ಮತ್ತೊಂದು ಭೀಕರ ದೋಣಿ ದುರಂತ; ಕನಿಷ್ಠ 100 ಮಂದಿ ನೀರುಪಾಲು

ಮದುವೆಯಿಂದ ಹಿಂದಿರುಗುತ್ತಿದ್ದ ಕುಟುಂಬಗಳನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 100 ಕ್ಕೂ ಹೆಚ್ಚು ಜನರು ಮುಳುಗಿರುವ ಘಟನೆ ಉತ್ತರ ಮಧ್ಯ ನೈಜೀರಿಯಾದಲ್ಲಿ ನಡೆದಿದೆ.

ಕ್ವಾರಾ ರಾಜ್ಯದಲ್ಲಿ ಓವರ್‌ಲೋಡ್, ಸುರಕ್ಷತಾ ಕಾರ್ಯವಿಧಾನ ಸರಿಯಾಗಿ ಪಾಲಿಸದ ಕಾರಣ ಮಳೆಗಾಲದಲ್ಲಿ ಭಾರೀ ಪ್ರವಾಹದಿಂದಾಗಿ ದೋಣಿ ಮುಳುಗಿದೆ ಎನ್ನಲಾಗಿದೆ.

ನೆರೆಯ ನೈಜರ್ ರಾಜ್ಯದಲ್ಲಿನ ಮದುವೆಯಿಂದ ಕ್ವಾರಾ ರಾಜ್ಯದ ಜನರನ್ನು ಕರೆದೊಯ್ಯುತ್ತಿದ್ದಾಗ ದೋಣಿ ನದಿಯ್ಲಲಿ ಮುಳುಗಿದೆ. ಇಲ್ಲಿಯವರೆಗೆ 103 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರನ್ನು ದೋಣಿ ಅಪಘಾತದಿಂದ ರಕ್ಷಿಸಲಾಗಿದೆ ಎಂದು ಕ್ವಾರಾ ರಾಜ್ಯ ಪೊಲೀಸ್ ವಕ್ತಾರ ಒಕಾಸನ್ಮಿ ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ನೈಜರ್ ನದಿಯು ಪಶ್ಚಿಮ ಆಫ್ರಿಕಾದ ಮುಖ್ಯ ಜಲಮಾರ್ಗವಾಗಿದ್ದು, ಗಿನಿಯಾದ ಮೂಲಕ ನೈಜೀರಿಯಾದ ನೈಜರ್ ಡೆಲ್ಟಾದವರೆಗೆ ಅರ್ಧಚಂದ್ರಾಕೃತಿಯಲ್ಲಿ ಸಾಗುತ್ತದೆ. ಇದು ಕೆಲವು ದೇಶಗಳಿಗೆ ಪ್ರಮುಖ ಸ್ಥಳೀಯ ವ್ಯಾಪಾರ ಮಾರ್ಗವಾಗಿದೆ.

ನೈಜೀರಿಯಾದ ರಾಷ್ಟ್ರೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಅಪಘಾತಗಳನ್ನು ತಡೆಯಲು ನದಿಗಳಲ್ಲಿ ರಾತ್ರಿ-ಸಮಯದ ನೌಕಾಯಾನ, ಓವರ್ ಲೋಡ್ ನಿಷೇಧಿಸಲು ಕ್ರಮಕೈಗೊಳ್ಳಲಾಗಿದೆ.

ಟಾಪ್ ನ್ಯೂಸ್