ಮಂಡ್ಯ;ಬಸ್ ಚಾಲಕನೋರ್ವ ವಿಷಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ಕೆಎಸ್ಆರ್ಟಿಸಿ ಡಿಪೋದಲ್ಲಿ ನಡೆದಿದೆ.
ಅಂದೇನಹಳ್ಳಿ ಗ್ರಾಮದ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಮಂಡ್ಯದ ಕೆಎಸ್ಆರ್ಟಿಸಿ ಡಿಪೋ ಮುಂದೆ ಅಂದೇನಹಳ್ಳಿ ಗ್ರಾಮಸ್ಥರು ಜಮಾಯಿಸಿ ಡಿಪೋ ಗೇಟ್ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.
ಚಾಲಕ ಜಗದೀಶ್ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ಗೆ ಬೆಂಬಲ ನೀಡಿದ್ದ ಎಂಬ ಕಾರಣಕ್ಕೆ ಸಚಿವರೋರ್ವರು ವರ್ಗಾವಣೆ ಮಾಡಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.ಇದೀಗ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
ಈ ಮಧ್ಯೆ, ಜಗದೀಶ್ ಅವರ ವರ್ಗಾವಣೆಗೆ ಬೇರೆಯೇ ಕಾರಣವಿದೆ ಎಂದು ಡಿಪೋ ಮ್ಯಾನೇಜರ್ ಹೇಳಿದ್ದಾರೆ. ನಿರ್ವಾಹಕಿ ಜೊತೆ ಜಗದೀಶ್ ಅನುಚಿತ ವರ್ತನೆ ತೋರಿದ್ದಾರೆ ಎಂಬ ದೂರು ಬಂದಿತ್ತು.ಈ ದೂರಿನನ್ವಯ ಮದ್ದೂರು ಡಿಪೋಗೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.