ನಮ್ಮ ಹಿಂದೂ ರಾಷ್ಟ್ರದಲ್ಲಿ ನೀವು ದಿನಕ್ಕೆ ಐದು ಬಾರಿ ಏನು ಮಾಡುತ್ತೀರೋ ಅದನ್ನು ಮಾಡಲು ಧ್ವನಿವರ್ಧಕವನ್ನು ಸಹ ಕೊಡುವುದಿಲ್ಲ- ಅಮಾನತುಗೊಂಡ ಬಿಜೆಪಿ ಶಾಸಕನ ದ್ವೇಷದ ಭಾಷಣ ವೈರಲ್..

ಮಹಾರಾಷ್ಟ್ರ;ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದ ಉಚ್ಛಾಟಿತ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ ಅವರ ವಿರುದ್ಧ ಅಹ್ಮದ್‌ನಗರ್‌ ಜಿಲ್ಲೆಯ ಶ್ರೀರಾಂಪುರ್‌ ನಗರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 10 ರಂದು ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕವಾಗಿ ರಾಜಾ ಸಿಂಗ್ ಹೇಳಿಕೆ ಕೊಟ್ಟಿದ್ದ.2026 ರಲ್ಲಿ ಭಾರತವನ್ನು ಹಿಂದು ರಾಷ್ಟ್ರ ಮಾಡಲಾಗುವುದು ಎಂದೂ ಕೂಡ ಹೇಳಿದ್ದ.

ನಮ್ಮ ಹಿಂದೂ ರಾಷ್ಟ್ರದಲ್ಲಿ ನೀವು ದಿನಕ್ಕೆ ಐದು ಬಾರಿ ಏನು ಮಾಡುತ್ತೀರೋ ಅದನ್ನು ಮಾಡಲು ನೀವು ಧ್ವನಿವರ್ಧಕವನ್ನು ಸಹ ಪಡೆಯುವುದಿಲ್ಲ, ಮಾಧ್ಯಮ ಸಂದರ್ಶನವೊಂದರಲ್ಲಿ, ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರು ಕೀಟಗಳು ಮತ್ತು ಜಿರಳೆಗಳನ್ನು (ಮುಸ್ಲಿಮರು) ಸ್ಪ್ರೇ ಮೂಲಕ “ನಿರ್ಮೂಲನೆ ಮಾಡುವ” ಬಗ್ಗೆ ಮಾತನಾಡಿದ್ದರು ಎಂದು ಸಿಂಗ್ ಹೇಳಿದ್ದಾರೆ.

ಮುಸ್ಲಿಮರಿಗೆ ಥಳಿಸಬೇಕಿದ್ದರೆ ಬಜರಂಗದಳ ಸೇರಿ ಎಂದು ಹೈದರಾಬಾದ್‌ನ ಗೋಶಮಹಲ್‌ ಕ್ಷೇತ್ರದ ಶಾಸಕರಾಗಿರುವ ಸಿಂಗ್‌ ಹೇಳಿದ್ದು, ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com