ಕಾಲೇಜುವರೆಗೂ ಬಂದ ದಂಪತಿಯ ಜಗಳ; ಫ್ರೊಫೆಸರ್ ಗೆ ಕಾಲೇಜು ಚೇಂಬರ್‌ನೊಳಗೆ ನುಗ್ಗಿ ಥಳಿಸಿದ ಪತ್ನಿ
ಒಡಿಶಾ;ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರಿಗೆ ಅವರ ಚೇಂಬರ್‌ನೊಳಗೆ ಪತ್ನಿ ನುಗ್ಗಿ ಚಪ್ಪಲಿಯಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರ್ಹಾಂಪುರ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಅನಿಲ್ ಕುಮಾರ್ ಟಿರಿಯಾ ಮೇಲೆ ಹಲ್ಲೆ ನಡೆದಿದೆ.
ಶನಿವಾರ ಬೆಳಗ್ಗೆ 11.30ರ ವೇಳೆಗೆ ಅಸಿಸ್ಟೆಂಟ್ ಪ್ರೊಫೆಸರ್ ತನ್ನ ಚೇಂಬರ್‌ನೊಳಗಿದ್ದಾಗ ಕೊಠಡಿಗೆ ಆಕಸ್ಮಿಕವಾಗಿ ಬಂದ ಪತ್ನಿ ಇದ್ದಕ್ಕಿದ್ದಂತೆ ಆ ಕೊಠಡಿಯನ್ನು ಲಾಕ್ ಮಾಡಿ. ಜೋರಾಗಿ ಕಿರುಚಾಡಿ ಹಲ್ಲೆ ನಡೆಸಿದ್ದಾರೆ.
ನಂತರ ಅಲ್ಲಿದ್ದ ಸಿಬ್ಬಂದಿಗಳು ದಂಪತಿಯನ್ನು ಸಮಾಧಾನ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ವಿಡಿಯೋ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ.