ಸಿನಿಮಾ ನಟಿ ರಚಿತಾ ರಾಮ್‌ ವಿರುದ್ಧ ದೂರು ದಾಖಲು; ಏನಿದು ಪ್ರಕರಣ?

ಕನ್ನಡ ಸಿನಿಮಾ ನಟಿ ರಚಿತಾ ರಾಮ್‌ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ, ಈ ವರ್ಷ ಗಣರಾಜ್ಯೋತ್ಸವ ಮರೆತುಬಿಡಿ. ಕ್ರಾಂತಿಯ ಉತ್ಸವ ಆಚರಿಸಿ ಅಷ್ಟೇ’ ಎಂದು ನಟಿ ರಚಿತಾ ರಾಮ್‌ ಸಿನಿಮಾ ರಿಲೀಸ್ ಕುರಿತ ಮಾತಿನ ವೇಳೆ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು,ಇದು ವಿವಾದಕ್ಕೆ ಕಾರಣವಾಗಿತ್ತು.

ನಟಿ ರಚಿತಾ ರಾಮ್‌ ಅವರು ಭಾರತದ ಸಂವಿಧಾನಕ್ಕೆ ಹಾಗೂ ಗಣರಾಜ್ಯೋತ್ಸವಕ್ಕೆ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಆಗ್ರಹಿಸಿದ್ದಾರೆ.

ನಟಿ ರಚಿತಾ ರಾಮ್‌ ಅವರ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್