ಬೆಂಗಳೂರು;ಬಿಜೆಪಿ ಪಟ್ಟಿ ಬಿಡುಗಡೆಗೆ ಮೊದಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಂಡಾಯವೆದ್ದಿದ್ದಾರೆ.
ಹೈಕಮಾಂಡ್ ನಿನ್ನ ನನಗೆ ಟಿಕೆಟ್ ಕನ್ಫರ್ಮ್ ಎಂಬುದಾಗಿ ಬಿ ಹೇಳಿತ್ತು.ಇಂದು ಬೆಳಿಗ್ಗೆ ಮತ್ತೆ ಕರೆ ಮಾಡಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.ಈ ಮಾತು ಕೇಳಿ ಕಳೆದ 30 ವರ್ಷಗಿಂದ ಪಕ್ಷ ಸಂಘಟಿಸಿದ ನನಗೆ ಬೇಸರವಾಗಿದೆ ಎಂಬುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಹೈಕಮಾಂಡ್ ನಡೆಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇಂದು ಬೆಳಿಗ್ಗೆ ಬಿಜೆಪಿ ಹೈಕಮಾಂಡ್ ನಾಯಕರಿಂದ ಕರೆ ಬಂದಿದ್ದು ನಿಜ. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ವರಿಷ್ಠರು ಹೇಳಿದರು.30 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಕಟ್ಟಿದ್ದೇನೆ. ಬಿಎಸ್ ಯಡಿಯೂರಪ್ಪ ಜೊತೆ ಸೇರಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ನಿಜ. ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುವುದು ನಿಶ್ಚಿತ ಎಂದು ಹೇಳಿದ್ದು ಟಿಕೆಟ್ ಸಿಗದಿದ್ದರೆ ಪರೋಕ್ಷವಾಗಿ ಸ್ಪರ್ಧೆಗಿಳಿಯುವ ಸುಳಿವು ನೀಡಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಜನರು ನನ್ನ ಮೇಲೆ ಪ್ರೀತಿ ವಿಶ್ವಾಸ ತೋರಿದ್ದಾರೆ. ಈ ಬಾರಿಯೂ ಸ್ಪರ್ಧಿಸಿ 7ನೇ ಬಾರಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಿದ್ದು, ಟಿಕೆಟ್ ಹಂಚಿಕೆ ಬಿಜೆಪಿಗೆ ಕಗ್ಗಂಟಾಗಿದೆ.
ಇನ್ನು ಈಶ್ವರಪ್ಪ ಈಗಾಗಲೆ ಮಗನಿಗೆ ಟಿಕೆಟ್ ಕೊಡುವಂತೆ ಲಾಬಿ ನಡೆಸಿ ತಾನು ಚುನಾವಣಾ ರಾಜಕೀಯದಿಂದ ನಿವೃತಿಗೊಳ್ಳುವುದಾಗಿ ಹೇಳಿದ್ದಾರೆ.ಈ ಬಗ್ಗೆ ಆಯನೂರು ಮಂಜುನಾಥ್ ಮೊದಲೇ ಹೇಳಿಕೆ ನೀಡಿದ್ದರು.