ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತ್ಯು

ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತಪಟ್ಟ ಘಟನೆ ಗುಜರಾತ್ ನ ಭಾವನಗರದ ಸುಭಾಷ್‌ನಗರ ಪ್ರದೇಶದಲ್ಲಿ ನಡೆದಿದೆ. ಭರವಾಡ ಕುಟುಂಬದ ಜಿನಾಭಾಯಿ ಭಾಕಾಭಾಯಿ ರಾಥೋಡ್ ಎಂಬವರ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನ ವಿವಾಹ ನಿಗದಿಯಾಗಿತ್ತು. ಮದುವೆಯ ವೇಳೆ ಜಿನಾಭಾಯಿ ಅವರ ಮಗಳು ಹೇತಾಳ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ತಕ್ಷಣವೇ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.ತಪಾಸಣೆ ನಡೆಸಿದ ವೈದ್ಯರು ಯುವತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

10ನೇ ತರಗತಿಯಲ್ಲಿ ಇಂಗ್ಲೀಷ್‌ನಲ್ಲಿ 35, ಗಣಿತದಲ್ಲಿ 36 ಅಂಕ ಪಡೆದ ಬಾಲಕ ಈಗ ಜಿಲ್ಲಾಧಿಕಾರಿ!

10ನೇ ತರಗತಿಯಲ್ಲಿ ಜಸ್ಟ್ ಪಾಸ್ ಆಗಿದ್ದ ಬಾಲಕನೋರ್ವ ಇವತ್ತು ಬೆಳೆದು ಐಎಎಸ್‌ ಅಧಿಕಾರಿ ಆಗಿದ್ದು, ಭಾರೀ ನೆಟ್ಟಿನಲ್ಲಿ ಹವಾ ಸೃಷ್ಟಿಸಿದ್ದಾರೆ. ಹೌದು, ತುಷಾರ್ ಸುಮೇರಾ, ಐಎಎಸ್ ಅಧಿಕಾರಿಯಾದ ಇವರು ಗುಜರಾತ್‌ನ ಭರೂಚ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 10ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 100 ಕ್ಕೆ 35 ಅಂಕಗಳನ್ನು, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕಗಳನ್ನು ಗಳಿಸಿದ್ದರು. ಇವರ ಅಂಕಪಟ್ಟಿಯನ್ನು ಮತ್ತೋರ್ವ ಐಎಎಸ್‌ ಅಧಿಕಾರಿ ಅವನೀಶ್ ಶರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಧನೆಗೆ ಅಂಕಪಟ್ಟಿ … Read more

ಸಾವಿನ ಬಳಿಕ ನಿಮ್ಮ ಸೋಶಿಯಲ್ ‌ಮೀಡಿಯಾ ಎಕೌಂಟ್ ಏನಾಗಲಿದೆ? ಬೇರೆಯವರು ಬಳಸದಂತೆ ಮಾಡಲು ಏನು ಮಾಡಬೇಕು ಗೊತ್ತಾ?

  ವ್ಯಕ್ತಿಯ ಸಾವಿನ ಬಳಿಕ ಆತನ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಗಳನ್ನು ಬೇರೆಯವರು ಬಳಕೆಗೆ ಅವಕಾಶ ಇದೆಯಾ? ಈ ರೀತಿ ಇಂದಿನ ಇಂಟರ್ ನೆಟ್ ಯುಗದಲ್ಲಿ ಜನರಿಗೆ ‌ಪ್ರಶ್ನೆ‌ ಮೂಡುವುದು ಸಹಜ. ಹೌದು ಕೆಲವು ಸಾಮಾಜಿಕ‌ ಮಾದ್ಯಮಗಳು ಈ‌ ಬಗ್ಗೆ ಜನರಿಗೆ ಅವಕಾಶವನ್ನು ‌ಕೂಡ‌ ಮಾಡಿಕೊಟ್ಟಿದೆ. ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್, ಇನ್​​ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆ ಏನಾಗುತ್ತದೆ? ಫೇಸ್​ಬುಕ್: ಎಲ್ಲಾ ಸಾಮಾಜಿಕ‌ ಜಾಲತಾಣಕ್ಕೂ ಖಾಸಗಿ ನಿಯಮಗಳಿವೆ. ಫೇಸ್‌ಬುಕ್ ಅಂತೂ ನೀವು ಸತ್ತ ಮೇಲೆ ನಿಮ್ಮ ಖಾತೆಯನ್ನು … Read more

ವಾಟ್ಸಾಪ್ ಮೂಲಕ 1ರೂ.‌ಕಳುಹಿಸಿದ್ರೆ ಸಿಗಲಿದೆ 105 ಕ್ಯಾಶ್ ಬ್ಯಾಕ್; ವಾಟ್ಸಾಪ್ ಪೇ ನಿಂದ ಜನರಿಗೆ ಗುಡ್ ನ್ಯೂಸ್

ವಾಟ್ಸಾಪ್‌ ಪೇ ಬಳಸಿಕೊಂಡು ಹಣಕಾಸಿನ ಪಾವತಿಯನ್ನು ಮಾಡಿದರೆ ಭಾರತದಲ್ಲಿನ ಬಳಕೆದಾರರಿಗೆ ಸಂಸ್ಥೆಯು 105 ರೂ. ಕ್ಯಾಶ್‌ಬ್ಯಾಕ್‌ ನೀಡುವುದಾಗಿ ಘೋಷಿಸಿದೆ. ಭಾರತದಲ್ಲಿ ಸಾಮಾನ್ಯವಾಗಿ ಗೂಗಲ್‌ ಪೇ, ಫೋನ್‌ ಪೇ ಹಾಗೂ ಪೇಟಿಎಂ ಆಪ್‌ಗಳು ಹೆಚ್ಚಾಗಿ ಬಳಕೆಯಲ್ಲಿವೆ.ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯಲು ವಾಟ್ಸಾಪ್ ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಗೆ ಮುಂದಾಗಿದೆ. ವಾಟ್ಸಾಪ್‌ ಪೇ ಆಯ್ದ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್‌ ನೀಡುತ್ತಿದೆ. ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮುಂದಿನ ಮೂರು ಪಾವತಿಗಳಿಗೆ ತಲಾ 35 ರೂ. ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಉದಾಹರಣೆಗೆ, ಬಳಕೆದಾರರು ವಾಟ್ಸಾಪ್ ಪಾವತಿ ಮೂಲಕ … Read more

ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ್ದಕ್ಕೆ ಪ್ರಾಧ್ಯಾಪಕರಿಗೆ ಶಿಕ್ಷೆ!

ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ್ದಕ್ಕೆ ಪ್ರಾಧ್ಯಾಪಕರಿಗೆ ಶಿಕ್ಷೆ! ಅಲಿಘರ್:‌ ಕಾಲೇಜ್‌ ಕ್ಯಾಂಪಸ್ ನಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೋರ್ವರ ನಮಾಝ್ ವಿಡಿಯೋ ವೈರಲ್ ಬೆನ್ನಲ್ಲೆ ಪ್ರಾಧ್ಯಾಪಕರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಅಚ್ಚರಿ ಘಟನೆ ವರದಿಯಾಗಿದೆ. ವೈರಲ್ ವೀಡಿಯೋದಲ್ಲಿ, ಅಲಿಘರ್‌ ನ ಶ್ರೀವರ್ಷಿ ಕಾಲೇಜ್ ನ ಕ್ಯಾಂಪಸ್‌ ನೊಳಗಿನ ಉದ್ಯಾನವನದಲ್ಲಿ ಅಲ್ಲಿನ ಪ್ರಾಧ್ಯಾಪಕರಾದ ಪ್ರೊಫೆಸರ್‌ ಎಸ್‌.ಕೆ ಖಾಲಿದ್‌ ಅವರು ನಮಾಝ್‌ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ವೀಡಿಯೋವನ್ನು ಕೆಲವರು ಸೆರೆ ಹಿಡಿದು‌ ಕಾಲೇಜಿನ ಅಧಿಕಾರಿಗಳಿಗೆ ಕಳುಹಿಸಿ ಕ್ರಮಕ್ಕೆ … Read more

ತಾಳಿ ಕಟ್ಟುವ ವೇಳೆ ರದ್ಧಾದ ಮದುವೆ

ಲಖನೌ:ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರನ ತಲೆಯಿಂದ ವಿಗ್​ ಕಳಚಿ ಬಿದ್ದು, ಮದುವೆ ರದ್ದಾದ ಘಟನೆ ಉನ್ನಾವೋದಲ್ಲಿ ನಡೆದಿದೆ. ಕಾನ್ಪುರದ ವರ ಮದುವೆಯ ಅಂತಿಮ ಸಂಪ್ರದಾಯಕ್ಕಾಗಿ ಮಂಟಪಕ್ಕೆ ಬಂದಿದ್ದ. ಈ ವೇಳೆ ಅವನ ತಲೆಯಿಂದ ವಿಗ್ ಬೇರ್ಪಟ್ಟು ಹೊರಬಂದಿದೆ. ಆತನ ಬೋಳು ತಲೆಯನ್ನು ಎಲ್ಲರು ನೋಡಿದರು. ಮದುವೆಗೂ ಮುನ್ನ ವಧುವಿನ ಕುಟುಂಬಕ್ಕೆ ಹೇಳದೇ ಇದನ್ನು ಮರೆಮಾಚಲಾಗಿತ್ತು. ಯಾವಾಗ ಈ ವಿಚಾರ ವಧುವಿಗೆ ತಿಳಿಯಿತೋ ಆಕೆ ಮದುವೆ ಮಂಟಪಕ್ಕೆ ಬರದೆ ನನಗೆ ಆತ ಬೇಡ ಎಂದು ಪಟ್ಟು ಹಿಡಿದಿದ್ದಾಳೆ. ಈ … Read more

ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು‌ ಬಿದ್ದು ವ್ಯಕ್ತಿಯೋರ್ವರು ಸಾವು: ಆಘಾತಕಾರಿ ಘಟನೆ

ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು‌ ಬಿದ್ದು ವ್ಯಕ್ತಿಯೋರ್ವರು ಸಾವು:ಆಘಾತಕಾರಿ ಘಟನೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆಯೇ ಕುಸಿದು‌ ಬಿದ್ದು ಮೃತಪಟ್ಟ ಘಟನೆಯ ವಿಡಿಯೋ ವೈರಲ್ ಆಗಿದೆ. ಮಹಿಳೆಯರ ಜೊತೆ ಡಾನ್ಸ್ ಮಾಡುತ್ತಿದ್ದ ವ್ಯಕ್ತಿ ಡ್ಯಾನ್ಸ್ ನಿಲ್ಲಿಸಿ ವೇದಿಕೆ ಪಕ್ಕದಲ್ಲಿ ಕುಳಿತಿದ್ದು, ತಕ್ಷಣ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ವೇಳೆ ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಅವರನ್ನು ಬದುಕಿಸಲು‌ ಸಾಧ್ಯವಾಗಿಲ್ಲ. ಈ ಬಗ್ಗೆ ಹಲವರು ವಿಡಿಯೋ‌ ಹಂಚಿಕೊಂಡಿದ್ದಾರೆ. ಹೃದಯಾಘಾತದ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ದಲಿತ ಯುವಕನಿಗೆ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ

ದಲಿತ ಯುವಕನಿಗೆ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ದಾವಣಗೆರೆ(16-05-2022): ದಲಿತ ಯುವಕನಿಗೆ ಎರಡು‌ ದಿನ ಮಂಟಪದಲ್ಲಿ ಕಂಬಕ್ಕೆ ಕಟ್ಟಿ ಹಾಕಿ ತಂಡವೊಂದು ಮನಬಂದಂತೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ ಘಟನೆ ಅತ್ತಿಗೆರಿಯಲ್ಲಿ ನಡೆದಿದೆ. ಗಣೇಶ್ (21) ಎಂಬ ಯುವಕನ‌ ಮೇಲೆ ಗಂಭೀರ ಹಲ್ಲೆ ನಡೆದಿದೆ. ಯುವತಿಗೆ ಸಂದೇಶ ಕಳುಹಿಸಿದ ಆರೋಪದಲ್ಲಿ ಕೃತ್ಯ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಕಾರ್ತಿಕ್ ಎಂಬವನನ್ನು ಮಾಯಕೊಂಡ ಪೊಲೀಸರು ಬಂಧಿಸಿದ್ದು, ಒಟ್ಟು ಮೂವರ ವಿರುದ್ದ ಕೇಸ್ ದಾಖಲಾಗಿದೆ. ಈ ಬಗ್ಗೆ … Read more

ಬರೊಬ್ಬರಿ 30 ವರ್ಷಗಳ ಕಾಲ ಪುರುಷರಂತೆ ವೇಷ ಬದಲಿಸಿ ಹೊಟೇಲ್ ಸೇರಿ ಹಲವೆಡೆ ಕೆಲಸ ಮಾಡಿದ್ದ ಮಹಿಳೆ; ಈಕೆ ಯಾಕೆ ಈ ರೀತಿ ಮಾಡಿದ್ದಳು ಗೊತ್ತಾ?

ತಮಿಳುನಾಡು; ಬರೊಬ್ಬರಿ 30 ವರ್ಷಗಳ‌‌ ಕಾಲ‌‌ ಮಹಿಳೆಯೋರ್ವರು ಜೀವನೋಪಾಯಕ್ಕಾಗಿ ಪುರುಷನಂತೆ ವೇಷ ಧರಿಸಿ ಕೆಲಸ‌‌ ಮಾಡಿ ಇದೀಗ ಸುದ್ದಿಯಾಗಿದ್ದಾರೆ‌. ತೂತುಕುಡಿ ಜಿಲ್ಲೆಯ ಕಟುನಾಯಕಕಂಪಟ್ಟಿ ಗ್ರಾಮದ ಪೆಚಿಯಮ್ಮಾಳ್ ಅವರಿಗೆ ವಿವಾಹವಾಗಿ ಕೆಲವ ತಿಂಗಳಲ್ಲಿ ಪತಿ ಮೃತಪಟ್ಟಿದ್ದರು. ಈ ಸಂಬಂಧದಲ್ಲಿ ಆಕೆಗೆ ಒಂದು ಮಗು ಕೂಡ ಜನಿಸಿತ್ತು. ಪತಿ ನಿಧನದಿಂದ ಮಗುವಿನ ಜವಾಬ್ದಾರಿ ತಾಯಿ ಹೆಗಲಿಗೆ ಬಿದ್ದಿತ್ತು. ಚೆನ್ನಾಗಿ ಸಾಕಲು ನಿರ್ಧಾರ ಮಾಡಿದ ಆಕೆ ಪುರುಷನಂತೆ ವೇಷ ಧರಿಸಿ ಕೂದಲನ್ನು ಕತ್ತರಿಸಿ ಲುಂಗಿ ಮತ್ತು ಶರ್ಟ್ ಧರಿಸಿ ಕೆಲಸ ಆರಂಭಿಸಿದರು. … Read more

ಕಾಸರಗೋಡು; ಖ್ಯಾತ ನಟಿ ಸಹನಾ ಅನುಮಾನಾಸ್ಪದವಾಗಿ ಸಾವು; ಪತಿ ಸಜ್ಜಾದ್ ವಿರುದ್ಧ ಪೋಷಕರು ಕೊಲೆ ಆರೋಪ

ಕಾಸರಗೋಡು; ಖ್ಯಾತ ನಟಿ ಸಹನಾ ಅನುಮಾನಾಸ್ಪದವಾಗಿ ಸಾವು ಕೇರಳ(13-05-2022): ಕಾಸರಗೋಡಿನ ಮಾಡೆಲ್ ಹಾಗೂ ನಟಿಯೊಬ್ಬರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಪತ್ತೆಯಾಗಿದೆ. ಸಹನಾ (20) ಅವರ ಮೃತದೇಹ ಪತ್ತೆಯಾಗಿದೆ. ಈಕೆ ಕಾಸರಗೋಡಿನ ಛೆರುವಥೂರು ಮೂಲದ ನಿವಾಸಿಯಾಗಿದ್ದು, ಕಳೆದ ರಾತ್ರಿ ಕೊಯಿಕ್ಕೋಡಿನ ಬಾಡಿಗೆ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸಹನಾ ಒಂದೂವರೆ ವರ್ಷಗಳ ಹಿಂದೆ ಸಜಾದ್ ರನ್ನು ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿಂದೊಮ್ಮೆ ಕೊಲೆ ಮಾಡುವುದಾಗಿ ಸಜಾದ್ ಬೆದರಿಕೆ ಹಾಕಿದ್ದ. ಆಕೆಯ ಸಾವಿನ … Read more