ಸಿಬಿಐ ಅಧಿಕಾರಿಯೋರ್ವರ ಮಗಳು ತನ್ನ ಕಾಲೇಜು ರಜಾದಿನಗಳಲ್ಲಿ ಚಾಲಕಿಯಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಾ ಸುದ್ದಿಯಾಗಿದ್ದಾರೆ.
25 ವರ್ಷದ ರೂಪಾ ಕೇರಳದ ಚವಾರಾ ಮೂಲದ ನಿವಾಸಿ. ಕೊಲ್ಲಂನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಪಿಜಿ ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಓದುತ್ತಿದ್ದಾರೆ. ವಾರದಲ್ಲಿ ಮೂರು ದಿನ ತರಗತಿಗಳಿಗೆ ತೆರಳುತ್ತಾರೆ. ಉಳಿದ ದಿನಗಳಲ್ಲಿ ಚಾಲಕಿಯಾಗಿ ತಮ್ಮ ಓದಿನ ಖರ್ಚನ್ನು ನೋಡಿಕೊಳ್ಳುತ್ತಾರೆ.ತಂದೆ ಸಿಬಿಐ ಅಧಿಕಾರಿಯಾದರೂ ತಾನು ತಂದೆಗೆ ಅವಲಂಭಿಸದೆ ತನ್ನ ಖರ್ಚನ್ನು ತಾನೇ ಭರಿಸಿಕೊಳ್ಳುತ್ತಾರೆ.
ರೂಪಾ ಅವರು ಕೊಲ್ಲಂ ಕೇರಳಪುರಂ ತೆಕೆವಿಲ್ಲಾ ಮೂಲದ ಸಿಬಿಐ ಅಧಿಕಾರಿ ಪ್ರದೀಪ್ ಮತ್ತು ಸುಮಾ ಅವರ ಹಿರಿಯ ಪುತ್ರಿಯಾಗಿದ್ದಾರೆ.ರೂಪಾ ಚಿಕ್ಕಂದಿನಿಂದಲೂ ಡ್ರೈವಿಂಗ್ ಮೇಲೆ ಆಸಕ್ತಿ ಹೊಂದಿದ್ದು ಇದೀಗ ಹೆವಿ ಡ್ರೈವಿಂಗ್ ಲೈಸನ್ಸ್
ಹೊಂದಿದ್ದಾರೆ.
ವಾಹನ ಚಲಾಯಿಸಿ ಸಿಕ್ಕಿದ ಹಣದಲ್ಲಿ ರೂಪಾ ಅವರು ತನ್ನ ಕಾಲೇಜು ವೆಚ್ಚವನ್ನು ನಿರ್ವಹಿಸುತ್ತಾರೆ.ಇದರ ಜೊತೆಗೆ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ತರುತ್ತಾರೆ.