ಕಾರು & ಟಿಟಿ ನಡುವೆ ಭೀಕರ ಅಪಘಾತ, ಮಗು ಸೇರಿ ಇಬ್ಬರು ಮೃತ್ಯು
ಚಿಕ್ಕಮಗಳೂರು;ಕಾರು ಮತ್ತು ಹಾಗೂ ಟಿಟಿ ವಾಹನದ ನಡುವೆ ಸಂಭವಿಸಿದ ಅಪಘತದಲ್ಲಿ ಮಗು ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಹೊನ್ನಾವರ ಮೂಲದ ಗಿರಿಧರ್ (46) ಮತ್ತು ಮೂರು ವರ್ಷದ ಮಗು ಮಯಾಂಕ್ ಮೃತರು. ಟಿಟಿಯಲ್ಲಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಿರಿಧರ್ ಕುಟುಂಬ ಮದುವೆಗೆ ತೆರಳುವಾಗ
ಬೆಂಗಳೂರು – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ಕೇರಳ ಮೂಲದ ಪ್ರವಾಸಿಗರಿದ್ದ ಟಿಟಿ ಮುಖಾಮುಖಿ ಢಿಕ್ಕಿಯಾಗಿದೆ.ಅಪಘಾತದ ರಭಸಕ್ಕೆ ಗಿರಿಧರ್ ಮತ್ತು ಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಿಟಿ ಉರುಳಿಬಿದ್ದ ಪರಿಣಾಮ ಅದರಲ್ಲಿದ್ದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಗೆ ಟಿಪ್ಪರ್ ಢಿಕ್ಕಿ; ಮಹಿಳೆ ಮೃತ್ಯು
ಬೆಂಗಳೂರು;ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ದೆ ಮೃತಪಟ್ಟ ಘಟನೆ ಆನೇಕಲ್- ಬನ್ನೇರುಘಟ್ಟ ರಸ್ತೆಯ ಇಂಡ್ಲವಾಡಿ ಕ್ರಾಸ್ ಬಳಿ ಗುರುವಾರ ನಡೆದಿದೆ.
ಇಂಡ್ಲವಾಡಿ ಗ್ರಾಮದ ನಿವಾಸಿ ನಿಂಗಮ್ಮ(60) ಮೃತದುರ್ದೈವಿ ಆಗಿದ್ದಾರೆ.
ವೃದ್ಧೆ ನಿಂಗಮ್ಮ ಮನೆಗೆ ಬೇಕಾದ ವಸ್ತು ತರಲು ಮೊಮ್ಮಗನ ಜೊತೆ ಬೈಕ್‌ನಲ್ಲಿ ಆನೇಕಲ್ ಪಟ್ಟಣಕ್ಕೆ ಹೋಗುತ್ತಿದ್ದರು. ಮೊಮ್ಮಗ ಸಂದೀಪ್ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ನಿಂಗಮ್ಮ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂದೀಪ್ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು
ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.