ಜಿಮ್ ನಲ್ಲಿ ಭಾರ ಎತ್ತುವಾಗ ಖ್ಯಾತ ಬಾಡಿ ಬಿಲ್ಡರ್ ದುರ್ಮರಣ;ಶಾಕಿಂಗ್ ವಿಡಿಯೋ ವೈರಲ್..

ವಿಶ್ವವಿಖ್ಯಾತ ಬಾಡಿ ಬಿಲ್ಡರ್ ಒಬ್ಬರು ವೇಟ್ ಲಿಫ್ಟಿಂಗ್ ಮಾಡುವಾಗ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಇಂಡೋನೇಷಿಯಾದ ಬಾಡಿಬಿಲ್ಡರ್ ಮತ್ತು ಫಿಟ್ನೆಸ್ ಪ್ರಭಾವಿ ಜಸ್ಟಿನ್ ವಿಕ್ಕಿ ಜಿಮ್ ಮಾಡುವಾಗ ನಿಧನರಾಗಿದ್ದಾರೆ. ಭಾರ ಎತ್ತುವಾಗ ಅವರ ಸಾವಿನ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.

33 ವರ್ಷ ವಯಸ್ಸಿನ ಈ ತರಬೇತುದಾರ, ಸುಮಾರು 400 ಪೌಂಡ್ (210 ಕೆಜಿ) ತೂಕವನ್ನು ಎತ್ತುವಾಗ ಕುತ್ತಿಗೆ ಮುರಿದು ಸಾವನ್ನಪ್ಪಿದ್ದಾರೆ.

ಈ ಘಟನೆ ಜುಲೈ 15ರಂದು ನಡೆದಿದ್ದು,ಜಸ್ಟಿನ್ ವಿಕ್ಕಿ, ಕುತ್ತಿಗೆ ಮುರಿತದ ಜೊತೆಗೆ, ಹೃದಯ ಮತ್ತು ಯಕೃತ್ತಿನ ನರ ಹಾನಿಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.

ಅತಿಯಾದ ಭಾರ ಎತ್ತುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದು ಅವರ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್