ನಿಜ್ಜರ್ ಸಲಿಂಗಕಾಮಿ( ಗೇ), ಕೆನಡಾ ಪ್ರಧಾನಿ ಅವನನ್ನು ಇಷ್ಟಪಡುತ್ತಿದ್ದರು!; ಬಿಜೆಪಿ ನಾಯಕನ‌ ಪೋಸ್ಟ್ ವೈರಲ್.‌

ನವದೆಹಲಿ; ಬಿಜೆಪಿಯ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಸೋಮವಾರ ಚರ್ಚಾಸ್ಪದ ಹೇಳಿಕೆ ನೀಡಿದ್ದು, ಹತ್ಯೆಯಾದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಸಲಿಂಗಕಾಮಿ(ಗೇ) ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ನಿಜ್ಜರ್‌ ಇನ್ನೊಬ್ಬರಿಗಾಗಿ ಟ್ರುಡೋ ಅವರನ್ನು ದೂರ ಮಾಡಿದ್ದರು. ನಿಜ್ಜರ್ ಕೊಲೆಗೆ ಇದೇ ಕಾರಣವೇ ಎಂದು ಅವರು ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ. ನಿಜ್ಜರ್‌ ಅವರು ಕೆಲ ಪುರುಷರೊಂದಿಗೆ … Read more

ಮದುವೆ ಹಾಲ್ ನಲ್ಲಿ ಅಗ್ನಿ ಅವಘಡ; 100 ಮಂದಿ ದುರ್ಮರಣ

ಇರಾಕ್ ನ ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾಕ್ನ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಇದು ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್ ನ ಹೊರಗೆ ನಡೆದಿರುವಂತಹ ಘಟನೆಯಾಗಿದೆ. ಬೆಂಕಿಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ತಿಳಿದು ಬಂದಿಲ್ಲ. ಟೆಲಿವಿಷನ್ ದೃಶ್ಯಾವಳಿಗಳು ಮದುವೆ ಮಂಟಪದ ಒಳಗೆ ಸುಟ್ಟುಹೋದ ಅವಶೇಷಗಳನ್ನು ತೋರಿಸಿದ್ದು, … Read more

ಭಾರತದಲ್ಲಿರುವ ಕೆನಡಾ ಪ್ರಯಾಣಿಕರಿಗೆ ಸೂಚನೆ ನೀಡಿದ ಕೆನಡಾ; ಭಾರತ- ಕೆನಡಾ ಸಂಬಂಧದಲ್ಲಿ ಬಿರುಕು

ನವದೆಹಲಿ;ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾದ ಸಂಸತ್ತಿನಲ್ಲಿ ಹೇಳಿದ್ದ ಜಸ್ಟೀನ್‌ ಟ್ರುಡೊ ಸರ್ಕಾರ ಮತ್ತೊಂದು ಕೆನಡಾ ಪ್ರಜೆಗಳಿಗೆ ಮತ್ತೊಂದು ಸಲಹೆ‌ ನೀಡಿದೆ. ಭಾರತದಲ್ಲಿರುವ ತನ್ನೆಲ್ಲಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿರುವ ಕೆನಡಾ ಸರ್ಕಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಹಾಗೂ ಗುಜರಾತ್‌, ರಾಜಸ್ಥಾನ ಮತ್ತು ಪಂಜಾಬ್‌ನ ಗಡಿ ಭಾಗಕ್ಕೆ ಹೋಗಬೇಡಿ ಎಂದು ಎಚ್ಚರಿಸಿದೆ ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ. … Read more

ಮೀನು ತಿಂದ ಬಳಿಕ ಅಸ್ವಸ್ಥಳಾದ ಮಹಿಳೆ; ಅಂಗಾಂಗಗಳು ನಿಷ್ಕ್ರಿಯ!

ಮೀನು ತಿಂದ ಬಳಿಕ ಅಸ್ವಸ್ಥಳಾದ ಮಹಿಳೆ;ಅಂಗಾಂಗಗಳು ನಿಷ್ಕ್ರಿಯ! ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ಮೀನು ತಿಂದು ತನ್ನ ನಾಲ್ಕು ಅಂಗಗಳನ್ನು ಕಳೆದುಕೊಂಡಿರುವ ದಾರುಣ ಘಟನೆಯೊಂದು ನಡೆದಿದೆ. ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್‌ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ ಸೇವನೆ ಬಳಿಕ ಮಹಿಳೆ ಅಂಗಾಂಗವನ್ನು ಕಳೆದುಕೊಂಡಿದ್ದಾಳೆ ಎಂದು ವರದಿಯಾಗಿದೆ ಲಾರಾ ಬರಾಜಾಸ್(40) ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ ಮತ್ತು ಮನೆಯಲ್ಲಿ ತಯಾರಿಸಿದ ಮೀನಿನ ಖಾದ್ಯಗಳನ್ನು ತಿಂದ ನಂತರ ಬರಜಾಸ್ ಅಸ್ವಸ್ಥಗೊಂಡಿದ್ದಾಳೆ ಎಂದು ಮೆಸ್ಸಿನಾ ಎನ್ನುವವರು ತಿಳಿಸಿದ್ದಾರೆ. … Read more

ವಿಶ್ವದ ಅತ್ಯಂತ ಹಿರಿಯ‌ ಮಹಿಳೆ 129ನೇ ವಯಸ್ಸಿನಲ್ಲಿ ನಿಧನ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೊಕು ಇಸ್ತಾಂಬುಲೋವಾ ತಮ್ಮ 129ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಷ್ಯಾದ ಚೆಚೆನ್ಯಾ ಗ್ರಾಮದ ನಿವಾಸಿಯಾಗಿರುವ ಅವರು ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಕೊಕು ಇಸ್ತಾಂಬುಲೋವಾ ಮೊಮ್ಮಗ ಇಲ್ಯಾಸ್​ ಅಬುಬರಕೋವ್​ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಅಜ್ಜಿ ನಿಧನದ ದಿನವೂ ಚೆನ್ನಾಗಿಯೇ ಇದ್ದರು ಎಂದು ಹೇಳಿದ್ದಾರೆ. ಅಜ್ಜಿ ನಮ್ಮ ಜೊತೆ ತಮಾಷೆ ಮಾಡಿಕೊಂಡು ಮಾತನಾಡುತ್ತಿದ್ದರು.ಇದ್ದಕ್ಕಿದ್ದಂತೆಯೇ ಅಸ್ವಸ್ಥರಾದರು. ಕೂಡಲೇ ನಾವು ವೈದ್ಯರನ್ನು ಕರೆಸಿದ್ದೆವು.ಆಗ ಅಜ್ಜಿಗೆ ರಕ್ತದೊತ್ತಡ ಕಡಿಮೆಯಾಗಿದೆ ಎಂಬ ವಿಚಾರ ನಮಗೆ ತಿಳಿಯಿತು.ಅವರನ್ನು … Read more

ಮೊರಕ್ಕಾ 2,900 ಮಂದಿಯನ್ನು ಬಲಿ ಪಡೆದ ಭೂಕಂಪಕ್ಕೆ ಕೆಲವೇ ಕ್ಷಣಗಳ‌ ಮೊದಲು ಆಕಾಶದಲ್ಲಿ ಕಾಣಿಸಿಕೊಂಡಿತ್ತು ಬೆಳಕು!

ಮೊರಾಕ್ಕೊದಲ್ಲಿ ನಡೆದ ಪ್ರಬಲ ಭೂಕಂಪ 2900ಕ್ಕೂ ಹೆಚ್ಚು ಜನರ ಬಲಿ ಪಡೆದು, 5 ಸಾವಿರಕ್ಕೂ ಹೆಚ್ಚು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಆದರೆ ಭೂಕಂಪಕ್ಕೂ ಮೊದಲು ಆಗಸದಲ್ಲಿ ಬೆಳಕು ಮೂಡಿತ್ತು ಎಂದು ಜನರು ಹೇಳುತ್ತಿದ್ದಾರೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.8ರಷ್ಟಿತ್ತು. ಕಂಪನದ ತೀವ್ರತೆಯಿಂದ ಹಲವು ಕಟ್ಟಡಗಳು ನೆಲಸಮವಾಗಿತ್ತು. ಆದರೆ ಈ ಕಂಪನಕ್ಕೂ ಕೆಲ ಕ್ಷಣ ಮೊದಲು ಆಗಸದಲ್ಲಿ ಬಣ್ಣ ಬಣ್ಣಗಳ ಬೆಳಕು ಮೊರಾಕ್ಕೊದ ವಾಯವ್ಯ ಭಾಗದಲ್ಲಿ ಕಾಣಿಸಿಕೊಂಡಿರುವುದು ವಿಜ್ಞಾನಿಗಳಲ್ಲೂ ಕುತೂಹಲ ಮೂಡಿಸಿದೆ. ಅಮೆರಿಕದ ಭೂಭೌತ ವಿಜ್ಞಾನಿ ಜಾನ್‌ … Read more

ಪುರುಷ, ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿದ ವಿಜ್ಞಾನಿಗಳು!

ಪುರುಷ ಮತ್ತು ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿ ಆ ಮೂಲಕ ಮಕ್ಕಳು ಹುಟ್ಟಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಜೀವಂತ ಕೋಶವಿಲ್ಲದೆ ಮಾನವ ಭ್ರೂಣವನ್ನು ಕೃತಕ ಭ್ರೂಣವನ್ನು ರಚಿಸುವ ಮೂಲಕವಾಗಿ ಇಸ್ರೇಲಿ ವಿಜ್ಞಾನಿಗಳು ಪವಾಡ ಮಾಡಿದ್ದಾರೆ. ಇಸ್ರೇಲಿನ ವೈಜ್​ಮಾನ್ ಇನ್​ಸ್ಟಿಟ್ಯೂಟ್​ನ ವಿಜ್ಞಾನಿಗಳ ತಂಡವು ಅಂಡಾಣು ಮತ್ತು ವಿರ್ಯಾಣುವಿನ ಸಹಾಯವಿಲ್ಲದೆ ಭ್ರೂಣ ಮಾದರಿಯೊಂದನ್ನು ತಯಾರಿಸಿದೆ. ವಿಜ್ಞಾನಿಗಳ ತಂಡ ತಯಾರಿಸಿರುವ ಈ ಭ್ರೂಣ ಮಾದರಿಯನ್ನು 14 ದಿನಗಳ ಕಾಲ ಇರಿಸಲಾಗಿತ್ತು. ಈ ಭ್ರೂಣ ಮಾನವ ಭ್ರೂಣವನ್ನು ಹೋಲುತ್ತದೆ. ಭ್ರೂಣವನ್ನು ಪ್ರಾಯೋಗಲಯದಲ್ಲಿ ಬೆಳೆಸಿದ … Read more

ಗರ್ಭಿಣಿ ಮಹಿಳೆಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು

21ವರ್ಷದ ಗರ್ಭಿಣಿ ಮಹಿಳೆಯ ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು ವಾಷಿಂಗ್ಟನ್;ಕಳ್ಳತನದ ಆರೋಪದಲ್ಲಿ 21 ವರ್ಷದ ಗರ್ಭಿಣಿ ಮಹಿಳೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಘಟನೆ ಅಮೆರಿಕದ ಓಹಿಯೊ ರಾಜ್ಯದಲ್ಲಿ ನಡೆದಿದೆ. ವೆಸ್ಟರ್‌ವಿಲ್ಲೆಯಲ್ಲಿನ ಕಿರಾಣಿ ಅಂಗಡಿಯ ಬಳಿ ಟಾಕಿಯಾ ಯಂಗ್ ಎಂಬ ಗರ್ಭಿಣಿ ಕಾರಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ತಡೆದಿದ್ದಾರೆ‌. ಮಹಿಳೆ ಅಂಗಡಿಯಿಂದ ಮದ್ಯದ ಬಾಟಲಿಗಳನ್ನು ಕದ್ದಿರುವುದಾಗಿ ಅಂಗಡಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆಗೆ ಬಂದಿದ್ದು ಮಹಿಳೆ ಇದನ್ನು ನಿರಾಕರಿಸಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾಳೆ. … Read more

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಪಾಕಿಸ್ತಾನ; ಪಾಕ್‌ ನ ಸುಪ್ರಿಂಕೋರ್ಟ್‌ ಶನಿವಾರ ತೋಷಾಖಾನಾ ಪ್ರಕರಣದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿ, ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ದುಬಾರಿ ಸರ್ಕಾರಿ ಉಡುಗೊರೆಗಳನ್ನು ಮಾರಾಟ ಮಾಡುವ ಮೂಲಕ ಲಾಭ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಭ್ರಷ್ಟಾಚಾರ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೆಳ ನ್ಯಾಯಾಲಯದ ತೀರ್ಪನ್ನು ಪಾಕಿಸ್ತಾನ ಹೈಕೋರ್ಟ್ ಶುಕ್ರವಾರ ತಳ್ಳಿಹಾಕಿದ ನಂತರ ಈ ಬೆಳವಣಿಗೆ … Read more

ಪಾಕಿಸ್ತಾನದ ಸಮಾವೇಶವೊಂದರಲ್ಲಿ ಪ್ರಬಲ ಬಾಂಬ್ ಸ್ಪೋಟ; 43 ಮಂದಿ ಸಾವು, ನೂರಾರು ಮಂದಿಗೆ ಗಾಯ

ಪಾಕಿಸ್ತಾನ;ಕಾರ್ಯಕ್ರಮವೊಂದರಲ್ಲಿ ಬಾಂಬ್ ಸ್ಪೋಟ ಸಂಭವಿಸಿ 43 ಜನ ಸಾವನ್ನಪ್ಪಿರುವ ಘಟನೆ ಖೈಬರ್ ಪಂಕ್ತುನ್ವಾ ಪ್ರಾಂತ್ಯದ ಬಜೌರ್ ನಗರದಲ್ಲಿ ನಡೆದಿದೆ. ಬಜೌರ್ ನಗರದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಸ್ಪೋಟದಲ್ಲಿ 200 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದ ತೀವ್ರತೆಗೆ 43 ಮಂದಿ ಸಾವು ಕಂಡಿದ್ದು, ರಕ್ಷಣಾ ಕಾರ್ಯಚರಣೆ ನಡೆದಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್‌ನ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್(ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಸ್ಫೋಟ ಸಂಭವಿಸಿದೆ. JUI-F ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರು … Read more