ಖಮ್ಮಂ:ವರ್ಷಾಂತ್ಯದಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಟಿಕೆಟ್ ಗೆ ಭಾರೀ ಲಾಬಿ ನಡೆಯುತ್ತಿದೆ.ಖಮ್ಮಂ ಜಿಲ್ಲೆಯ ಬಿಆರ್ ಎಸ್ ನಲ್ಲಿ ಟಿಕೆಟ್ ವಾರ್ ಮುಂದುವರಿದಿದ್ದರೆ, ವೈರಾದಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ.
ವೈರಾ ಟಿಕೆಟ್ ತಮಗೇ ಬರುತ್ತೆ ಎಂದು ಶಾಸಕ ರಾಮುಲು ನಾಯ್ಕ್ ಸುಮ್ಮನಿದ್ದರೆ, ಮಾಜಿ ಶಾಸಕರಾದ ಮದನಲಾಲ್, ಬಾನೋತು ತಮಗೆ ಸಿಗುವ ನಿರೀಕ್ಷೆಯಲ್ಲಿದ್ದರು.
ಮದನಲಾಲ್ ಟಿಕೆಟ್ ಗಾಗಿ ಪ್ರಬಲವಾಗಿ ಫೈಟ್ ಮಾಡುತ್ತಿದ್ದರು.ಇದೀಗ ಮದನಲಾಲ್ ಗೆ ಬಾರೀ ಹೊಡೆತ ಬಿದ್ದಿದೆ. ಮಾಜಿ ಶಾಸಕ ಮದನ್ ಲಾಲ್ ಮಹಿಳೆಯ ಜೊತೆಗಿನ ಫೋಟೋ ವೈರಲ್ ಆಗಿದೆ.
ವೈರಾ ಮಾಜಿ ಶಾಸಕ ಬಾನೋತು ಮದನ್ ಲಾಲ್ ಮಹಿಳೆಯೊಂದಿಗೆ ಅನ್ಯೋನ್ಯವಾಗಿರುವ ಫೋಟೋಗಳು ಪ್ರಸ್ತುತ ಅಲ್ಲಿನ ವಾಟ್ಸಾಪ್ ಗ್ರೂಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂಥವರಿಗೆ ಎಂಎಲ್ ಎ ಟಿಕೆಟ್ ಕೊಡ್ತಾರಾ? ಎಂದು ಇದೀಗ ಪ್ರಶ್ನೆ ಮಾಡಲಾಗಿದೆ.
ವೈರಲ್ ಆಗಿರುವ ಫೋಟೋ-ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಮದನ್ಲಾಲ್ ಬೆಂಬಲಿಗರು ಪಕ್ಷದ ಟಿಕೆಟ್ ಎಲ್ಲಿ ತಮ್ಮ ಕೈತಪ್ಪುತ್ತದೆ ಎಂಬ ಭೀತಿಯಿಂದ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ.ಮದನ್ಲಾಲ್ ಅವರಿಗೆ ಈಗಾಗಲೇ ಬಿಆರ್ಎಸ್ ನಾಯಕರು ವೈರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಖಾತ್ರಿಪಡಿಸಿದ್ದು, ಎದುರಾಳಿ ಬಣದವರು ಫೋಟೋಗಳನ್ನು ಮಾರ್ಫ್ ಮಾಡಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.