ಬೆಂಗಳೂರು:ಬಸ್‌ನಲ್ಲಿ ನಿರ್ವಾಹಕರೊಬ್ಬರು ಕರ್ತವ್ಯದ ವೇಳೆ
ಟೋಫಿ ಧರಿಸಿದ್ದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ವಿಡಿಯೋ ಹರಿಯಬಿಟ್ಟಿದ್ದಾರೆ.
ಸರ್ಕಾರಿ ಸೇವೆಯಲ್ಲಿರುವಾಗ ಈ ರೀತಿ ಟೋಫಿ ಧರಿಸುವುದು ಸರಿಯಲ್ಲ ಎಂದು ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಾನು ಹಲವು ವರ್ಷಗಳಿಂದ ಧರಿಸುತ್ತಿದ್ದೇನೆ ಎಂದು ಇದಕ್ಕೆ ಕಂಡಕ್ಟರ್ ನಯವಾಗಿಯೇ ಉತ್ತರಿಸಿದ್ದಾರೆ.ಕೊನೆಗೆ ಟೋಪಿ ತೆಗೆದು ನನಗೆ ಏನೂ ಸಮಸ್ಯೆ ಇಲ್ಲ.ಎಂದು ಕಂಡಕ್ಟರ್ ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಕಂಡಕ್ಟರ್ ಅವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿ ಮಾನ ಹರಾಜು ಮಾಡಿದ ಮಹಿಳೆಯ ವಿರುದ್ಧ BMTC ಪೋಲೀಸ್ ದೂರು ದಾಖಲಿಸಬೇಕು ಎಂದು ಕೆಲವರು ಈ ಬಗ್ಗೆ ಆಗ್ರಹಿಸಿದ್ದಾರೆ.
ಎಲ್ಲಾ ಮಹಿಳೆಯರು ಶಕ್ತಿ ಯೋಜನೆಯ ಉಪಯೋಗ ಪಡೆದುಕೊಳ್ಳಿ, ಕೆಲಸದಲ್ಲಿ ನಿರತರಾಗಿರುವ ಉದ್ಯೋಗಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ.ಇದು ಅನಗತ್ಯ ಮತ್ತು ಅನೈತಿಕ ಪೋಲೀಸ್ ಗಿರಿಯಾಗಿದೆ.ಈ ಬಗ್ಗೆ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇವೆ ಎಂದು ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.