ದು ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಅವರು 1,00,000 ಯುಸ್ ಡಾಲರ್ ಸರಿಸುಮಾರು 82 ಲಕ್ಷ ಹಣ ಗೆದ್ದುಕೊಂಡಿದ್ದು. ಹಣದ ವಿಜೇತರ ಚೆಕ್ ಮತ್ತು ಪ್ರಾಯೋಜಕರಾದ ಮಹೀಂದ್ರಾ ಅವರಿಂದ … Read more

ಉಮ್ರಾ ಯಾತ್ರೆಗೆ ತೆರಳಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರಂಜಾನ್ ವೇಳೆ ಉಮ್ರಾ ನಿರ್ವಹಿಸಲು ಕುಟುಂಬ ಸಮೇತ ಮದೀನಾಕ್ಕೆ ತೆರಳಿದ್ದಾರೆ. ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಫೋಟೋಗಳನ್ನು ಸಾನಿಯಾ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರ ಪೋಷಕರು, ಇಮ್ರಾನ್ ಮಿರ್ಜಾ ಮತ್ತು ನಸಿಮಾ ಮಿರ್ಜಾ, ಅವರ ಸಹೋದರಿ ಅನಮ್ ಮಿರ್ಜಾ, ಅವರ ಸೋದರ ಮಾವ ಮೊಹಮ್ಮದ್ ಅಸಾದುದ್ದೀನ್ ಮತ್ತು ಅವರ ಮಗ ಇಜಾನ್ ಮಿರ್ಜಾ ಮಲಿಕ್ ಸೇರಿದ್ದಾರೆ. ಫೋಟೋಗೆ ಸಾನಿಯಾ ಹೀಗೆ ಶೀರ್ಷಿಕೆ ನೀಡಿದ್ದಾರೆ; ಅಲ್ಹಮ್ದುಲಿಲ್ಲಾ, ಅಲ್ಲಾಹನು ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ ಎಂದು ಪೋಸ್ಟ್ ಮಾಡಿದ್ದಾರೆ. … Read more

ಲಿಯೋನೆಲ್ ಮೆಸ್ಸಿಗೆ 2022 ರ ಅತ್ಯುತ್ತಮ ಫಿಫಾ ಪುರುಷ ಆಟಗಾರ ಪ್ರಶಸ್ತಿ

ಪ್ಯಾರಿಸ್‌: ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ 2022 ರ ಅತ್ಯುತ್ತಮ ಫಿಫಾ ಪುರುಷ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದರ ಜೊತೆಗೆ ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ 2022 ರ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಅರಬ್​ ರಾಷ್ಟ್ರವಾದ ಕತಾರ್​ನಲ್ಲಿ ನಡೆದ ಪುಟ್ ಬಾಲ್ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಫ್ರಾನ್ಸ್​ನ್ನು ಮಣಿಸಿತ್ತು. 2022 ರ ಅತ್ಯುತ್ತಮ ಫಿಫಾ ಪುರುಷರ ಆಟಗಾರ ಪ್ರಶಸ್ತಿ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ತಂಡದ ಸಹ ಆಟಗಾರ ಕೈಲಿಯನ್ … Read more

ಟರ್ಕಿ; ಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಮೃತದೇಹ ಹಲವು ದಿನಗಳ ಕಾರ್ಯಾಚರಣೆ ಬಳಿಕ ಅವಶೇಷಗಳಡಿ ಪತ್ತೆ

ಟರ್ಕಿ;ಭೂಕಂಪನದ ವೇಳೆ ನಾಪತ್ರೆಯಾಗಿದ್ದ ಘಾನಾದ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ಅವರ ಮೃತದೇಹ ಪತ್ತೆಯಾಗಿದೆ. ಹಟಾಯ್ನ ಅಂಟಕ್ಯ ನಗರದಲ್ಲಿ ಎತ್ತರದ ಐಷಾರಾಮಿ ಫ್ಲ್ಯಾಟ್ಗಳ ಬ್ಲಾಕ್ ರೋನೆಸನ್ಸ್ ರೆಸಿಡೆನ್ಸಿಯಲ್ಲಿ ಅಟ್ಸು ಅವರ ಶವವನ್ನು ಪತ್ತೆ ಮಾಡಲಾಗಿದೆ‌. ದಕ್ಷಿಣ ಟರ್ಕಿಯಲ್ಲಿ ವಾಸಿಸುತ್ತಿದ್ದ ಕಟ್ಟಡದ ಅಡಿಯಲ್ಲಿ ಅಟ್ಸು ಅವರ ದೇಹವು ಹಲವು ದಿನಗಳ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ‌‌. ಭೂಕಂಪ ಸಂಭವಿಸಿದ ಒಂದು ದಿನದ ನಂತರ ಅವರನ್ನು ರಕ್ಷಿಸಲಾಗಿದೆ ಎಂದು ಆರಂಭಿಕ ವರದಿಗಳು ತಿಳಿಸಿದ್ದವು, ಆದರೆ ಇವು ಸುಳ್ಳು ಸುದ್ದಿಯಾಗಿದ್ದು, ಇದೀಗ ಮೃತದೇಹ … Read more

ಮಂಗಳೂರು; ಗಿನ್ನೆಸ್ ದಾಖಲೆ ಬರೆದ ದೇರಳಕಟ್ಟೆಯ ಯುವಕ

ಮಂಗಳೂರು;ದೇರಳಕಟ್ಟೆಯ ಯುವಕ ಮೊಹಮ್ಮದ್ ಶಲೀಲ್ ಫುಟ್ಬಾಲ್‌ನಲ್ಲಿ ಗಿನ್ನೆಸ್‌ ನ ವಿಶ್ವದ ಇಬ್ಬರ ದಾಖಲೆ ಮುರಿದು ತನ್ನದೇ ಆದ ಹೊಸ ದಾಖಲೆ ಬರೆದಿದ್ದಾರೆ. ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಕೇವಲ 30 ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ 10 ರೌಂಡ್‌ಗಳ ನಟ್ ಮೆಗ್ ಸಾಧಿಸುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ‌. 2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಎಂಬವರು 30 ಸೆಕೆಂಡುಗಳಲ್ಲಿ 7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು.2021ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕಾ … Read more

ಕೊನೆಯ ಪಂದ್ಯ ಎನ್ನುತ್ತಾ ಕಣ್ಣೀರಿಟ್ಟ ಸಾನಿಯಾ‌ ಮಿರ್ಜಾ

ಆಸ್ಟ್ರೇಲಿಯನ್ ಓಪನ್ 2023ರ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಪರಾಭವದ ಬಳಿಕ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯದ ಬಳಿಕ ಭಾವುಕರಾಗಿದ್ದಾರೆ‌. ಸಾನಿಯಾ ಅವರ ಕೊನೆಯ ಗ್ರ್ಯಾನ್ ಸ್ಲಾಮ್ ಇದಾಗಿತ್ತು. ಯುಎಇಯಲ್ಲಿ ಡಬ್ಲ್ಯುಟಿಎ 1000 ಚಾಂಪಿಯನ್‌ಶಿಪ್ ಆಡಿದ ಬಳಿಕ ಟೆನಿಸ್‌ಗೆ ವಿದಾಯ ಹೇಳುವುದಾಗಿ ಸಾನಿಯಾ ಈ ಹಿಂದೆ ಘೋಷಿಸಿದ್ದರು. ಪಂದ್ಯದ ನಂತರ ಸಾನಿಯಾ ಭಾವುಕರಾಗಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಇದು ಸಂತೋಷದ ಕಣ್ಣೀರು. ನಾನು ಇನ್ನೂ ಎರಡು ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕಾಗಿದೆ. ಆದರೆ ನನ್ನ … Read more

ತನ್ನ ಹೊಸ ಮನೆಗೆ ಬಾಣಸಿಗನನ್ನು ಹುಡುಕಾಟ ನಡೆಸುತ್ತಿರುವ ಖ್ಯಾತ ಪುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ; ವೇತನ ಎಷ್ಟು ಗೊತ್ತಾ?

ಖ್ಯಾತ ಪುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಬಾಣಸಿಗನನ್ನು ಹುಡುಕಾಟ ನಡೆಸುತ್ತಿದ್ದಾರೆ. ರೊನಾಲ್ಡೋ ಹಾಕಿರುವ ಷರತ್ತುಗಳಿಗೆಲ್ಲ ಒಕೆ ಎನ್ನುವ ಬಾಣಸಿಗ ಸಿಕ್ಕರೆ ಆತನಿಗೆ ತಿಂಗಳಿಗೆ 4500 ಪೌಂಡ್ (ಸುಮಾರು 4.5 ಲಕ್ಷ ರೂ.) ಸಂಬಳ ನೀಡಲಾಗುತ್ತದೆ ಎಂದು ವರದಿಯೊಂದು ಹೇಳಿದೆ. ರೊನಾಲ್ಡೊ ಮತ್ತು ಅವರ ಪತ್ನಿ ಜಾರ್ಜಿನಾ ರೊಡ್ರಿಗಸ್ ಅವರು ಸಾಂಪ್ರದಾಯಿಕ ಪೋರ್ಚುಗೀಸ್ ಭಕ್ಷ್ಯಗಳು ಮತ್ತು ಅಂತರಾಷ್ಟ್ರೀಯ ಆಹಾರ ಎರಡನ್ನೂ ತಾಯಾರಿಸುವ ನಿಪುಣ ಬಾಣಸಿಗರನ್ನು ಹುಡುಕಾಟ ನಡೆಸುತ್ತಿದ್ದಾರೆ. ರೊನಾಲ್ಡೊ ತನ್ನ ಕುಟುಂಬಕ್ಕಾಗಿ ಪೋರ್ಚುಗಲ್‌ನ ಕ್ವಿಂಟಾ ಡ ಮರಿನ್ಹಾದಲ್ಲಿ ಐಷಾರಾಮಿ … Read more