ಬೆಂಗಳೂರು;ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ 3ನೇ ಪಟ್ಟಿ ಸಂಜೆ ಬಿಡುಗಡೆ ಮಾಡಿದೆ.
ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ವಿರುದ್ಧ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಲಾಗಿದೆ.
224 ಕ್ಷೇತ್ರಗಳ ಪೈಕಿ ಈಗಾಗಲೇ 212 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿಸಲಾಗಿತ್ತು. ಉಳಿದಿರುವ 12 ಕ್ಷೇತ್ರಗಳ ಪೈಕಿ ಈಗ 10 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಸ್ಪರ್ಧಿಸುತ್ತಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಅಂತೆಯೇ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಬಾಕಿ ಇದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಹೆಬ್ಬಾಳದಲ್ಲಿ ಕೂಡ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಕುಟುಂಬಕ್ಕೇ ಟಿಕೆಟ್ ನೀಡಲಾಗಿದೆ.
ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ
ಕೊಪ್ಪಳ- ಮಂಜುಳಾ ಅಮರೇಶ್
ರೋಣ- ಕಳಕಪ್ಪ ಬಂಡಿ
ಸೇಡಂ- ರಾಜಕುಮಾರ್ ಪಾಟೀಲ್
ನಾಗಠಾಣ- ಸಂಜೀವ್ ಈಹೊಳೆ
ಗೋವಿಂದ ರಾಜ ನಗರ- ಉಮೇಶ್ ಶೆಟ್ಟಿ
ಹೆಬ್ಬಾಳ- ಕಟ್ಟಾ ಜಗದೀಶ್
ಮಹದೇವ ಪುರ (SC)- ಮಂಜುಳಾ ಅರವಿಂದ ಲಿಂಬಾವಳಿ
ಕೃಷ್ಣರಾಜ – ಶ್ರೀ ವತ್ಸ
ಹರಿಗ ಬೊಮ್ಮನ ಹಳ್ಳಿ- ಬಿ. ರಾಮಣ್ಣ