ಸುರತ್ಕಲ್: ಭೀಕರ ಅಪಘಾತ, ಓರ್ವ ಮೃತ್ಯು

ಸುರತ್ಕಲ್: ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೊಸಬೆಟ್ಟು ಬಳಿ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡು ಮೂಲದ ಅರ್ಜುನ್ ಎಂದು ಗುರುತಿಸಲಾಗಿದೆ. ಅರ್ಜುನ್ ಬೆಳಗ್ಗಿನ ಜಾವ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಫಾರ್ಚುನರ್ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹೊಸಬೆಟ್ಟು ಪೆಟ್ರೋಲ್ ಬಂಕ್ ನ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಈಚರ್ ಟಿಪ್ಪರ್ ಲಾರಿಗೆ ಕಾರು ಢಿಕ್ಕಿ ಹೊಡೆದಿದೆ. ಘಟ‌ನೆಯಲ್ಲಿ ಅರ್ಜುನ್ ಅವರ ತಲೆಗೆ ಗಂಭೀರವಾಗಿ ಗಾಯಗೊಂಡ ಪರಿಣಾಮ … Read more

ವಿಟ್ಲ; ಬಾಲಕಿಗೆ ಕಿರುಕುಳ, ಪ್ರಕರಣ ದಾಖಲು

ವಿಟ್ಲ; ಶಾಲಾ ಬಾಲಕಿಗೆ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೆರುವಾಯಿ ಮೂಲದ ಯುವಕ ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದಲ್ಲದೆ ಶಾಲೆ ಸಮೀಪ ಬಂದು ಬಾಲಕಿಯನ್ನು ಬೈಕ್ ನಲ್ಲಿ ಕೂರುವಂತೆ ಹೇಳಿದ್ದು, ಈ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಟ್ಲ … Read more

ಉಳ್ಳಾಲ; ಸ್ಕೂಟರ್ ನಿಂದ ಬಿದ್ದು ಮಹಿಳೆ ಮೃತ್ಯು

ಉಳ್ಳಾಲ: ಸ್ಕೂಟರ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕೆರೆಬೈಲು ಬಳಿ ನಡೆದಿದೆ. ಮೃತರನ್ನು ಕಾಸರಗೋಡು ಮಧೂರು ನಿವಾಸಿ ಸುಮಾ ನಾರಾಯಣ ಗ( 52)ಗುರುತಿಸಲಾಗಿದೆ. ಮೂಲತ:ಬಂಟ್ವಾಳ ನೆಟ್ಲದವರಾಗಿದ್ದ ಇವರು ಭಾನುವಾರ ಮಧೂರಿನಿಂದ ಕುಟುಂಬದ ಮನೆ ಪಿಲಾರು ಅರಮನೆಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಕಾಸರಗೋಡು ಕಡೆ ತೆರಳಲು ಸಹೋದರನ ಸ್ಕೂಟರ್ ನಲ್ಲಿ ತೊಕ್ಕೊಟ್ಟು ಜಂಕ್ಷನ್ ಗೆ ತೆರಳಿದವರು,ಜಪ್ಪಿನ ಮೊಗರು ಬಳಿಯ ಸಂಬಂಧಿಕರ ಮನೆಗೆ ತೆರಳಿ ವಾಪಾಸ್ … Read more

ಬಂಟ್ವಾಳ; 4 ವರ್ಷದ ಬಾಲಕಿ ಮೃತ್ಯು

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾರವರ ಪುತ್ರಿ ಜಮೀಲಾ(4)ಮೃತ ಬಾಲಕಿ. ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ.ಯಲ್ಲಿ ಕಲಿಯುತ್ತಿದ್ದ ಬಾಲಕಿ ಅನಾರೋಗ್ಯದಿಂದ ಇದ್ದು ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬಾಲಕಿ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬಂಟ್ವಾಳ; ರಿಕ್ಷಾ ಅಪಘಾತ, ಓರ್ವ ಮೃತ್ಯು

ಬಂಟ್ವಾಳ: ಕಾರು ಮತ್ತು ರಿಕ್ಷಾ ಢಿಕ್ಕಿಯಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್ ಎಂಬಲ್ಲಿ ನಡೆದಿದೆ. ಮೃತ ರಿಕ್ಷಾ ಚಾಲಕನನ್ನು ಕೆಂಪು ಗುಡ್ಡೆ ನಿವಾಸಿ ವಿನಾಯಕ ಪೈ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ವ್ಯಾಗನರ್ ಕಾರು ರಿಕ್ಷಾಕ್ಕೆ ಢಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ವಿನಾಯಕ ಪೈ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಳ್ತಂಗಡಿ; ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸೋಣಂದೂರಿನಲ್ಲಿ ನಡೆದಿದೆ. ಸೋಣಂದೂರು ಮುಂಡಾಡಿ ಮನೆ ನಿವಾಸಿಯಾಗಿರುವ ಪ್ರಶಾಂತ್‌ ಮೃತ ಯುವಕ. ಪ್ರಶಾಂತ್ ಸೆ.18ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ‌. ಕೂಡಲೇ ಮನೆಯವರು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ಮೃತನ ಸಂಬಂಧಿಯಾಗಿರುವ ಪ್ರತೀಕ್‌ ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುರತ್ಕಲ್; ರಸ್ತೆ ದಾಟಲು ನಿಂತಿದ್ದ ಯುವಕರಿಗೆ ಬಸ್ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಸುರತ್ಕಲ್; ರಸ್ತೆ ದಾಟಲು ನಿಂತಿದ್ದ ಬೈಕ್ ಗೆ ಎಕ್ಸ್ ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಹೊಸಬೆಟ್ಟು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಹಳೆಯಂಗಡಿ ಇಂದಿರಾ ನಗರ ನಿವಾಸಿ‌ ಮುಹಮ್ಮದ್ ಶಾಹಿಲ್(20) ಮತ್ತು ಅರಾಫತ್(19) ಎಂದು ಗುರುತಿಸಲಾಗಿದೆ. ಶಾಹಿಲ್ ಮತ್ತು ಅರಾಫತ್ ಬೈಕ್ ನಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ಮಂಗಳೂರು ನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್‌ ಚಾಲಕನ ನಿರ್ಲಕ್ಷ್ಯತನದಿಂದ ಯುವಕರಿಗೆ ಢಿಕ್ಕಿ ಹಿಡೆದಿದೆ. ಘಟನೆಯಿಂದ ಅರಾಫತ್ … Read more

ಬಂಟ್ವಾಳ; ಯುವಕನಿಗೆ ತಂಡದಿಂದ ಹಲ್ಲೆ, ದೂರು ದಾಖಲು

ಬಂಟ್ವಾಳ; ಯುವಕನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಮೈಂದಾಳ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಮೈಂದಾಳ ನಿವಾಸಿ ನಿಸಾರ್ ಅಪರಿಚಿತ ವ್ಯಕ್ತಿಗಳ ತಂಡದಿಂದ ಹಲ್ಲೆಗೆ ಒಳಗಾದವರು. ಶನಿವಾರ ರಾತ್ರಿ 9.45ರ ಸುಮಾರಿಗೆ ಅಜ್ಜಿ ಮನೆಯಿಂದ ನಿಸಾರ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಗುರಿಮಜಲು ಎಂಬಲ್ಲಿ ಅಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ … Read more

ಬೆಳ್ತಂಗಡಿ; ಯುವಕ ಹೃದಯಾಘಾತದಿಂದ ಮೃತ್ಯು

ಬೆಳ್ತಂಗಡಿ: ಯುವಕನೊಬ್ಬ ಮನೆಯಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕಿರ್ನಡ್ಕದಲ್ಲಿ ನಡೆದಿದೆ. ಮೃತ ಯುವಕನನ್ನು ಕಿರ್ನಡ್ಕ ನಿವಾಸಿ ಕಿಟ್ಟಣ್ಣ ನಾಯ್ಕ ಮತ್ತು ವೇದಾವತಿ ದಂಪತಿಯ ಪುತ್ರ ಪ್ರದೀಪ್ (25) ಎಂದು ಗುರುತಿಸಲಾಗಿದೆ. ಹೃದಯಾಘಾತವಾದ ತಕ್ಷಣವೇ ಉಜಿರೆ ಖಾಸಗಿ ಆಸ್ಪತ್ರೆಗೆ ಅವರಿಗೆ ದಾಖಲಿಸಲಾಗಿದೆ.ಅದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಪ್ರದೀಪ್ ಸಹೋದರಿ ಪದ್ಮಾವತಿ, ಸಹೋದರ ನಿತೇಶ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪುತ್ತೂರು; ಬಸ್ ನಲ್ಲಿ ಯುವತಿ ಜೊತೆ ಅನುಚಿತ ವರ್ತನೆ, ಯುವಕ ವಶಕ್ಕೆ

ಪುತ್ತೂರು:ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುವ ಬಸ್ಸಿನಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೋರ್ವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಟ್ವೀಟ್ ಮೂಲಕ ದೂರು ನೀಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಮಹಿಳೆ ಪುತ್ತೂರಿನಿಂದ ನಿಂತಿಕಲ್ಲಿಗೆ ಬಸ್ಸಲ್ಲಿ ಸಂಜೆ ಬರುತ್ತಿರುವಾಗ ಯುವಕನೋರ್ವ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದು ಈ ಬಗ್ಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ಬಳಿಕ ಫೋನ್ ನಂಬರನ್ನು ಮಹಿಳೆಗೆ ನೀಡಿದ್ದು ಬಳಿಕ ಸವಣೂರಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದರು. ಈ ಬಗ್ಗೆ … Read more