ಬೆಂಗಳೂರು:ಪ್ರಯಾಣಿಕನಿಗೆ ಬಿಎಂಟಿಸಿ ನಿರ್ವಾಹಕ 1ರೂ. ಪಾವತಿಸದೆ ಮೋಸ ಮಾಡಿದ್ದಕ್ಕೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ಬಿಎಂಟಿಸಿಗೆ ಮೂರು ಸಾವಿರ ರೂ.ದಂಡ ವಿಧಿಸಿದೆ.
ರಮೇಶ್ ನಾಯಕ್ ಎಂಬವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ನಾಲ್ಕನೇ ಹೆಚ್ಚುವರಿ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ಈ ಆದೇಶ ನೀಡಿದ್ದು ಅರ್ಜಿದಾರರಿಗೆ ಪರಿಹಾರವಾಗಿ ಈ ಮೊತ್ತ ಪಾವತಿಸುವಂತೆ ಸೂಚಿಸಿದೆ.
ಇದಲ್ಲದೆ ಕಾನೂನು ಹೋರಾಟಕ್ಕಾಗಿ ಒಂದು ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚ ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಲಾಗಿದೆ.
ಇದಲ್ಲದೆ 45 ದಿನಗಳೊಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ವಾರ್ಷಿಕ ಶೇ.6ರ ಬಡ್ಡಿ ಅನ್ವಯವಾಗಲಿದೆ ಎಂದು ಬಿಎಂಟಿಸಿ ಹೇಳಿದೆ.