ಉದ್ಯಮಿ ನಜೀರ್ ಅಹ್ಮದ್ ಮನೆಗೆ ನುಗ್ಗಿ ಬೆದರಿಸಿ ದರೋಡೆ ಮಾಡಿದ ತಂಡ; 50 ಲಕ್ಷ ದೋಚಿ ಪರಾರಿ

ಚಿತ್ರದುರ್ಗ;ಹಾಡ ಹಗಲೇ ದರೋಡೆಕೋರರು ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿ ಇಬ್ಬರನ್ನು ಒತ್ತೆಯಾಳಾಗಿರಿಸಿಕೊಂಡು ಲಕ್ಷಾಂತರ ರೂ. ಹಣ, ಚಿನ್ನಾಭರಣ ದೋಚಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಹೊಟೇಲ್ ಉದ್ಯಮಿ ನಜೀರ್ ಅಹ್ಮದ್ ಮನೆಗೆ ನಿನ್ನೆ ಬೆಳಗ್ಗೆ ಮೂವರು ದರೋಡೆಕೋರರ ಗುಂಪು ತೆರಳಿ, ಪಿಸ್ತೂಲ್ ಮತ್ತು ಲಾಂಗ್, ಚಾಕುವಿನಿಂದ ಮನೆಯಲ್ಲಿದ್ದವರನ್ನು ಬೆದರಿಸಿದ್ದಾರೆ.

ದಿನಪೂರ್ತಿ ದರೋಡೆಕೋರರ ಕಂಟ್ರೋಲ್ ನಲ್ಲಿದ್ದ ಮನೆ ಐವತ್ತು ಲಕ್ಷ‌ ರೂ.ನಗದು, 12 ತೊಲೆ ಚಿನ್ನಾಭರಣ ದೋಚಿರುವ ಬಗ್ಗೆ ಕೇಸ್ ದಾಖಲಾಗಿದೆ.

ಆರೋಪಿಗಳು ಜೀವಬೆದರಿಕೆಯೊಡ್ಡಿ ಮನೆಯಲ್ಲಿದ್ದವರ ಬಳಿ ಮೊಬೈಲ್ ಕಸಿದುಕೊಂಡು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಕೈಗಳನ್ನು ಕಟ್ಟಿ ಹಾಕಿ ಹಣ ನೀಡುವಂತೆ ಬೆದರಿಸಿದ್ದರು. ಐವತ್ತು ಲಕ್ಷ ರೂ ಕೊಡಲು ಒಪ್ಪಿದಾಗ ನಜೀರ್ ಅಹ್ಮದ್ ಪುತ್ರ ಸಮೀರ್ ಮತ್ತು ಅಳಿಯ ಶಹನಾಜ್ ರನ್ನು ಒತ್ತೆಯಾಳಾಗಿರಿಸಿಕೊಂಡು ಕಾರಲ್ಲಿ ಕರೆದೊಯ್ದಿದ್ದರು.

ಚಿತ್ರದುರ್ಗದ ಕ್ಯಾದಿಗ್ಗೆರೆ ಬಳಿ ಓರ್ವ ವ್ಯಕ್ತಿ ಬಳಿ ತುರ್ತಾಗಿ ಹಣ ಬೇಕೆಂದು ಕೇಳಿಕೊಂಡು 25 ಲಕ್ಷ ರೂ. ತೆಗೆದುಕೊಂಡು ಕೊಟ್ಟಿದ್ದಾರೆ. ಬಳಿಕ ದಾವಣಗೆರೆಗೆ ಕರೆದೊಯ್ದು ಅಲ್ಲೊಬ್ಬರ ಬಳಿ 25 ಲಕ್ಷ ರೂ. ಪಡೆದು ಕೊಟ್ಟಿದ್ದಾರೆ. ಬಳಿಕ ರಾತ್ರಿ 9ಗಂಟೆ ಸುಮಾರಿಗೆ ಚಿತ್ರದುರ್ಗಕ್ಕೆ ವಾಪಸ್ ಬರುವ ವೇಳೆ ಚನ್ನಗಿರಿ ತಾಲೂಕಿನ ಗ್ರಾಮವೊಂದರ ಬಳಿ ಪೊಲೀಸ್ ಬ್ಯಾರಿಕೇಡ್ ಗೆ ಕಾರು ಡಿಕ್ಕಿ ಹೊಡೆದಿದ್ದಾರೆ.ಇದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದಾಗ ಕೃತ್ಯ ಬಯಲಾಗಿದೆ.

ಸ್ಥಳಕ್ಕೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಕೆ. ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು