ಹೈದ್ರಾಬಾದ್;ಪ್ರವಾದಿ ನಿಂದನೆ ಮಾಡಿದ ಬಿಜೆಪಿ ಉಚ್ಛಾಟಿತ ಶಾಸಕ ರಾಜಾಸಿಂಗ್ ಅವರನ್ನು ವ್ಯಾಪಕ ಪ್ರತಿಭಟನೆ ಹಿನ್ನೆಲೆ ಮತ್ತೆ ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ.
ರಾಜಾಸಿಂಗ್ ಬಂಧನದ ಬಳಿಕ ಚರಲಾಪಲ್ಲಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ.
2004 ರಿಂದ ಇಲ್ಲಿಯವರೆಗೂ ಶಾಸಕ ರಾಜಾಸಿಂಗ್ ಅವರ ವಿರುದ್ಧ ಬರೋಬ್ಬರಿ 101 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.ಈ ಪೈಕಿ 18 ಕೋಮು ಸಂಘರ್ಷದ ಪ್ರಕರಣಗಳಾಗಿವೆ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕರಾಗಿರುವ ರಾಜಾಸಿಂಗ್ ಅವರನ್ನು ವಿವಾದದ ಬೆನ್ನಲ್ಲೇ ಬಿಜೆಪಿಯಿಂದ ಉಚ್ಛಾಟಣೆ ಮಾಡಲಾಗಿದೆ.