ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತ್ಯು

ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತಪಟ್ಟ ಘಟನೆ ಗುಜರಾತ್ ನ ಭಾವನಗರದ ಸುಭಾಷ್‌ನಗರ ಪ್ರದೇಶದಲ್ಲಿ ನಡೆದಿದೆ.

ಭರವಾಡ ಕುಟುಂಬದ ಜಿನಾಭಾಯಿ ಭಾಕಾಭಾಯಿ ರಾಥೋಡ್ ಎಂಬವರ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನ ವಿವಾಹ ನಿಗದಿಯಾಗಿತ್ತು.

ಮದುವೆಯ ವೇಳೆ ಜಿನಾಭಾಯಿ ಅವರ ಮಗಳು ಹೇತಾಳ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ತಕ್ಷಣವೇ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.ತಪಾಸಣೆ ನಡೆಸಿದ ವೈದ್ಯರು ಯುವತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com