ಧರ್ಮಸ್ಥಳದಲ್ಲಿ ತಾಳಿ ಕಟ್ಟಿ ಹಾಸನಕ್ಕೆ ಮತದಾನ ಮಾಡಲು ಹೋದ ಜೋಡಿ!

ಹಾಸನ;ಮದುವೆ ಕಾರ್ಯ ಮುಗಿದ ತಕ್ಷಣ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿದ ಮತ್ತೊಂದು ಪ್ರಕರಣ ವರದಿಯಾಗಿದೆ.

ಹಾಸನ ಜಿಲ್ಲೆ ಸಕಲೇಶಪುರದ ಮಹೇಶ್ವರಿನಗರ ನಿವಾಸಿ ರೋಹಿತ್ & ನಂದಿನಿ ವಿವಾಹ ಇಂದು ಧರ್ಮಸ್ಥಳದಲ್ಲಿ ನಡೆದಿದೆ.ಜೋಡಿಯ ದೂರದೂರಿನಲ್ಲಿ ತಮ್ಮ ಮದುವೆ ಇದ್ದರೂ ಮತ ಚಲಾಯಿಸುವುದನ್ನು ತಪ್ಪಿಸಲಿಲ್ಲ.

ಧರ್ಮಸ್ಥಳದಲ್ಲಿ ಇಂದು ಮದುವೆಯಾದ ಇವರು, ಮದುವೆ ಮುಗಿಯುತ್ತಿದ್ದಂತೆ ಸಕಲೇಶಪುರ ಪಟ್ಟಣದ ಮತಗಟ್ಟೆ 85ಕ್ಕೆ ಪತ್ನಿ ನಂದಿನಿ ಜತೆ ಆಗಮಿಸಿ ಮತ ಚಲಾಯಿಸಿದ್ದಾರೆ. ಇವರ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಸೆಮಣೆ ಏರುವ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಮದುಮಗಳು ಮತಚಲಾಯಿಸಿದ್ದಾರೆ

ಇಂದಿನ ವಿಶೇಷಗಳು

ಚಿಕ್ಕಮಗಳೂರು; ಹಸೆಮಣೆಗೂ ಮುನ್ನ ತಮ್ಮ ಜವಾಬ್ದಾರಿ ಮೆರೆದ ಮಧುಮಗಳು. ಮದುವೆ ಸಂದರ್ಭದಲ್ಲೂ ಮತದಾನ ಮಾಡಿ ಇತರರಿಗೂ ಸ್ಫೂರ್ತಿಯಾಗಿದ್ದಾರೆ.

ಇನ್ನೂ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ PS 187 ಮತಗಟ್ಟೆಯಲ್ಲಿ ನವ ವಧು ಕು.ಮೇಲಿಟಾ ಅವರು ಮತ ಚಲಾಯಿಸಿದರು.

ಇನ್ನೂ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ 5 ತಿಂಗಳ ಅವಳಿ ಮಕ್ಕಳೊಂದಿಗೆ ಮತಗಟ್ಟೆಗೆ ಬಂದ ದಂಪತಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com