ಬಿಎಲ್ ಸಂತೋಷ್ ವಿರುದ್ಧ ಸುಳ್ಳು ಪೋಸ್ಟ್; ಯುವಕನ ಬಂಧನ, ದಿನೇಶ್ ಅಮೀನ್ ಮಟ್ಟು‌ ಸೇರಿ ಹಲವರ ವಿರುದ್ಧ ಕೇಸ್ ದಾಖಲು

ಬೆಂಗಳೂರು;ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಸುಳ್ಳು ಪೋಸ್ಟ್‌ ಕ್ರಿಯೆಟ್ ಮಾಡಿದ ಆರೋಪದಲ್ಲಿ ಯುವಕನೋರ್ವನಿಗೆ ಪೊಲೀಸರು ಬಂಧಿಸಿದ್ದಾರೆ.

ಸುಳ್ಳು ಹೇಳಿಕೆ ಇರುವ ಪತ್ರಿಕಾ ವರದಿಯನ್ನು ಡಿಸೈನ್‌ ಮಾಡಿದ್ದ ದಿಲೀಪ್‌ ಗೌಡ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಯುವಕ ಮಾಡಿದ ಸುಳ್ಳು ಪೋಸ್ಟನ್ನು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು, ಬಿಂದು ಗೌಡ ಸೇರಿ ಹಲವರು
ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ ಹಲವು ಜನರ ವಿರುದ್ಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

ಬಿಜೆಪಿ ಕಾನೂನು ಘಟಕದ ಯಶವಂತ ಅವರು ದೂರು ದಾಖಲಿಸಿದ್ದಾರೆ.

“ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ” ಎಂದು ಬಿ.ಎಲ್. ಸಂತೋಷ್ ಹೇಳಿರುವುದಾಗಿ ತಲೆಬರಹವುಳ್ಳ ಪೋಸ್ಟ್ ವೈರಲ್‌ ಆಗಿತ್ತು. ಪತ್ರಿಕೆಯಲ್ಲಿ ವರದಿಯಾದಂತೆ ಪೋಸ್ಟರ್‌ ಡಿಸೈನ್‌ ಮಾಡಿ, ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು.

ಪೋಸ್ಟರ್‌ ಅನ್ನು ದಿನೇಶ್‌ ಅಮಿನ್‌ ಮಟ್ಟು ಸೇರಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com