ಬೆಂಗಳೂರು;ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಬಿಜೆಪಿಯ ನಿರ್ಧಾರಗಳು ಕೂಡ ಕಾರಣ ಎಂದು ಮಾಜಿ ಸಚಿವ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾದ್ಯಮದ ಜೊತೆ ಮಾತನಾಡುತ್ತಾ ಬಿಜೆಪಿಯ ಸೋಲಿಗೆ ಕಾರಣದ ಬಗ್ಗೆ ಮೆಲುಕು ಹಾಕಿದ್ದಾರೆ.ಮುಸ್ಲಿಮರ ಶೇ.4 ಮೀಸಲಾತಿ ತೆಗೆದಿರೋದು ತಪ್ಪಾಗಿರಬಹುದು ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದಲ್ಲಿ ನನ್ನ ಪರವಾಗಿ ಸಾಕಷ್ಟು ಮುಸ್ಲಿಮರು ಇದ್ದರು. ನಾನು ಕ್ಷೇತ್ರಕ್ಕೆ ಹೋದಾಗ ಹಲಾಲ್ ಕಟ್ ವಿರೋಧಿ ಅಭಿಯಾನದ ಬಗ್ಗೆ ಎಲ್ಲರೂ ಹೇಳುತ್ತಿದ್ದರು.ಆಗ ನನಗೆ ಇದು ಎಲ್ಲವೂ ಗಮನಕ್ಕೆ ಬಂದಿತ್ತು.ಬಿಜೆಪಿ ಸೋಲಿಗೆ ಇದೆಲ್ಲವೂ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಇದಲ್ಲದೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ, ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದರಿಂದ ಬಿಜೆಪಿ ಸೋತಿರಬಹುದು ಎಂದು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿ ಪರವಾಗಿದ್ದರು.ಹಲಾಲ್ ಕಟ್ ವಿರೋಧಿ ಅಭಿಯಾನ, ಮೀಸಲಾತಿ ಕಾರಣಗಳಿಂದ ಬದಲಾಗಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ನಮ್ಮ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದರು. 40 ಪರ್ಸೆಂಟ್ ಸರ್ಕಾರ, ಪೇಸಿಎಂ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಇದೇ ವೇಳೆ ಅವರು ಹೇಳಿದ್ದರು.ಮೊದಲು ಕಾಂಗ್ರೆಸ್ ಶಾಸಕರಾಗಿದ್ದ ಸೋಮಶೇಖರ್ ಆಪರೇಷನ್ ಕಮಲದ ವೇಳೆ ಬಿಜೆಪಿ ಸೇರಿ ಸಚಿವರಾಗಿದ್ದರು.