ದುಬೈನಿಂದ ಬರುವಾಗ ತಾಯಿಗೆ 10 ಕೆಜಿ ಟೊಮೆಟೊ ತಂದ ಮಗಳು

ಮಹಿಳೆ ತನ್ನ ತಾಯಿಗೆ ದುಬೈನಿಂದ 10 ಕೆಜಿ ಟೊಮ್ಯಾಟೊ ಹೊತ್ತು ತಂದು ಸುದ್ದಿಯಾಗಿದ್ದಾರೆ. ತಾಯಿಯ ಕೋರಿಕೆಯ ಮೇರೆಗೆ ಮಹಿಳೆ ದುಬೈನಿಂದ ಭಾರತಕ್ಕೆ 10 ಕೆಜಿ ಟೊಮೆಟೋವನ್ನು ಹೊತ್ತು ತಂದಿದ್ದಾರೆ ಎಂದು ಮಾಡಿರೋ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರು ಭಾರತದಲ್ಲಿ ತಮ್ಮ ತಾಯಿಗೆ ದುಬೈ ಮೂಲದ ಸಹೋದರಿ ನೀಡಿರುವ ಕಾಸ್ಟ್ಲೀ ಉಡುಗೊರೆ ಬಗ್ಗೆ ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ದೇಶದ ಕೆಲವು ಭಾಗಗಳಲ್ಲಿ ಟೊಮೆಟೋ ಕೆಜಿಗೆ 250 ರೂ. ಆಗಿದೆ. ಭಾರತೀಯ … Read more

ಅಬುಧಾಬಿ;ಯುವಕನೋರ್ವನಲ್ಲಿ ಹೊಸ MERS ವೈರಸ್ ಪತ್ತೆ;ಏನಿದು ಮಾರಣಾಂತಿಕ ವೈರಸ್?

ಯುಎಇ; ಯುನೈಟೆಡ್ ಅರಬ್ ಎಮಿರೇಟ್ಸ್ ಅಬುಧಾಬಿಯ ಅಲ್ ಐನ್ ನಗರದ 28 ವರ್ಷದ ವ್ಯಕ್ತಿಗೆ ಮೆರ್ಸ್-ಸಿಒವಿ ಪಾಸಿಟಿವ್ ಬಂದಿದ್ದು, ಅವರನ್ನು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲಾ 108 ಜನರನ್ನು ಪತ್ತೆಹಚ್ಚಲಾಗಿದೆ ಮತ್ತು ಅವರಲ್ಲಿ ಯಾರಲ್ಲೂ ಸೋಂಕಿನ ಯಾವುದೇ ಲಕ್ಷಣ ಕಂಡು ಬಂದಿಲ್ಲ ಎನ್ನಲಾಗಿದೆ. ರೋಗಿಯನ್ನು ಜೂನ್ 8 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 21 ರಂದು ನಾಸೊಫಾರಿಂಜಿಯಲ್ ಸ್ವ್ಯಾಬ್ ನ್ನು ಸಂಗ್ರಹಿಸಲಾಯಿತು ಮತ್ತು ಜೂನ್ 23 ರಂದು ಪಾಲಿಮರೇಸ್ ಚೈನ್ … Read more

ಉಪ್ಪಿನಂಗಡಿ ನಿವಾಸಿ ಯುವಕನೋರ್ವ ದುಬೈನಲ್ಲಿ‌ ಮೃತ್ಯು

ದುಬೈ;ಉಪ್ಪಿನಂಗಡಿ ನಿವಾಸಿ ಯುವಕನೋರ್ವ ದುಬೈನಲ್ಲಿ‌ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಕುಪ್ಪೆಟ್ಟಿ ನಿವಾಸಿ ಯುವಕ ರಾಝಿಕ್ ಕುಪ್ಪೆಟ್ಟಿ( 24) ಮೃತ ಯುವಕ. ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದರು.ಇವರಿಗೆ ಪುಟ್ಟ ಮಗು ಕೂಡ ಇದೆ ಎನ್ನಲಾಗಿದೆ. ಯುವಕನ ನಿಧನಕ್ಕೆ ನಿಖರ ಕಾರಣ ತಿಳಿದು ಬರಬೇಕಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ದುಬೈ: ‘ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್’ ಗೆದ್ದ ವಸಿಷ್ಠ ಸಿಂಹ ನೇತೃತ್ವದ ತುಳುನಾಡ ಟೈಗರ್ಸ್ ತಂಡ!

ದುಬೈ; ದುಬೈನ ಶಬಾಬ್ ಅಲ್ ಅಹ್ಲಿ ಕ್ರೀಡಾಂಗಣದಲ್ಲಿ, ಡಾ. ರಾಜ್ ಕಪ್ ಆರನೇ ಆವೃತ್ತಿಯ ಪೂರ್ವ ಸಿದ್ಧತಾ ಕಾರ್ಯಕ್ರಮದ ಅಂಗವಾಗಿ ನಡೆದ ‘ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್’ ಪಂದ್ಯಾಕೂಟವನ್ನು ರಫೀಕ್ ದರ್ಬಾರ್ ಮಾಲೀಕತ್ವದ, ವಸಿಷ್ಠ ಸಿಂಹ ನೇತೃತ್ವದ ‘ತುಳುನಾಡ ಟೈಗರ್ಸ್’ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಸಿನಿಮಾ ಮತ್ತು ಕಿರುತೆರೆಯ 40ಕ್ಕೂ ಕಲಾವಿದರ 6 ತಂಡಗಳ ನಡುವೆ ನಡೆದ ಪಂದ್ಯಾಟವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಬಾಕ್ಸ್ ಕ್ರಿಕೆಟ್ … Read more

ಸೌದಿ ಅರೇಬಿಯಾ, ಕತರ್ ನಲ್ಲಿ ಚಂದ್ರದರ್ಶನ; ಶುಕ್ರವಾರ ಈದ್- ಉಲ್ ಫಿತರ್ ಆಚರಣೆಗೆ ಕರೆ

ರಿಯಾದ್: ಚಂದ್ರ ದರ್ಶನವಾದ ಹಿನ್ನೆಲೆ ಸೌದಿ ಅರೇಬಿಯಾ ಈದ್ ಅಲ್ ಫಿತರ್‌ ನ್ನು ಏಪ್ರಿಲ್ 21ರ ಶುಕ್ರವಾರ ಆಚರಿಸಲು ಅಧಿಕೃತ ದೃಢೀಕರಣವನ್ನು ನೀಡಿದೆ. ಏಪ್ರಿಲ್ 20 ರಂಜಾನ್ ತಿಂಗಳ ಕೊನೆಯ ದಿನವಾಗಿದೆ ಮತ್ತು ಶುಕ್ರವಾರದಿಂದ ಈದ್ ಅಲ್ ಫಿತ್ರ್ ಅನ್ನು ಆಚರಿಸಲಾಗುವುದು ಎಂದು ರಾಜ್ಯದಲ್ಲಿರುವ ಚಂದ್ರ ವೀಕ್ಷಣೆ ಸಮಿತಿ ಗುರುವಾರ ಘೋಷಿಸಿತು. ದೋಹಾ: ಈದ್ ಅಲ್ ಫಿತ್ರ್ ಅನ್ನು ಶುಕ್ರವಾರ, ಏಪ್ರಿಲ್ 21 ರಂದು ಚಂದ್ರನ ದರ್ಶನದ ಕಾರಣ ಆಚರಿಸಲಾಗುವುದು ಎಂದು ಕತಾರ್ ಅಧಿಕೃತವಾಗಿ ಘೋಷಿಸಿದೆ. ಶುಕ್ರವಾರ … Read more

BIG NEWS ಅಬುಧಾಬಿಯಲ್ಲಿ ಬರೊಬ್ಬರಿ 44 ಕೋಟಿ ಲಾಟರಿ ಗೆದ್ದ ಬೆಂಗಳೂರಿನ‌‌ ವ್ಯಕ್ತಿ

ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್‌ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್‌ 44,75,67,571ರೂ. ಗಳ ಬಹುಮಾನ ಗೆದ್ದುಕೊಂಡಿದ್ದಾರೆ. ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾ ಸರಣಿ 250 ರಲ್ಲಿ ಬೆಂಗಳೂರಿನ ನಿವಾಸಿ ಅರುಣ್ ಕುಮಾರ್ ವಟಕ್ಕೆ 1 ಮಿಲಿಯನ್ ಗೆದ್ದಿದ್ದಾರೆ. ಮಾರ್ಚ್ 22 ರಂದು 261031 ರ ವಿಜೇತ ಟಿಕೇಟ್ ಹೊಂದಿರುವ ಅರುಣ್ ಅವರಿಗೆ 20 ಮಿಲಿಯನ್ ದಿರ್ಹಂ (ಸುಮಾರು ರೂ 44,75,67,571) ಬಹುಮಾನ ನೀಡಲಾಯಿತು. ಈ ಬಗ್ಗೆ ಅರುಣ್ ಖಲೀಜ್ … Read more

ಯುಎಇ; ಕೇರಳಿಗರದ್ದು ಸೇರಿ ಹಲವು ಅಂಗಡಿಗಳು ಬೆಂಕಿಗೆ ಆಹುತಿ, ಅಪಾರ ನಷ್ಠ

ಯುಎಇ;ಯುಎಇ ರಾಸಲ್ ಖೈಮ್ ದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತೀಯರದ್ದು ಸೇರಿ ಹಲವು ಅಂಗಡಿಗಳು ಧ್ವಂಸವಾಗಿದೆ. ನಖೀಲ್ ಅಲ್ ಹುದೈಬಿ ಪ್ರದೇಶದಲ್ಲಿ ಘಟನೆ‌ ನಡೆದಿದೆ.ಕೇರಳದ ವ್ಯಕ್ತಿಯ ಮಾಲಕತ್ವದ ಕಾರುಗಳ ಬಿಡಿಭಾಗಗಳ ಅಂಗಡಿ ಸೇರಿ ಐದು ಅಂಗಡಿಗಳಿಗೆ ಬೆಂಕಿ ಆವರಿಸಿ ಅಪಾರ ನಷ್ಟವಾಗಿದೆ ಎಂದು ಹೇಳಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು‌ಬಂದಿಲ್ಲ.ಆದರೆ ಘಟನೆಯಲ್ಲಿ ಅಂಗಡಿಗಳು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಅಗ್ನಿ ಶಾಮಕದಳವನ್ನು ತರಿಸಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ.ಅಂಗಡಿಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಮೂಡಬಿದ್ರೆ ನಿವಾಸಿ ಮೃತ್ಯು

ಸೌದಿ ಅರೇಬಿಯಾ;ಕರಾವಳಿಯ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೂಡಬಿದ್ರೆ ಗಂಟಲ್ ಕಟ್ಟೆ ಕಲ್ಲಬೆಟ್ಟು ನಿವಾಸಿ ಅಬ್ದುಲ್ ರಹಿಮಾನ್ ಸೌದಿ ಅರೇಬಿಯಾದ ದಮಾಮ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 55 ವರ್ಷದ ರಹಿಮಾನ್ ಅವರಿಗೆ ದಿಡೀರ್ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ‌‌.ರಹಿಮಾನ್ ಅವರು 25 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರು ಹಾಗೂ ಕುಟುಂಬವನ್ನು ಅಗಲಿದ್ದಾರೆ‌.ರಹಿಮಾನ್ ಅಗಲಿಕೆಯಿಂದ ಕುಟುಂಬದ ರೋದನ ಮುಗಿಲು ಮುಟ್ಟಿದೆ.

ಉಮ್ರಾ ಯಾತ್ರೆಗೆ ತೆರಳಿದ್ದ ಬಂಟ್ವಾಳ ನಿವಾಸಿ ಸೌದಿ ಅರೇಬಿಯಾದಲ್ಲಿ ನಿಧನ

ಸೌದಿ ಅರೇಬಿಯಾ;ಉಮ್ರಾಯಾತ್ರೆಗೆ ತೆರಳಿದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆ ನಿವಾಸಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಬಂಟ್ವಾಳ ವಗ್ಗ ನಿವಾಸಿ ಉಸ್ಮಾನ್(67) ಮೃತರು.ಉಸ್ಮಾನ್ ಅವರು ಒಂದು ತಿಂಗಳ ಹಿಂದೆ ಸೌದಿ ಅರೇಬಿಯಾಗೆ ಉಮ್ರಾ ಯಾತ್ರೆಗೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತವಾಗಿತ್ತು.ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಮೆಕ್ಕಾದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಸ್ಮಾನ್ ಅವರು ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಮೂಲಗಳ ಪ್ರಕಾರ ಅವರ … Read more

ಸೌದಿ ಅರೇಬಿಯಾ; ರಸ್ತೆ ದಾಟುವಾಗ ವಾಹನ ಢಿಕ್ಕಿ ಹೊಡೆದು ಮಂಗಳೂರಿನ ಯುವಕ ಮೃತ್ಯು; ಏಪ್ರಿಲ್‌ ನಲ್ಲಿ ಊರಿಗೆ ಬರಲು ಸಿದ್ದತೆ ನಡೆಸಿದ್ದ ಯುವಕನ ದಾರುಣ ಅಂತ್ಯ

ಸೌದಿಅರೇಬಿಯಾ;ರಸ್ತೆ ದಾಟುತ್ತಿದ್ದಾಗ ವಾಹನ ಢಿಕ್ಕಿಯಾಗಿ ಮಂಗಳೂರಿನ ಯುವಕ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನಡೆದಿದೆ. ಮಂಗಳೂರು ಮಲ್ಲೂರು ನಿವಾಸಿ ಸುಲೈಮಾನ್ (35) ಮೃತರು. ಸುಲೈಮಾನ್ ಜುಬೈಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮಲ್ಲೂರು ಪಲ್ಲಿಬೆಟ್ಟು ಅಬೂಬಕರ್ ಎಂಬವರ ಪುತ್ರ ಸುಲೈಮಾನ್‌ ಅವರು ಜುಬೈಲ್‌ನ ಲುಮಿನಾಸ್ ಕಂಪೆನಿಯ ಉದ್ಯೋಗಿಯಾಗಿದ್ದರು.ಎಪ್ರಿಲ್ 20ರಂದು ಅವರು ಊರಿಗೆ ಬರುವ ಸಿದ್ಧತೆಯಲ್ಲಿದ್ದರು‌ ಎನ್ನಲಾಗಿದ್ದರು. ಸುಲೈಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು, ಅಕಾಲಿಕ ನಿಧನದಿಂದ ಕುಟುಂಬದ ರೋಧನ … Read more