ಇಸ್ರೇಲ್ ಗೆ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿದ ಕೆನಡಾ ಪ್ರಧಾನಿ

ಗಾಝಾದಲ್ಲಿನ ಮಹಿಳೆಯರು, ಮಕ್ಕಳು ಹಾಗೂ ನವಜಾತ ಶಿಶುಗಳ ಹತ್ಯೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಕ್ರಿಯಿಸಿದ್ದು, ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿದ್ದಾರೆ.

ಯುದ್ಧದ ಬಗ್ಗೆ ಮಾತನಾಡಿದ ಜಸ್ಟಿನ್ ಟ್ರುಡೊ, ಇಸ್ರೇಲ್ ಸರ್ಕಾರವು ಗರಿಷ್ಠ ಸಹನೆ ಪ್ರದರ್ಶಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಇಡೀ ಜಗತ್ತು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವರದಿಗಳನ್ನು ನೋಡುತ್ತಿದೆ. ಜಗತ್ತು ಮಹಿಳೆಯರು, ಮಕ್ಕಳು ಹಾಗೂ ನವಜಾತ ಶಿಶುಗಳ ಹತ್ಯೆಗೆ ಸಾಕ್ಷಿಯಾಗುತ್ತಿದೆ. ಇದು ತಕ್ಷಣವೇ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಅ.7ರ ಹಮಾಸ್ ದಾಳಿಯನ್ನು ಉಲ್ಲೇಖಿಸಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು,ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರುವುದು ಇಸ್ರೇಲ್ ಅಲ್ಲ. ಬದಲಿಗೆ ಹೊಲೊಕಾಸ್ಟ್ ನಂತರ ಯಹೂದಿಗಳ ಮೇಲೆ ನಡೆದಿರುವ ಬೀಭತ್ಸ ದಾಳಿಯಲ್ಲಿ ನಮ್ಮ ನಾಗರಿಕರ ಶಿರಶ್ಛೇದ, ದಹನ ಹಾಗೂ ಹತ್ಯಾಕಾಂಡವನ್ನು ನಡೆಸಿರುವುದು ಹಮಾಸ್ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್