ಕುಂದಾಪುರ;ಯುವಕನೋರ್ವ ದಿಢೀರ್ ನಾಪತ್ತೆ; ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

ಕುಂದಾಪುರ;ಬೈಂದೂರು ತಾಲ್ಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ್‌ (28) ಮನೆಯಿಂದ ನಾಪತ್ತೆಯಾಗಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜುಲೈ 22ರಂದು ತನ್ನ ವಾಸದ ಮನೆಯಾದ ಮಕ್ಕೆಯ ಕೊಳಕೆಹೊಳೆ ಎಂಬಲ್ಲಿ ಮನೆ ಮಂದಿಯೊಂದಿಗೆ ಊಟ ಮಾಡಿ ಮಲಗಿದ್ದ ಅವರು, ಜುಲೈ 23ರಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಸುರೇಶ್ ಮನೆಯಿಂದ ನಾಪತ್ತೆಯಾಗಿರುವ ಕುರಿತು ತಿಳಿದಿದೆ. ಈ ಬಗ್ಗೆ ಸಹೋದರ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ನಾಪತ್ತೆಯಾದ ಸುರೇಶ್‌ ಅವರ ಪತ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಕುಟುಂಬಿಕರು ಶೋಧ ಕಾರ್ಯ ನಡೆಸುತ್ತಿದ್ದು, ಈವರೆಗೂ ಯಾವುದೇ ಮಾಹಿತಿ ದೊರಕಿಲ್ಲ ಎನ್ನಲಾಗಿದೆ‌.

ಸುರೇಶ್ ಮನೆ ಪಕ್ಕದ ನದಿನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಸಂಬಂಧಿಕರು ಶಂಕೆ ವ್ಯಕ್ತಪಡಿಸುತ್ತಿದ್ದು, ಕೊಲ್ಲೂರು ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಸುಧಾರಾಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್