ಬೆಂಗಳೂರು; ವಧುವನ್ನು ಭಾರೀ ಟ್ರಾಫಿಕ್ ಮಧ್ಯೆ ಬಿಟ್ಟು ವರ ಪರಾರಿಯಾದ ಘಟನೆ ಮಹದೇವಪುರ ಟೆಕ್ ಕಾರಿಡಾರ್ ಸಮೀಪ ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ ಜಾರ್ಜ್ ಎಂಬಾತ ವಿವಾಹವಾದ ಮರು ದಿನವೇ ಕಾರಿನಲ್ಲಿ ಪತ್ನಿ ಜೊತೆ ಚರ್ಚ್‌ಗೆ ತೆರಳುತ್ತಿದ್ದ. ದಂಪತಿಗಳಿಬ್ಬರು ಟ್ರಾಫಿಕ್ ಮಧ್ಯೆ ಇರುವಾಗ ವರ ವಧುವನ್ನು ಟ್ರಾಫಿಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದ.
ಕಾರಿನಲ್ಲಿ ಹೋಗುತ್ತಿದ್ದಂತೆ ನವವಿವಾಹಿತ ವರನ ಮೊಬೈಲ್‌ಗೆ ಅನೈತಿಕ ಸಂಬಂಧ ಹೊಂದಿದ ಯುವತಿಯ ಮೆಸೆಜ್ ಬಂದಿದ್ದು, ಆಕೆ ಸಂದೇಶದಲ್ಲಿ ಪೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.ಇದರಿಂದ ಪತ್ನಿಯನ್ನು ಟ್ರಾಫಿಕ್ ನಲ್ಲೇ ಬಿಟ್ಟು ವರ ಪರಾರಿಯಾಗಿದ್ದಾನೆ.
ಈ ದಂಪತಿ ಫೆಬ್ರವರಿ 15ರಂದು ದಂಪತಿಗಳಿಗೆ ವಿವಾಹವಾಗಿದ್ದು ಫೆ.16ರಂದು ಈ ಘಟನೆ ನಡೆದಿದೆ.ಮಾರ್ಚ್ 5ರಂದು ಆ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾಳೆ.