ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಸಂತ್ರಸ್ತನ ಕಾಲು ತೊಳೆದು ಕ್ಷಮೆ ಕೋರಿದ ಸಿಎಂ

ಮಧ್ಯಪ್ರದೇಶ;ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ರಾಜಕೀಯ ತಿರುವು ಪಡೆಯುತ್ತಿದ್ದಂತೆ ಸಿಎಂ ಚೌಹಾಣ್ ಅವರು ಸಂತ್ರಸ್ತನನ್ನು ಭೋಪಾಲ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಕುರ್ಚಿಯ ಮೇಲೆ ಕುಳ್ಳಿರಿಸಿ ಸಂತ್ರಸ್ತನ ಕಾಲು ತೊಳೆದು ಕ್ಷಮೆ ಯಾಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಚೌಹಾನ್, ಘಟನೆಗೆ ಸಂಬಂಧಿಸಿದಂತೆ ವೀಡಿಯೊ ನನಗೆ ದುಃಖ ತಂದಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನನಗೆ ಜನರು ದೇವರ ಸಮಾನ.ಈ ರೀತಿಯ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕನ ಗೌರವವು ತನ್ನ ಗೌರವಕ್ಕೆ ಸಮಾನ ಎಂದರು.

ಆದಿವಾಸಿ ವ್ಯಕ್ತಿ ಮೇಲೆ ಪ್ರವೇಶ್ ಶುಕ್ಲಾ ಎಂಬಾತ ಮೂತ್ರ ಮಾಡುವ ವಿಡಿಯೋ ವೈರಲ್ ಆಗಿತ್ತು.ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದ್ದಂತೆ ಆರೋಪಿಯ ಬಂಧನವಾಗಿತ್ತು.

ಟಾಪ್ ನ್ಯೂಸ್