ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಮುಖ್ಯ ಅಂಶಗಳಿವು…

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ.ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ‌.135 ಕ್ಷೇತ್ರಗಳಲ್ಲಿ‌ ಗೆಲುವಿನ ಮೂಲಕ
ಕಾಂಗ್ರೆಸ್ ಇತಿಹಾಸ ನಿರ್ಮಿಸಿದರೆ 66 ಕ್ಷೇತ್ರಗಳಿಗೆ ಬಿಜೆಪಿ ಹಾಗೂ 19 ಕ್ಷೇತ್ರಗಳಲ್ಲಿ ಜೆಡಿಎಸ್ ತೃಪ್ತಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಇಷ್ಟೊಂದು ಮಟ್ಟದಲ್ಲಿ ಹೀನಾಯ ಸೋಲಿಗೆ ಕಳೆದ 4 ವರ್ಷಗಳ ಬಿಜೆಪಿಯ ಆಡಳಿತ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಿಜೆಪಿ ಸೋಲಿಗೆ ಕಾರಣವಾದ ಮುಖ್ಯ ಅಂಶಗಳು

ಕೋವಿಡ್ ಬಿಜೆಪಿಗೆ ದೊಡ್ಡ ಪರೀಕ್ಷೆಯಾಗಿತ್ತು,
ಆದರೆ ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಎಡವಿತ್ತು.ಈ ವೇಳೆ ಬೆಡ್ ಬುಕ್ಕಿಂಗ್ ಹಗರಣ ಕೂಡ ಕೇಳಿ ಬಂದಿತ್ತು, ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಸಾವು, ಅಸಮರ್ಪಕ ಕೋವಿಡ್ ನಿರ್ವಹಣೆ ಜನರ ಮನಸ್ಸಿನಲ್ಲಿ ಇನ್ನೂ ಬಾಕಿಯಿತ್ತು.

ಅಭಿವೃದ್ಧಿ ಮಾಡಬೇಕಿದ್ದ ಸರಕಾರಗಳು ಜನರ ಭಾವನೆಗಳ ಚೆಲ್ಲಾಟ ವಾಡಿದ್ದು ಬಿಜೆಪಿ ವಿರುದ್ಧ ಮತ ಒಗ್ಗಟ್ಟಿಗೆ ಕಾರಣವಾಗಿದೆ.ಮಾದ್ಯಮಗಳನ್ನು‌ ಬಳಕೆ ಮಾಡಿ ಏಕಪಕ್ಷೀಯ ಆಡಳಿತ ನಡೆಸುವ ಬಿಜೆಪಿಯ ಅಜೆಂಡಾ ಕೈಕೊಟ್ಟಿದೆ.ಮುಸ್ಲಿಮರ ಧಾರ್ಮಿಕ ನಂಬಿಕೆಗಳಾದ ಹಲಾಲ್, ಹಿಜಾಬ್, ಆಜಾನ್ ವಿವಾದ, ವ್ಯಾಪಾರ ನಿಷೇಧ ಇವೆಲ್ಲಾ ವೇಳೆ ಸಿಎಂ ಬೊಮ್ಮಯಿ ಮತ್ತು ಸರಕಾರ ರಾಜಧರ್ಮ ಪಾಲಿಸದೆ ಓಲೈಕೆ ಮಾಡಿದರು.ಇದು ಮುಸ್ಲಿಂ ಸಮಾಜದಲ್ಲಿ ಅಭದ್ರತೆ ಭಾವನೆಗೆ ಕಾರಣವಾಗಿತ್ತು.ತಲತಲಾಂತರಗಳಿಂದ ಬಂದ ಮೀಸಲಾತಿ ರದ್ಧತಿಯು ಮುಸ್ಲಿಂ ಸಮಾಜಕ್ಕೆ ದೊಡ್ಡ ಹೊಡೆತವಾಗಿತ್ತು.ಇದು ಬೊಮ್ಮಯಿಯ ಸೇಡಿನ ರಾಜಕೀಯ ಎಂದು ಮುಸ್ಲಿಂ ಮತಗಳು ಕಾಂಗ್ರೆಸ್ ಖಾತೆಗೆ ಜಮೆಯಾದವು.

ಬಿಜೆಪಿ ಮೇಲೆ ಮೈತ್ರಿ ಸರ್ಕಾರ ಉರುಳಿಸಿ, ಸಂವಿಧಾನ ಬಾಹೀರವಾಗಿ ಅಧಿಕಾರಕ್ಕೆ ಬಂದಿದ್ದಾರೆ ಎಂಬ ಆರೋಪ ಮೊದಲೇ ಇತ್ತು.

40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ, ಈಶ್ವರಪ್ಪ ಮೇಲಿನ ಕಮಿಷನ್ ಆರೋಪ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಇದೆಲ್ಲಾ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಇದೇ ವಿಚಾರವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸಿಕೊಂಡ ಕಾಂಗ್ರೆಸ್ ಪೋಸ್ಟರ್, ಸೋಶಿಯಲ್ ಮೀಡಿಯಾ ಮೂಲಕ ಕಾಂಗ್ರೆಸ್ ನಡೆಸಿದ ಪೇ ಸಿಎಂ ಅಭಿಯಾನ ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ.

ಇನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕೊಡುಗೆ ಅತೀ ದೊಡ್ಡದಾಗಿದೆ.ಅವರನ್ನು ಅಧಿಕಾರದಿಂದ ಇಳಿಸಿ ಕಡೆಗಣಿಸಿರುವುದು ಬಿಜೆಪಿ ಒಳಗಡೆಯೇ ಅಸಮಾಧನಾಕ್ಕೆ ಕಾರಣವಾಗಿತ್ತು.ಯಡಿಯೂರಪ್ಪ ತನ್ನಗಿದ್ದಂತೆ ಕಂಡರೂ ಒಳಗೆ ಅವರಲ್ಲಿ ಅಸಮಾಧಾನದ ಬೆಂಕಿ ಇರುವುದು ಜನರಿಗೆ ಅರ್ಥವಾಗಿತ್ತು.

ಬದಲಾವಣೆ ಮತ್ತು ಪ್ರಗತಿಯ ದೃಷ್ಟಿಯಿಂದ ಜನಸಾಮಾನ್ಯರು ನಿರೀಕ್ಷಿಸಿದ್ದನ್ನು ತಲುಪಿಸುವಲ್ಲಿ ಬಸವರಾಜ ಬೊಮ್ಮಾಯಿ ವಿಫಲರಾದರು.ಓರ್ವ ರಾಜ ಮರ್ಯಾದೆಯನ್ನು ಪಾಕಿಸಬೇಕಿದ್ದ ಮುಖ್ಯಮಂತ್ರಿ ಓಲೈಕೆ ರಾಜಕೀಯ ಮಾಡಿ ಜನರ‌ ಮನಸ್ಸಿನಿಂದ ದೂರವಾಗಿದ್ದರು.

ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಮತ್ತೋರ್ವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಂತಹ ಪ್ರಮುಖ ನಾಯಕರಿಗೂ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡಲ್ ಮಾಡಲ್ ಹೋಗಿ ಎಡವಿ ಬಿತ್ತು.ಇದಲ್ಲದೆ ಜಗದೀಶ್ ಶೆಟ್ಟರ್ ನನಗೆ ಟಿಕೆಟ್ ತಪ್ಪಲು ಸಂತೋಷ್ ಕಾರಣ ಎಂದು ಶೆಟ್ಟರ್ ಹೇಳಿಕೊಂಡಿದ್ದರು.ಇದಲ್ಲವು ಲಿಂಗಾಯುತ ಮತದ ಮೇಲೆ ಪ್ರಭಾವ ಬೀರಿದೆ.

ರಾಜ್ಯ ಬಿಜೆಪಿ ನಾಯಕರು ಸ್ಥಳೀಯ ನಾಯಕರಿಗಿಂತ ಕೇಂದ್ರದ ನಾಯಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ರು.ಅಭಿವೃದ್ದಿ ಬಿಟ್ಟು ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಬಗ್ಗೆ ಹೇಳುತ್ತಿದ್ದರು.ಉತ್ತರ ಪ್ರದೇಶವನ್ನು ಮಾದರಿಯಾಗಿ ತೋರಿಸಿದರು.ಆದರೆ ಜನರಿಗೆ ಉತ್ತರಪ್ರದೇಶದಲ್ಲಿ ನಡೆದ ಸ್ಥಿತಿಗತಿ ಬಗ್ಗೆ ಚೆನ್ನಾಗಿ ಅರ್ಥವಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com