ಬೆಂಗಳೂರು; ಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲಿನ ಮೂಲಕ ಬಸವರಾಜ ಬೊಮ್ಮಯಿಯ ಆಡಳಿತ ಅಂತ್ಯಗೊಂಡಿದೆ.
ಸಂಜೆಯೇ ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿವರು ಸಿಎಂ ಆಗಿರುವ ಹಿನ್ನಲೆಯಲ್ಲಿ, ನಾನೇ ಸೋಲಿನ ಹೊಣೆ ಹೊರುವುದಾಗಿ ಹೇಳಿದ್ದಾರೆ. ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸೋಲಿನ ಬಗ್ಗೆ ವಿಮರ್ಶೆ ಮಾಡುತ್ತೆವೆ ಎಂದು ಹೇಳಿದ್ದಾರೆ.
ಶಿಗ್ಗಾಂವಿ ಬಿಜೆಪಿ ಶಿಬಿರ ಕಚೇರಿಗೆ ಬೊಮ್ಮಯಿ ಆಗಮಿಸಿದ್ದರು.ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು ಸಿಎಂ ಬೊಮ್ಮಾಯಿಗೆ ಬಿಜೆಪಿ ಕಚೇರಿಗೆ ಹೋಗುವಾಗ ನಾಗರ ಹಾವು ಅಡ್ಡ ಬಂದಿದೆ.
ಈ ಬಗ್ಗೆ ಒಂದು ವೀಡಿಯೋ ಕೂಡ ವೈರಲ್ ಆಗಿದೆ. ಕಚೇರಿ ಆವರಣದಲ್ಲಿ ಸಿಎಂ ಬೊಮ್ಮಾಯಿ ಇದ್ದಾಗ ಏಕಾಏಕಿ ಕಿಂಗ್ ಹಾಬು ಅವರ ಎದುರಿಗೆ ಬಂದಿರುವುದನ್ನು ಇದರಲ್ಲಿ ಕಾಣಬಹುದು. ಹಾವನ್ನು ನೋಡಿ ಸಿಎಂ ಅಲರ್ಟ್ ಆಗಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಭದ್ರತಾ ಸಿಬ್ಬಂದಿ ಕೂಡ ಅವರನ್ನು ಹಿಂದೆ ಉಳಿಯುವಂತೆ ಹೇಳಿದರು. ನಂತರ ಆ ಹಾವನ್ನು ರಕ್ಷಣೆ ಮಾಡಿದ್ದಾರೆ.
ಎರಡನೇ ವೀಡಿಯೊದಲ್ಲಿ, ಪೊಲೀಸರು ಹಾವಿನ ಸಮೀಪಕ್ಕೆ ಬಂದಿದ್ದು, ಕಬ್ಬಿಣದ ರಾಡ್ ಸಹಾಯದಿಂದ ಹಾವನ್ನು ಬಾಲದಿಂದ ಹಿಡಿದು ಕಚೇರಿಯಿಂದ ದೂರ ಬಿಟ್ಟಿದ್ದಾರೆ.